School Holiday: ಮಾರ್ಚ್ 19ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
School Holiday: ಈ ವರ್ಷದ ಅಂದರೆ 2o25ರ ಆರಂಭದಿಂದ ಇಲ್ಲಿಯವರೆಗೂ ಶಾಲಾ-ಕಾಲೇಜುಗಳಿಗೆ ವಿವಿಧ ಕಾರಣಗಳಿಂದ ಸಾಲು ರಜೆಗಳನ್ನೇ ಘೋಷಣೆ ಮಾಡಲಾಗಿದೆ. ಹಾಗೆಯೇ ಇದೀಗ ಮಾರ್ಚ್ 19ರಂದು ರಜೆ ಘೋಷಿಸಲಾಗಿದೆ. ಹಾಗಾದ್ರೆ ಕಾರಣ ಏನು ಹಾಗೂ ಎಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕರ್ನಾಟಕದಲ್ಲಿ ಈ ವರ್ಷದ ಆರಂಭದಿಂದಲೂ ಸರ್ಕಾರ ರಜೆ ಹೊರತುಪಡಿಸಿ ಪ್ರತಿಭಟನೆಗಳು, ವಿಶೇಷ ಕಾರ್ಯಕ್ರಮಗಳ ಹಿನ್ನೆಲೆ ಹಲವೆಡೆ ಸಾಲು ರಜೆಗಳನ್ನೇ ಸಿಕ್ಕಿದ್ದು, ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ರಜೆಗಳ ಹಬ್ಬದೂಟವನ್ನು ಬಡಿಸಿದಂತಾಗಿದೆ. ಇನ್ನೂ ಇದೀಗ ಈ ಭಾಗದಲ್ಲಿ ಮಾರ್ಚ್ 19ರಂದು ಸಾರ್ವಜನಿಕ ರಜೆ ಘೋಷಣೆ ಮಾಡಲಾಗಿದೆ.

ಮಾರ್ಚ್ 19ರಂದು ಮಧ್ಯಪ್ರದೇಶದ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳು, ಬ್ಯಾಂಕ್‌ಗಳು ಮತ್ತು ಕಚೇರಿಗಳು ಮುಚ್ಚಲ್ಪಡುತ್ತವೆ. ಹೋಳಿ ರಜೆಯ ನಂತರ, ಇದೀಗ ಮಧ್ಯಪ್ರದೇಶ ಸರ್ಕಾರವು ಮಾರ್ಚ್ 19ರಂದು ರಜೆಯನ್ನು ಘೋಷಿಸಿದೆ.
ತೀಜ್ ಹಬ್ಬ ಹಿನ್ನೆಲೆ ಮಾರ್ಚ್ 19ರಂದು ಶಾಲೆಗಳು, ಕಾಲೇಜುಗಳು, ಬ್ಯಾಂಕುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಅಲ್ಲದೆ, ಈ ದಿನ ರಾಜ್ಯಾದ್ಯಂತ ರಂಗಪಂಚಮಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಈ ಹಬ್ಬವನ್ನು ಮಧ್ಯಪ್ರದೇಶದ ರಾಜಧಾನಿ ಭೋಪಾಲ್, ಆರ್ಥಿಕ ರಾಜಧಾನಿ ಇಂದೋರ್ ಮತ್ತು ಉಜ್ಜಯಿನಿಯಲ್ಲಿ ಆಚರಣೆ ಮಾಡಲಾಗುತ್ತದೆ.
ಇಂದೋರ್‌ನಲ್ಲಿ ರಂಗಪಂಚಮಿ ಹಬ್ಬವನ್ನು ಗೆರ್ ಹೆಸರಿನಲ್ಲಿ ಆಚರಿಸಲಾಗುತ್ತದೆ. ಇಲ್ಲಿನ ಜನರು ತಮ್ಮ ಮನೆಗಳಿಂದ ಹೊರಬಂದು ಬೀದಿಗಳಲ್ಲಿ ಹೋಳಿ ಆಡುತ್ತಾರೆ. ಆದ್ದರಿಂದ ಈ ದಿನ ನಗರದ ಹಲವು ರಸ್ತೆಗಳಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಲಾಗಿದೆ. ಇದೇ ವೇಳೆ ಉಜ್ಜಯಿನಿಯಲ್ಲಿಯೂ ಜನರು ತಮ್ಮ ಮನೆಗಳಲ್ಲಿ ಹೋಳಿ ಆಡುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಬೇಸಿಗೆ ರಜೆ ಯಾವಾಗಿನಿಂದ?: ಕರ್ನಾಟಕದ ರಾಜ್ಯದಲ್ಲಿ ಈಗಾಗಲೇ ವಿವಿಧ ಹಂತಗಳಲ್ಲಿ ಪರೀಕ್ಷೆಗಳು ಆರಂಭ ಆಗಿವೆ. ಪಿಯುಸಿ ಪರೀಕ್ಷೆಗಳು ಮುಕ್ತಾಯದ ಹಂತದಲ್ಲಿವೆ. 10ನೇ ತರಗತಿ ಪರೀಕ್ಷೆಗಳು ಸದ್ಯದಲ್ಲೇ ಆರಂಭ ಆಗಲಿವೆ. ಇನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿವಿಧ ತರಗತಿಗಳ ಪರೀಕ್ಷೆಗಳು ಶಾಲಾ ಹಂತದಲ್ಲಿ ಆರಂಭ ಆಗಿವೆ.
ಎಸ್‌ಎಸ್‌ಎಲ್‌ಸಿ ಬಿಟ್ಟು ಬಹುತೇಕ ತರಗತಿಗಳ ಎಲ್ಲಾ ಪರೀಕ್ಷೆಗಳೂ ಇದೇ ತಿಂಗಳು ಅಂದರೆ ಮಾರ್ಚ್‌ವೊಳಗೆ ಮುಕ್ತಾಯ ಆಗಲಿವೆ. ಇನ್ನು ಕರ್ನಾಟಕ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಪ್ರಕಾರ, ಈ ವರ್ಷದ ಬೇಸಿಗೆ ರಜೆಗಳು ಬಹುತೇಕ ಏಪ್ರಿಲ್‌ನಲ್ಲಿಯೇ ಆರಂಭ ಆಗಲಿದ್ದು, ಮೇ ಅಂತ್ಯದವರೆಗೂ ರಜೆ ಇರಲಿದೆ.
ಕಳೆದ ವರ್ಷದ ಶೈಕ್ಷಣಿಕ ಅವಧಿಯಲ್ಲಿಯೇ ಹೊರಡಿಸಿದ್ದ ಶಿಕ್ಷಣ ಇಲಾಖೆಯ ಸುತ್ತೋಲೆಯ ಪ್ರಕಾರ, 2025ನೇ ಸಾಲಿನ ಬೇಸಿಗೆ ರಜೆಗಳು ಏಪ್ರಿಲ್ 11ರಿಂದಲೇ ಆರಂಭ ಆಗಲಿದ್ದು, 2025ರ ಮೇ 28ರ ವರೆಗೆ ರಜೆಗಳು ಇರಲಿವೆ ಎನ್ನುವ ಅಪ್ಡೇಟ್ ಮಾಹಿತಿಯೊಂದು ಲಭ್ಯವಾಗಿದೆ.
ಈಗಾಗಲೇ ರಜ್ಯದೆಲ್ಲೆಡೆ ರಣಬಿಸಿಲು ಮುಂದುವರೆದ ಹಿನ್ನೆಲೆ ಮಕ್ಕಳ ಹಿತದೃಷ್ಟಿಯಿಂದ ಯಾವಾಗ ಪರೀಕ್ಷೆಗಳನ್ನು ಮುಗಿಸಿ ರಜೆ ನೀಡಲಾಗುತ್ತದೆ ಎಂದು ಕಾದು ಕುಳಿತ ಪೋಷಕರಿಗೆ ನೆಮ್ಮದಿಯ ಸುದ್ದಿಯೊಂದು ಸಿಕ್ಕಾಂತಾಗಿದೆ. ಮಾಹಿತಿ ಪ್ರಕಾರ, ಈ ವರ್ಷದ ಬೇಸಿಗೆ ರಜೆ ಏಪ್ರಿಲ್ 11ರಿಂದ ಆರಂಭ ಆಗಲಿದ್ದು, ಮೇ 28 ರವರೆಗೆ ರಜೆಗಳು ಇರಲಿವೆ ಎಂದು ತಿಳಿದುಬಂದಿದೆ. ಇನ್ನು ಜೂನ್‌ಗಿಂತ ಮೊದಲೇ ಶಾಲೆಗಳು ಪ್ರಾರಂಭವಾಗುತ್ತವೆ ಎನ್ನಲಾಗುತ್ತಿದೆ.












Click it and Unblock the Notifications