School-Colleges Holiday: ಫೆಬ್ರವರಿ 28ರ ವರೆಗೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
School-Colleges Holiday: 2025ರ ವರ್ಷ ಆರಂಭ ಆದಾಗಿನಿಂದಲೂ ಇಲ್ಲಿವರೆಗೂ ಕೆಲವೆಡೆ ಶಾಲಾ-ಕಾಲೇಜುಗಳಿಗೆ ಸಾಲು ರಜೆಗಳನ್ನೇ ನೀಡಲಾಗಿದೆ. ಇದೀಗ ಮತ್ತೆ ಫೆಬ್ರವರಿ ತಿಂಗಳಾಂತ್ಯದವರೆಗೂ ಹಲವು ಭಾಗಗಳಲ್ಲಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಗಾದರೆ, ಯಾವ್ಯಾವಾಗ, ಎಲ್ಲೆಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಜನವರಿಯಿಂದಲೂ ಕರ್ನಾಟಕದಲ್ಲಿ ಸರ್ಕಾರಿ ರಜೆಗಳನ್ನು ಹೊರತುಪಡಿಸಿ ಪ್ರತಿಭಟನೆಗಳು, ವಿಶೇಷ ಕಾರ್ಯಕ್ರಮಗಳ ವೇಳೆ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಇನ್ನುಳಿದ ರಾಜ್ಯಗಳಲ್ಲಿ ಮಳೆ, ಚಳಿ ಹಿನ್ನೆಲೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತಿಂಗಳುಗಟ್ಟಲ್ಲೇ ರಜೆ ನೀಡಲಾಗಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ರಜೆಗಳ ಹಬ್ಬದೂಟವನ್ನೇ ಬಡಿಸಿದಂತಾಗಿದೆ. ಇದೀಗ ಮತ್ತೆ ಕೆಲವೆಡೆ ಈ ತಿಂಗಳಾಂತ್ಯದವರೆಗೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಲಾಗಿದೆ.

ಫೆಬ್ರವರಿ 23 ಭಾನುವಾರ ರಜೆ ದಿನವಾಗಿದೆ. ಫೆಬ್ರವರಿ 26ರಂದು ಕೂಡ ಮಹಾಶಿವರಾತ್ರಿ ಇರುವುದರಿಂದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಸರ್ಕಾರಿ ಕಚೇರಿಗಳು, ಖಾಸಗಿ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಇರಲಿದೆ. ಇನ್ನು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದ್ದು, ಈ ಹಿನ್ನೆಲೆ ಶಾಲಾ ವಿದ್ಯಾರ್ಥಿಗಳಿಗೆ ಶುಭಸುದ್ದಿಯೊಂದು ಸಿಕ್ಕಿದೆ.
ಮಹಾ ಕುಂಭಮೇಳಕ್ಕೆ ಭಕ್ತರ ದಂಡೇ ಹರಿದುಬರುತ್ತಲೇ ಇದೆ. ಈ ಹಿನ್ನೆಲೆ ಫೆಬ್ರವರಿ 26ರ ವರೆಗೆ 8ನೇ ತರಗತಿಯವರೆಗಿನ ಎಲ್ಲಾ ಶಾಲೆಗಳನ್ನು ಮುಚ್ಚಲು ಪ್ರಯಾಗ್‌ರಾಜ್ ಜಿಲ್ಲಾಡಳಿತ ನಿರ್ಧರಿಸಿದೆ. ರಜೆಯಂತೂ ಇಲ್ಲ, ಬದಲಾಗಿ ಈ ವೇಳೆ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸುವಂತೆ ಸೂಚಿಸಲಾಗಿದೆ. ಆದರೆ, ಶಿಕ್ಷಕರು ಮಾತ್ರ ಶಾಲೆಗೆ ಬರಬೇಕೆಂದು ತಿಳಿಸಿದೆ.
ಈಗಾಗಲೇ ವಾರಣಾಸಿಯಲ್ಲಿ CBSE ಮತ್ತು ICSE ಮಂಡಳಿಯ 1ರಿಂದ 8ನೇ ತರಗತಿಯವರೆಗಿನ ಎಲ್ಲಾ ಶಾಲೆಗಳು ಫೆಬ್ರವರಿ 22ರ ವರೆಗೆ ಮುಚ್ಚಲ್ಪಟ್ಟಿದ್ದು, ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ತರಗತಿಗಳನ್ನು ನಡೆಸಲಾಗಿತ್ತು. ಹಾಗೆಯೇ ಈ ತಿಂಗಳಲ್ಲಿ ತೆಲಂಗಾಣ, ಆಂಧ್ರಪ್ರದೇಶದಲ್ಲಿ 2 ದಿನಗಳ ರಜೆಯನ್ನು ಘೋಷಣೆ ಮಾಲಾಗಿದೆ.
ಆಂಧ್ರಪ್ರದೇಶದಲ್ಲಿ ವಿಧಾನ ಪರಿಷತ್ ಚುನಾವಣೆಗಳ ಹಿನ್ನೆಲೆ ಫೆಬ್ರವರಿ 27ರಂದು ಗುಂಟೂರು, ಶ್ರೀಕಾಕುಳಂ, ವಿಜಯನಗರಂ ಮತ್ತು ವಿಶಾಖಪಟ್ಟಣಂ ಸೇರಿದಂತೆ ಇಲ್ಲಿನ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚಲಾಗುತ್ತದೆ. ಫೆಬ್ರವರಿ 26 ಮತ್ತು 27ರಂದು ತೆಲಂಗಾಣದಲ್ಲಿ ಶಾಲೆಗಳು ಮುಚ್ಚಲ್ಪಡಲಿದ್ದು, ಈ ರಜೆ ರಾಜ್ಯಾದ್ಯಂತ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸುತ್ತದೆ ಎಂದು ತಿಳಿದುಬಂದಿದೆ.
ಫೆಬ್ರವರಿ 28ರ ವರೆಗೆ ರಜೆ ಘೋಷಣೆ: ಜಮ್ಮು ಮತ್ತು ಕಾಶ್ಮೀರದಲ್ಲಿ ಫೆಬ್ರವರಿ 28, 2025ರವರೆಗೆ 1ರಿಂದ 12ನೇ ತರಗತಿಯವರೆಗಿನ ಶಾಲೆಗಳು ಮುಚ್ಚಲ್ಪಡಲಿದ್ದು, ಮತ್ತೆ ಮಾರ್ಚ್‌ನಲ್ಲಿ ಮಾರ್ಚ್‌ನಲ್ಲಿ ತೆರೆಯಲಿವೆ. ಫೆಬ್ರವರಿ 26ರ ಬುಧವಾರದಂದು ಮಹಾಶಿವರಾತ್ರಿಯ ಹಬ್ಬದ ಸಂದರ್ಭದಲ್ಲಿ, ಪಂಜಾಬ್ ಸರ್ಕಾರವು ಸರ್ಕಾರಿ ಕಚೇರಿಗಳು, ಎಲ್ಲಾ ಶಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.
ಉತ್ತರ ಪ್ರದೇಶದಲ್ಲಿಯೂ ಅಲ್ಲಿನ ಶಿಕ್ಷಣ ಮಂಡಳಿಯ ರಜಾ ವೇಳಾಪಟ್ಟಿಯ ಪ್ರಕಾರ, ಫೆಬ್ರವರಿ 26ರಂದು 1ರಿಂದ 8ನೇ ತರಗತಿಯವರೆಗಿನ ಶಾಲೆಗಳಿಗೆ ರಜೆ ಇರುತ್ತದೆ. ಫೆಬ್ರವರಿ 23 ಭಾನುವಾರ ಆದ್ದರಿಂದ ಶಾಲಾ-ಕಾಲೇಜುಗಳು ಮುಚ್ಚಲ್ಪಡುತ್ತವೆ ಎಂದು ತಿಳಿದುಬಂದಿದೆ.












Click it and Unblock the Notifications