32 ಮಹಿಳಾ ಐಎಎಫ್ ಅಧಿಕಾರಿಗಳಿಗೆ ಪಿಂಚಣಿ ನೀಡಲು ಸುಪ್ರೀಂ ಸೂಚನೆ
ನವದೆಹಲಿ, ನ.17: ಭಾರತೀಯ ವಾಯುಪಡೆಯಲ್ಲಿ (ಐಎಎಫ್) ಮರುಸೇರ್ಪಡೆ ಮತ್ತು ಖಾಯಂ ಆಯೋಗ ಪಡೆಯಲು 12 ವರ್ಷಗಳ ಕಾಲ ಹೋರಾಡಿದ ಮಹಿಳಾ ಅಧಿಕಾರಿಗಳಿಗೆ ಪಿಂಚಣಿ ನೀಡುವಂತೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ನೇತೃತ್ವದ ಸುಪ್ರೀಂಕೋರ್ಟ್ ಪೀಠವು 32 ಮಹಿಳಾ ಅಧಿಕಾರಿಗಳಿಗೆ ಪೂರ್ಣ ಪಿಂಚಣಿ ನೀಡುವಂತೆ ಸರ್ಕಾರಕ್ಕೆ ಆದೇಶಿಸಿದೆ. ಖಾಯಂ ಆಯೋಗಕ್ಕೆ ಅವಕಾಶ ನೀಡುವಂತೆ ಭಾರತೀಯ ವಾಯುಪಡೆಯ 32 ಮಹಿಳೆಯರು 12 ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ ಎಂದು ಚಂದ್ರಚೂಡ್ ಹೇಳಿದ್ದಾರೆ.
ಈ ಪೂರ್ಣ ಪಿಂಚಣಿಯು 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಸಮಾನವಾಗಿರುತ್ತದೆ.
ಈ ಅಧಿಕಾರಿಗಳಲ್ಲಿ ಮೂವರು ಅಧಿಕಾರಿಗಳು ವಿಧವೆಯರಾಗಿದ್ದು, ಅವರು ದೇಶ ಸೇವೆಯಲ್ಲಿ ತಮ್ಮ ಪತಿಯನ್ನು ಕಳೆದುಕೊಂಡಿದ್ದಾರೆ. ಬಳಿಕ ಅನುಕಂಪದ ಆಧಾರದ ಮೇಲೆ ಆಯೋಗಕ್ಕೆ ಸೇರಿಸಲಾಗಿದೆ.

ತಮ್ಮ ಆದೇಶದಲ್ಲಿ ಸುಪ್ರೀಂ ಕೋರ್ಟ್ 2020 ರ ಬಬಿತಾ ಪುನಿಯಾ ತೀರ್ಪನ್ನು ಉಲ್ಲೇಖಿಸಿದೆ. ಈ ತೀರ್ಪಿನಲ್ಲಿ ಸಶಸ್ತ್ರ ಪಡೆಗಳು ತಾರತಮ್ಯದ ನೇಮಕಾತಿ ಅಥವಾ ನೇಮಕಾತಿ ಅಭ್ಯಾಸಗಳನ್ನು ಹೊಂದಿವೆ ಎಂದು ಹೇಳಲಾಗಿದ್ದು, ಅವರು ಅರ್ಹರಾಗಿದ್ದ ಸ್ಥಾನಗಳಿಂದ ಹೊರಗಿಡಲಾಗಿದೆ ಎಂದು ತಿಳಿಸಿತ್ತು.
ಬುಧವಾರದ ಸುಪ್ರೀಂಕೋರ್ಟ್ ಆದೇಶವು ಸಶಸ್ತ್ರ ಪಡೆಗಳಿಗೆ ಮಹಿಳಾ ಅಧಿಕಾರಿಗಳ ಸೇರ್ಪಡೆ ಹೆಚ್ಚಳಕ್ಕೆ ದಾರಿ ಮಾಡಿಕೊಟ್ಟಿದೆ. ಈಗ ಮಹಿಳೆಯರು ಕೂಡ ಸಂಪೂರ್ಣವಾಗಿ ತಮ್ಮ ವೃತ್ತಿಜೀವನವನ್ನು ಪೂರೈಸುವ ಆಯ್ಕೆ ಹೊಂದಿದ್ದಾರೆ. ಈ ಮೊದಲು ಇದು ಗರಿಷ್ಠ 10 ಅಥವಾ 14 ವರ್ಷಗಳವರೆಗೆ ಇತ್ತು.












Click it and Unblock the Notifications