ಚಿತ್ರಗಳಲ್ಲಿ ದುರ್ಗಾ ಪೂಜೆ ಹಬ್ಬದ ವಿಶೇಷ
ಕೋಲ್ಕತ್ತಾ, ಅ.7: 'ಯಾ ದೇವಿ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ, ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ 'ಈ ವಾಕ್ಯದ ನೈಜ ಅರ್ಥ ತಿಳಿಯಬೇಕಾದರೆ ಪಶ್ಚಿಮ ಬಂಗಾಳಕ್ಕೆ ಬರಬೇಕು. ಪ್ರತಿಯೊಬ್ಬ ಮಹಿಳೆಯೂ ಶಕ್ತಿ ಸ್ವರೂಪಳಾಗಿದ್ದಾಳೆ. ಅಂತಃಶಕ್ತಿಯನ್ನು ಪ್ರಕಟಗೊಳಿಸಿ ದುಷ್ಟಶಕ್ತಿಯ ವಿರುದ್ಧ ಹೋರಾಟಳು ಸ್ವಸಮರ್ಥಳು ಎಂಬ ಆಶಯದೊಂದಿಗೆ ನವರಾತ್ರಿಯ ದುರ್ಗಾಪೂಜೆ ಆರಂಭಗೊಂಡಿದೆ. ಈ ಬಾರಿ ಹಬ್ಬದ 'ಥೀಮ್' ಸಮಾಜ ಪರಿವರ್ತನೆಗೆ ನಾರಿಶಕ್ತಿ ಎಂಬುದಾಗಿದೆ.
ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ ಎಂಬ ಒಂಭತ್ತು ರೂಪದಲ್ಲಿ ಶಕ್ತಿ ಸ್ವರೂಪಳಾದ ದೇವಿಯನ್ನು ಆರಾಧಿಸಲಾಗುತ್ತದೆ. ಕೋಲ್ಕತ್ತಾದಲ್ಲಿ ವಿಧವೆಯರಿಂದಲೂ ದುರ್ಗಾ ಪೂಜೆ ನಡೆಯುತ್ತದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಮ್ಮ ಸ್ವಗ್ರಾಮಕ್ಕೆ ತೆರಳಿ ಪ್ರತಿವರ್ಷದಂತೆ ಈ ವರ್ಷಕೂಡಾ ಪೂಜೆ ಸಲ್ಲಿಸಲು ಅಣಿಯಾಗಿದ್ದಾರೆ.
ಒಂಬತ್ತು ದಿನಗಳಲ್ಲಿ ಶಕ್ತಿಯನ್ನು ಆರಾಧಿಸುವುದರಿಂದ ದುಷ್ಟ ಶಕ್ತಿಗಳನ್ನು ಸಂಹಾರ ಮಾಡಲಾಗುತ್ತದೆ. ಸಾರ್ವಜನಿಕ ಗಣೇಶೋತ್ಸವ ನಂತರ ಮುಂಬೈನಲ್ಲಿ ಕೋಲ್ಕತ್ತಾದಂತೆ ಬೃಹತ್ ಆಕಾರದ ದುರ್ಗಾ ಮಾತೆಯ ಮೂರ್ತಿಗಳನ್ನು ಪೆಂಡಾಲ್ ಗಳಲ್ಲಿ ಸ್ಥಾಪಿಸಿ ಹಬ್ಬದ ಆಚರಣೆ ಸಂಭ್ರಮ ಕಾಣಲಾಗುತ್ತದೆ.
ಉಳಿದಂತೆ ದೇಶದ ವಿವಿಧ ಭಾಗಗಳಲ್ಲಿ ಪ್ರಮುಖವಾಗಿ ಗುಜರಾತ್ , ಮುಂಬೈ, ಮಧ್ಯಪ್ರದೇಶ, ಕರ್ನಾಟಕ, ರಾಜಸ್ಥಾನ ಹಾಗೂ ಪಂಜಾಬಿನಲ್ಲಿ ನವರಾತ್ರಿಯ ಸಂದರ್ಭಗಳಲ್ಲಿ ಉಪವಾಸ, ದೇವಿ ಮಂದಿರಗಳಲ್ಲಿ ಪೂಜೆಕಾರ್ಯಗಳು ವಿಶೇಷವಾಗಿರುತ್ತವೆ. ವಿಶೇಷವೆಂದರೆ ಜಮ್ಮು ಕಾಶ್ಮೀರದಲ್ಲೂ ನವರಾತ್ರಿ ಪೂಜೆ ನೃತ್ಯ ನಡೆಯಲಿದೆ. ದೇಶದೆಲ್ಲೆಡೆಯ ಸಂಭ್ರಮಾಚರಣೆ ಆರಂಭಗೊಂಡಿದ್ದು ಒಂದಷ್ಟು ಚಿತ್ರಗಳು ಇಲ್ಲಿದೆ ತಪ್ಪದೇ ನೋಡಿ...

ಕೋಲ್ಕತ್ತಾದ ದುರ್ಗೆ
ಮಹಿಷಾಸುರ ಮರ್ದಿನಿ ಅವತಾರದಲ್ಲಿರುವ ದುರ್ಗಾ ಮಾತೆಯ ವಿಗ್ರಹಗಳು ಕೋಲ್ಕತ್ತಾದಲ್ಲಿ ಬಹುಜನಪ್ರಿಯ. ತಾತ್ಕಾಲಿಕ ಪೆಂಡಾಲ್ ಗಳನ್ನು ಎಲ್ಲೆಡೆ ಹಾಕಲಾಗುತ್ತದೆ ಎರಡು ಸಾವಿರಕ್ಕೂ ಅಧಿಕ ಪೆಂಡಾಲ್ ಗಳನ್ನು ಕಾಣಬಹುದು.

ರಂಗು ರಂಗಿನ ಪೆಂಡಾಲ್
ಪ್ರತಿ ಪೆಂಡಾಲ್ ಕೂಡಾ ಪ್ರತ್ಯೇಕ ಆಶಯಗಳೊಂದಿಗೆ ವಿನ್ಯಾಸಗೊಳಿಸಲಾಗಿರುತ್ತದೆ. ಈ ಬಾರಿ ಸ್ತ್ರೀಶಕ್ತಿ ಬಗ್ಗೆ ಹೆಚ್ಚಿನ ಪೆಂಡಾಲ್ ಗಳು ಕಾಣಿಸಲಿದೆ. ಉತ್ತಮ ಪೆಂಡಾಲ್ ಗೆ ಬಹುಮಾನ ಕೂಡಾ ಉಂಟು.
ಬಾಗ್ ಬಜಾರ್, ಕಾಲೇಜ್ ಸ್ಕ್ವಯರ್, ಕುಮರ್ಟುಲಿ ಪಾರ್ಕ್, ಸಂತೋಷ್ ಮಿತ್ರ ವೃತ್ತ, ಸುರುಚಿ ಸಂಘ ಮುಂತಾದ ಕಡೆಯ ಪೆಂಡಾಲ್ ಜನಪ್ರಿಯ

ದೇವಿಯ ಆಕೃತಿ
ಕುಂಬಾರರ ಕಲೆಯಿಂದ ಮೈದಳೆಯುವ ಮಾತೆಯ ಚಿತ್ರಗಳು ವಿಶೇಷವಾಗಿ ಪ್ರವಾಸಿಗರ ಗಮನ ಸೆಳೆಯುತ್ತದೆ.

ಪಶ್ಚಿಮ ಬಂಗಾಳದ ಇತರೆಡೆ
ಬಿರ್ಬಮ್ ಹಾಗೂ ಬಂಕುರಾ ಜಿಲ್ಲೆಗಳಲ್ಲಿ ದುರ್ಗಾ ಪೂಜೆ ವಿಶೇಷವಾಗಿ ಆಚರಿಸಲಾಗುತ್ತದೆ. ಸಾಂಸ್ಖೃತಿಕ ಕಾರ್ಯಕ್ರಮಗಳ ಜತೆಗೆ ವಿವಿಧ ಕರ ಕುಶಲ ಕಲೆಗಳ ಪರಿಚಯ ಕೂಡಾ ಪ್ರವಾಸಿಗರಿಗೆ ಸಿಗುತ್ತದೆ.

ದುರ್ಗೆ ವಿಸರ್ಜನೆ
ನವರಾತ್ರಿಯ ಮುಕ್ತಾಯ ದಿನದಂದು ದುರ್ಗಾ ಮಾತೆಯ ವಿಗ್ರಹವನ್ನು ಮೆರವಣಿಗೆ ಮೂಲಕ ಹೂಗ್ಲಿ ನದಿಗೆ ಕರೆತರಲಾಗುತ್ತದೆ. ಗಣೇಶ ಉತ್ಸವದ ಮಾದರಿಯಲ್ಲಿ ಹಾಡು ನೃತ್ಯದ ಮೂಲಕ ದುರ್ಗಾ ವಿಗ್ರಹವನ್ನು ನೀರಿನಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ಮೋದಿ ಆರತಿ
ಅಹಮದಾಬಾದ್ : ನವರಾತ್ರಿ ಪೂಜೆ ಸಂದರ್ಭದಲ್ಲಿ ಆರತಿ ಬೆಳಗುತ್ತಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ

ನವರಾತ್ರಿ ಸಂಭ್ರಮ
ಬಿರ್ಬಮ್ : ಯುವತಿಯರು ಬಣ್ಣಗಳನ್ನು ಎರಚುತ್ತಾ ಬಸಂತಿ ಪೂಜಾ ಹಬ್ಬವನ್ನು ಆಚರಣೆ ಮಾಡಿದ್ದಾರೆ. ದುರ್ಗಾ ಮಾತೆಯ ಮೆರವಣಿಗೆ ಕೂಡಾ ನಡೆಸಲಾಗಿದೆ.

ಬಣ್ಣದ ಗಾಡಿ
ಕೋಲ್ಕತ್ತಾ: ಪಾಕಿಸ್ತಾನಿ ಕಲಾವಿದ ಹೈದರ್ ಅಲಿ(ಬಲಗಡೆ) ಅವರು ವಸ್ತು ಪ್ರದರ್ಶನವೊಂದರಲ್ಲಿ ದಸದಾ ಬೊಂಬೆ ರೂಪದ ಬಣ್ಣದ ಗಾಡಿಗಳ ಪ್ರತಿರೂಪಗಳನ್ನು ನೋಡುತ್ತಿದ್ದಾರೆ. ದುರ್ಗಾ ಪೂಜೆ ಪೆಂಡಾಲ್ ಗಳಿಗೆ ಬಣ್ಣದ ಚಿತ್ತಾರ ನೀಡಲು ಅಲಿ ಬಂದಿದ್ದಾರೆ.

ಸಿಎಂರಿಂದ ಪೂಜೆ
ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದುರ್ಗಾ ಪೂಜೆ ಉದ್ಘಾಟನೆ ಮಾಡಿದರು.

ಸಿಎಂರಿಂದ ಪೂಜೆ
ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದುರ್ಗಾ ಪೂಜೆ ಉದ್ಘಾಟನೆ

ವಿಧವೆಯರಿಂದ ಪೂಜೆ
ಕೋಲ್ಕತ್ತಾ : ವೃಂದಾವನದಿಂದ ಬಂದ ವಿಧವೆಯರು ಪೆಂಡಾಲ್ ಬಳಿ ದುರ್ಗಾ ಪೂಜೆ ನಿರತರಾಗಿದ್ದಾರೆ. PTI Photo by Ashok Bhaumik

ವಿಧವೆಯರಿಂದ ಪೂಜೆ
ಕೋಲ್ಕತ್ತಾ : ವೃಂದಾವನದಿಂದ ಬಂದ ವಿಧವೆಯರು ಪೆಂಡಾಲ್ ಬಳಿ ದುರ್ಗಾ ಪೂಜೆ

ಸಂಭ್ರಮದ ನಡುವೆ
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಪಡಿತರ ವಿತರಣೆ ಕೇಂದ್ರದ ಹೊರಗಡೆ ಸೀಮೆಎಣ್ಣೆಗಾಗಿ ಕ್ಯೂನಲಿ ನಿಂತಿದ್ದಾರೆ. ದುರ್ಗಾ ಪೂಜೆ ಅಂಗವಾಗಿ ಮಮತಾ ಸರ್ಕಾರ ಸಬ್ಸಿಡಿ ದರದಲ್ಲಿ ಹೆಚ್ಚು ಸೀಮೆಎಣ್ಣೆ ವಿತರಿಸುತ್ತಿದೆ.

ನವರಾತ್ರಿ ನೃತ್ಯ
ಜಮ್ಮು: ನವರಾತ್ರಿ ಮೊದಲ ದಿನದ ಜಮ್ಮುವಿನಿಂದ 45 ಕಿ.ಮೀ ದೂರದಲ್ಲಿರುವ ಕತ್ರಾದಲ್ಲಿ ಸಾಂಪ್ರದಾಯಿಕ ನೃತ್ಯ ಮೆರವಣಿಗೆ ನಡೆಯಿತು

ಪೆಂಡಾಲ್ ಕಡೆಗೆ
ಕೋಲ್ಕತ್ತಾ: ದುರ್ಗಾ ಮಾತೆ ಮೂರ್ತಿಗಳನ್ನು ಪೂಜೆಗಾಗಿ ಪೆಂಡಾಲ್ ಕಡೆಗೆ ಕರೆದೊಯ್ಯಲಾಗುತ್ತಿದೆ. PTI Photo by Ashok Bhaumik

ಸಂಭ್ರಮದಲ್ಲಿ ಗವರ್ನರ್
ಪಶ್ಚಿಮ ಬಂಗಾಳದ ರಾಜ್ಯಪಾಲ ಎಂಕೆ ನಾರಾಯಣನ್ ಅವರು ಡ್ರಮ್ ಬಾರಿಸಿ ದುರ್ಗಾ ಪೂಜೆ ಉದ್ಘಾಟಿಸಿದ್ದಾರೆ.

ಇಂದೋರ್ ನಲ್ಲಿ
ನವರಾತ್ರಿ: 2 ಕಿ.ಮೀ ಉದ್ದದ ಚುನ್ರಿ(ಬಟ್ಟೆ) ಯನ್ನು ಹಿಡಿದು ದೇಗುಲದ ಕಡೆ ಸಾಗಿರುವ ಭಕ್ತರು

ಸರ್ವಶಕ್ತಿ ದುರ್ಗೆ
'ಯಾ ದೇವಿ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ, ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ '











Click it and Unblock the Notifications