ಕತುವಾ ಬಾಲಕಿ ಅತ್ಯಾಚಾರ: ಮಾಧ್ಯಮಕ್ಕೆ ವಕೀಲರ ಪ್ರತಿಕ್ರಿಯೆ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 17: ದೇಶದಲ್ಲಿ ನೀರಿನ ಹಾಹಾಕಾರ ಉಂಟಾಗುವ ದಿನಗಳು ದೂರವಿಲ್ಲ ಎಂಬ ಆತಂಕಕಾರಿ ಅಂಶ ಒಂದು ಸಮೀಕ್ಷೆ ನಂತರ ಬಹಿರಂಗಗೊಂಡಿದೆ. ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ ಈಗಾಗಲೇ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಬಿಂದಿಗೆ ನೀರಿಗಾಗಿ ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲುವ ಪರಿಸ್ಥಿತಿ ಈಗಾಗಲೇ ನಿರ್ಮಾಣವಾಗಿದೆ.

ಇದಿನ್ನೂ ಬೇಸಿಗೆ ಪ್ರಾರಂಭ ಮಳೆಗಾಲ ಪ್ರಾರಂಭವಾಗಲು ಇನ್ನೂ ಎರಡು ತಿಂಗಳುಗಳು ಕಾಯಲೇ ಬೇಕು, ಅಲ್ಲಿಯವರೆಗೆ ಮನುಷ್ಯರಷ್ಟೇ ಅಲ್ಲದೆ ಪ್ರಾಣಿ ಪಕ್ಷಿಗಳು ಕಡೆಯೂ ಸ್ವಲ್ಪ ಆಲೋಚಿಸಬೇಕಿದೆ. ಎಷ್ಟೋ ಕಡೆಗಳಲ್ಲಿ ನೀರಿಲ್ಲದೆ, ಮೇವಿಲ್ಲದೆ ಹಸುಗಳು ಅಸುನೀಗುತ್ತಿವೆ.

ಕತುವಾ ಅತ್ಯಾಚಾರ ಖಂಡಿಸಿ ದೇಶ್ಯಾದ್ಯಂತ ತೀವ್ರಗೊಂಡ ಹೋರಾಟ:ಚಿತ್ರಗಳು

ಪರಿಸರ ರಕ್ಷಣೆಗಾಗಿ ದೇಶಾದ್ಯಂತ ಎಲ್ಲ ಮುಖ್ಯವಾಹಿನಿಯ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಏನೆಲ್ಲ ಸರ್ಕಸ್ ಮಾಡುತ್ತಿವೆ. ಉಪಗ್ರಹ ಒದಗಿಸಿರುವ ಹೊಸ ಸಾಕ್ಷ್ಯಗಳು ಭಾರತವೂ ಸೇರಿದಂತೆ ಏಷ್ಯಾದ ಕೆಲ ರಾಷ್ಟ್ರಗಳಲ್ಲಿ ನದಿಗಳು ಬತ್ತಿ ಹೋಗುತ್ತಿರುವುದನ್ನು ದೃಢಪಡಿಸಿವೆ.

ಸ್ಯಾಟಲೈಟ್ ಅಧ್ಯಯನ ನಡೆಸುತ್ತಿರುವ ಜಗತ್ತಿನ 5 ಲಕ್ಷ ಜಲಾಶಯಗಳ ಪೈಕಿ ಭಾರತದದ ಜಲಾಶಯಗಳು ಅತ್ಯಂತ ವೇಗವಾಗಿ ಬತ್ತುತ್ತಿವೆ ಹೀಗಾಗಿ ಭಾರತಕ್ಕೆ ಜಲಶೂನ್ಯದ ದಿನಗಳು ತೀರಾ ಹತ್ತಿರವಾಗಿವೆ ಎಂದು ವರದಿಗಳು ಎಚ್ಚರಿಕೆ ನೀಡಿವೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಯಾವುದೇ ಪೂರಕ ಯೋಜನೆಗಳು ರೂಪುಗೊಂಡಿಲ್ಲ ಎಂದು ವಿಶ್ವ ಜಲಮೂಲಗಳ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಅಮೇರಿಕ ಮೂಲದ ಈ ಸಂಸ್ಥೆ ಜಗತ್ತಿನ ನೀರಿಗೆ ಸಂಬಂಧಿಸಿದ ವಿಚಾರಗಳ ಕುರಿತಾಗಿ ಅಧ್ಯಯನ ನಡೆಸುತ್ತಿದೆ.ವಿಶ್ವದ ಆರ್ಥಿಕ ಸಾಮಾಜಿಕ ಪರಿಸ್ಥಿತಿ ಮೇಲೆ ಆಗುತ್ತಿರುವ, ನೀರಿನ ಕೊರತೆಯ ಪರಿಣಾಮವನ್ನು ತಗ್ಗಿಸಲು ಡಬ್ಲ್ಯೂ ಆರ್ ಐ ರಾಜ್ಯ ಸರ್ಕಾರದ ಜತೆ ಕೆಲಸ ಮಾಡುತ್ತಿದ್ದು, ಜನರ ವಲಸೆ ಹೋಗುವ ಪ್ರವೃತ್ತಿಯನ್ನು ತಪ್ಪಿಸಲು ಕೂಡ ಪ್ರಯತ್ನಿಸುತ್ತಿದೆ.

ರಾಜಸ್ತಾನದಲ್ಲಿ ಪ್ರಾರಂಭವಾಗಿದೆ ನೀರಿನ ಅಭಾವ

ರಾಜಸ್ತಾನದಲ್ಲಿ ಪ್ರಾರಂಭವಾಗಿದೆ ನೀರಿನ ಅಭಾವ

ರಾಜಸ್ತಾನದಲ್ಲಿ ಬಿಸಿಲ ಧಗೆಗೆ ಇರುವ ಜಲವೆಲ್ಲವೂ ಬತ್ತಿ ಹೋಗಿದೆ. ಒಂದು ಬಿಂದಿಗೆ ನೀರೂ ಸಿಗದೆ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಸ್ತಾನದ ಹೊರವಲಯವಾದ ಅಜ್ಮರ್ ನಲ್ಲಿ ರಸ್ತೆ ಬದಿಯಲ್ಲಿ ನೀರು ಕೊಂಡೊಯ್ಯಲು ಕಾದು ನಿಂತಿರುವ ಮಹಿಳೆಯರು.

ರಂಗೋಲಿ ಬಿಹು ಅಂಗವಾಗಿ ನಡೆದ ನೃತ್ಯ ಸಂಭ್ರಮ

ರಂಗೋಲಿ ಬಿಹು ಅಂಗವಾಗಿ ನಡೆದ ನೃತ್ಯ ಸಂಭ್ರಮ

ಅಸ್ಸಾಮಿನ ಹೊಸ ವರ್ಷವಾದ ರಂಗೋಲಿ ಬಿಹು ಅಂಗವಾಗಿ ಶಿವಸಾಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಾಯಕ ಮನಸ್ ಅವರ ಹಾಡಿಗೆ ಅಸ್ಸಾಂ ನಟಿ ಅಮೃತಾ ಗೊಗಾಯ್ ನೃತ್ಯ ಪ್ರದರ್ಶಿಸಿದರು.

ಕತುವಾ ಬಾಲಕಿ ಕುಟುಂಬಕ್ಕೆ ನ್ಯಾಯಕೊಡಿಸಿ

ಕತುವಾ ಬಾಲಕಿ ಕುಟುಂಬಕ್ಕೆ ನ್ಯಾಯಕೊಡಿಸಿ

ಕತುವಾ ಜಿಲ್ಲೆಯಲ್ಲಿ ನಡೆದ 8 ವರ್ಷದ ಬಾಲಕಿಯ ಅಪಹರಣ ಮಾಡಿ ಅತ್ಯಾಚಾರವೆಸಗಿ ಕೊಲೆ ಮಾಡಿರೋ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಮೃತ ಬಾಲಕಿಯ ಕುಟುಂಬಕ್ಕೆ ನ್ಯಾಯ ಒದಗಿಸಲು ಇಡೀ ದೇಶವೇ ಆಗ್ರಹಿಸುತ್ತಿದೆ. ಬಾಲಕಿಯ ಸಾವಿನ ನ್ಯಾಯಕ್ಕಾಗಿ ಕೇಳಿ ಬರುತ್ತಿರುವ ಧ್ವನಿ ಜೋರಾಗಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಜಮ್ಮುವಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕಾವು ಅಲ್ಲಿನ ಸರ್ಕಾರಕ್ಕೆ ಜೋರಾಗಿಯೇ ಬಿಸಿ ಮುಟ್ಟಿದೆ.ಶ್ರೀನಗರ, ಬೆಂಗಳೂರು, ಚೆನ್ನೈ, ಅಮೃತಸರ ಇನ್ನಿತರೆ ಪದೇಶಗಳಲ್ಲಿ ಪ್ರತಿಭಟನೆ ಕಾವು ಹೆಚ್ಚಾಗಿದೆ.

ಮದುವೆಗಾಗಿ ಸಿಂಗಾರಗೊಂಡಿರುವ ಮದುಮಗಳು

ಮದುವೆಗಾಗಿ ಸಿಂಗಾರಗೊಂಡಿರುವ ಮದುಮಗಳು

ಊಟಿಯಲ್ಲಿರುವ ತೋಡಾ ಬುಡಕಟ್ಟು ಸಮುದಾಯದಲ್ಲಿ ಪ್ರತಿಯೊಂದು ಆಚರಣೆಯೂ ವಿಭಿನ್ನ, ಅವರ ಉಡುಗೆ ತೊಡುಗೆಗಳು, ವೇಷಭೂಷಣಗಳು ಎಲ್ಲವೂ ಭಿನ್ನವಾಗಿರುತ್ತದೆ. ತೋಡಾ ಸಮುದಾಯದ ಯುವತಿಯೊಬ್ಬಳು ಮದುವೆಗೆ ಸಿಂಗಾರಗೊಂಡಿರುವ ದೃಶ್ಯವನ್ನು ನೀವು ನೋಡಬಹುದು.

ವಕೀಲೆ ದೀಪಿಕಾ ಸಿಂಗ್ ಮಾದ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸಂದರ್ಭ

ವಕೀಲೆ ದೀಪಿಕಾ ಸಿಂಗ್ ಮಾದ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸಂದರ್ಭ

ಜನವರಿ ತಿಂಗಳಿನಲ್ಲಿ ಕತುವಾದ ಎಂಟು ವರ್ಷದ ಮಗುವನ್ನು ಅಪಹರಿಸಿ, ಅದಕ್ಕೆ ಮತ್ತು ಬರುವ ಔಷಧ ನೀಡಿ ಹಲವು ದಿನಗಳ ಕಾಲ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಆಕೆಯನ್ನು ಕೆಲ ದಿನಗಳ ಕಾಲ ಹತ್ತಿರದ ದೇವಾಲಯವೊಂದರಲ್ಲಿ ಇರಿಸಿಕೊಳ್ಳಲಾಗಿತ್ತು ಎಂಬುದೂ ಆರೋಪ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಂಟು ಜನರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದ ಕುರಿತು ಕತುವಾ ಅತ್ಯಾಚಾರ ಸಂತ್ರಸ್ತೆ ಪರ ವಕೀಲೆ ದೀಪಿಕಾ ಸಿಂಗ್ ಸುಪ್ರೀಂಕೋರ್ಟ್ ಮುಂಭಾಗ ಮಾಧ್ಯಮಕ್ಕೆ ಪ್ರತಿಕ್ರಿಯಿಸುತ್ತಿರುವುದು.

ಅತ್ಯಾಚಾರ ವಿರೋಧಿಸಿ ಕ್ಯಾಂಡಲ್ ಲೈಟ್ ಮಾರ್ಚ್

ಅತ್ಯಾಚಾರ ವಿರೋಧಿಸಿ ಕ್ಯಾಂಡಲ್ ಲೈಟ್ ಮಾರ್ಚ್

ಕತುವಾ ಹಾಗೂ ಉನ್ನಾವೋ ಅತ್ಯಾಚಾರ ವಿರೋಧಿಸಿ, ವಿದ್ಯಾರ್ಥಿಗಳು ದೆಹಲಿಯ ವಿಶ್ವವಿದ್ಯಾಲಯ ಮೆಟ್ರೋ ಸ್ಟೇಷನ್ ಮುಂಭಾಗ ಕ್ಯಾಂಡಲ್ ಲೈಟ್ ಮಾರ್ಚ್ ನಡೆಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದರು.

ರೈತರೊಂದಿಗೆ ಸಂವಾದ

ರೈತರೊಂದಿಗೆ ಸಂವಾದ

ಅಮೇಥಿಯ ಚೌಪಲ್ ಗ್ರಾಮದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರೈತರೊಂದಿಗೆ ಸಂವಾದ ನಡೆಸಿದರು. ರೈತರ ತೊಂದರೆಗಳನ್ನು ಆಲಿಸಿದ ಸಂದರ್ಭ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Satellite study has revealed that the reservoirs in India and states like Rajasthan and Madhya Pradesh have already hit by drought even before summer season.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ