ಸೀರೆಗೆ ಸೀರೆನೇ ಸಾಟಿ! ಟ್ವಿಟ್ಟರ್ ನಲ್ಲಿ ಸೀರೆಯಲ್ಲಿ ಮಿಂಚಿದ ನೀರೆಯರು
ನವದೆಹಲಿ, ಜುಲೈ 16: ಸೋಮವಾರ ಮತ್ತು ಮಂಗಳವಾರ ಅಚ್ಚರಿ ಎಂಬಂತೆ ಟ್ವಿಟ್ಟರ್ ನಲ್ಲಿ #SareeTwitter ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ. ನೀರೆಯರು ಸೀರೆಯಲ್ಲಿ ತಮ್ಮಿಷ್ಟದ ಚಿತ್ರವನ್ನು ಈ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಪೋಸ್ಟ್ ಮಾಡಿ ಸಂತಸ ಪಡುತ್ತಿದ್ದಾರೆ.
ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಸೀರೆಯಲ್ಲಿ ತಮ್ಮ ಕೆಲವು ಚಿತ್ರಗಳನ್ನು ಟ್ವೀಟ್ಟರ್ ನಲ್ಲಿ ಪೋಸ್ಟ್ ಮಾಡಿ, 'ಈ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಟ್ವೀಟ್ ಮಾಡದೆ ಇರುವುದಕ್ಕೆ ನನge ಸಾಧ್ಯವಾಗಲಿಲ್ಲ' ಎಂದಿದ್ದಾರೆ.
ಬಿಜೆಪಿ ವಕ್ತಾರೆ ನೂಪುರ ಶರ್ಮಾ ಅವರೂ ಸೀರೆಯಲ್ಲಿರುವ ತಮ್ಮ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ನಟಿ ನಗ್ಮಾ, ಪತ್ರಕರ್ತೆ ಬರ್ಖಾ ದತ್, ಹೈದರಾಬಾದಿನಲ್ಲಿರುವ ಅಮೆರಿಕ ಕೌನ್ಸಲ್ ಜನರಲ್ ಕ್ಯಾಥರಿನ್ ಹಡ್ಡ, ಕರ್ನಾಟಕದ ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್, ಅಂಕಣಕಾರ್ತಿ ಅಮೃತಾ ಭಿಂದರ್, ನಟಿ ಯಾಮಿ ಗೌತಮ್ ಸೆರಿದಂತೆ ಹಲವರು ತಮ್ಮ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

"ನಮ್ಮ ಸಂಸ್ಕೃತಿಯ ದ್ಯೋತಕವಾದ ಸೀರೆಗೆ ಸೀರೆಯೇ ಸಾಟಿ" ಎಂದು ಹಲವರು ಈ ಟ್ರೆಂಡ್ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. (ಚಿತ್ರ: ಟ್ವಿಟ್ಟರ್)












Click it and Unblock the Notifications