ಜಾರಿ ನಿರ್ದೇಶನಾಲಯದ ಮುಖ್ಯಸ್ಥರಾಗಿ ಸಂಜಯ್ ಮಿಶ್ರಾ ಅಧಿಕಾರಕ್ಕೆ

ನವದೆಹಲಿ, ನವೆಂಬರ್ 18: ದೆಹಲಿಯ ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತರಾಗಿದ್ದ ಸಂಜಯ್ ಕುಮಾರ್ ಮಿಶ್ರಾ ಅವರನ್ನು ಪೂರ್ಣಾವಧಿಗೆ ಜಾರಿ ನಿರ್ದೇಶನಾಲಯ(ಇಡಿ)ದ ನಿರ್ದೇಶಕರಾಗಿ ನೇಮಿಸಲಾಗಿದೆ. 'ಇಡಿ' ಯ ಹಂಗಾಮಿ ನಿರ್ದೇಶಕರಾಗಿ ಅಕ್ಟೋಬರ್ 27ರಂದು ನೇಮಿಸಲಾಗಿತ್ತು.

ಮಿಶ್ರಾ ಅವರು ಭಾರತೀಯ ಕಂದಾಯ ಸೇವೆಯ (ಐಆರ್ ಎಸ್) 1984 ಬ್ಯಾಚ್, ಆಧಾರ ತೆರಿಗೆ ಕೇಡರ್​ನ ಅಧಿಕಾರಿಯಾಗಿದ್ದಾರೆ. ಮೂರು ತಿಂಗಳಿಂದ ಜಾರಿ ನಿರ್ದೇಶಾಲಯದ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಮಿಶ್ರಾ ಅವರು ಈಗ ಪೂರ್ಣಾವಧಿ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.

2015 ರಲ್ಲಿ ಜಾರಿ ನಿರ್ದೇಶನಾಲಯ( Enforcement Directorate, ED)ದ ನಿರ್ದೇಶಕರಾಗಿ ನೇಮಕಗೊಂಡಿದ್ದ ಕರ್ನಲ್ ಸಿಂಗ್, 40 ವರ್ಷದ ಬಳಿಕ EDಯ ನಿರ್ದೇಶಕರಾದ ಮೊದಲ ಐಪಿಎಸ್ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಎನ್ ಡಿಟಿವಿ ಪ್ರಕರಣ ಮತ್ತು ನ್ಯಾಶ್ನಲ್ ಹೆರಾಲ್ಡ್ ಪ್ರಕರಣಗಳ ತನಿಖೆಯಲ್ಲಿ ಮಿಶ್ರಾ ಅವರು ಬಹು ಮಹತ್ವದ ಪಾತ್ರ ವಹಿಸಿದ್ದರು.

Sanjay Kumar Mishra Appointed As Full-Time Chief Of Enforcement Directorate

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ನೇಮಕಾತಿ ಸಮಿತಿ (ಎಸಿಸಿ) ಶನಿವಾರ ರಾತ್ರಿ ಮಿಶ್ರಾ ಅವರನ್ನು ನೇಮಕ ಮಾಡಿ, ಆದೇಶ ಹೊರಡಿಸಿದೆ. ಮುಂದಿನ ಎರಡು ವರ್ಷಗಳವರೆಗೆ ಮಿಶ್ರಾ ಇಡಿಯ ಅಧಿಕಾರದಲ್ಲಿರುತ್ತಾರೆ. ಇಡಿಯ ಮುಖ್ಯಸ್ಥ ಸ್ಥಾನವು ಕೇಂದ್ರ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಗೆ ಸಮಾನವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+