ದೇವಸ್ಥಾನಕ್ಕೆ ಹಣದ ಕಾಣಿಕೆ ನೀಡುವ ಬದಲು ಈ 5 ವಸ್ತುಗಳನ್ನು ದಾನ ಮಾಡಿ: ಮನೆಯಲ್ಲಿ ಸಂಪತ್ತು, ಸಂತೋಷ ಹೆಚ್ಚುವುದು

Sanatana Dharma: ಸನಾತನ ಧರ್ಮದಲ್ಲಿ ದಾನಕ್ಕೆ ವಿಶೇಷ ಸ್ಥಾನವಿದೆ. ದಾನ ಅಂದರೆ ಒಂದಷ್ಟು ಜನರಿಗೆ ಸಹಾಯ ಮಾಡಿ ಊರಿಡೀ ಡಂಗುರ ಸಾರಿಕೊಂಡು ಬರುವುದಲ್ಲ. ಒಂದು ಕೈಯ್ಯಲ್ಲಿ ಕೊಟ್ಟ ದಾನ ಮತ್ತೊಂದು ಕೈಗೂ ಗೊತ್ತಾಗಬಾರದಂತೆ. ಆಗಲೇ ನಾವು ಮಾಡುವ ದಾನಕ್ಕೆ ವಿಶೇಷ ಅರ್ಥ ಸಿಗೋದು, ಫಲ ನೀಡೋದು. ಸುಮ್ಮನೆ ಪ್ರಚಾರಕ್ಕಾಗಿ ದಾನ ಮಾಡಿಕೊಂಡು ಬರುವುದರಲ್ಲಿ ಯಾವುದೇ ಅರ್ಥವಿಲ್ಲ.

ದಾನ ಎಂದ ಕೂಡಲೇ ತಲೆಗೆ ಮೊದಲು ಬರುವುದು ಹಣದ ದಾನ. ಆದರೆ ದಾನ ಎಂದರೆ ಅಗತ್ಯವಿರುವವರಿಗೆ ಬರೀ ಹಣದ ಸಹಾಯ ಮಾಡುವುದಲ್ಲ. ನಿಸ್ವಾರ್ಥ ಸೇವೆ ಕೂಡಾ ದಾನದಡಿಯಲ್ಲೀಯೇ ಬರುವುದು. ದಾನದಲ್ಲಿಯೂ ಬೇರೆ ಬೇರೆ ರೀತಿಯಿದೆ. ಅನ್ನದಾನ, ವಸ್ತ್ರದಾನ, ಗೋಸೇವೆ, ಮತ್ತು ಸೇವಾದಾನದಂತಹ ದಾನಗಳಿಗೆ ಧರ್ಮಶಾಸ್ತ್ರಗಳಲ್ಲಿ ದೊಡ್ಡ ಸ್ಥಾನವೇ ಇದೆ.

Sanatana Dharma Importance of Donation Types Benefits And Why Annadana Is Considered Supreme

ದಾನ-ಧರ್ಮದ ಪುಣ್ಯ ಸಿಗೋದು ಯಾವಾಗ?

ದಾನ ಎಂದರೆ ಮನಸ್ಸನ್ನು ಶುದ್ಧೀಕರಿಸುವ ಒಂದು ಮಾರ್ಗ. ಕರುಣೆಯ ಸಂಕೇತ. ದೇವರಿಗೆ ಭಕ್ತಿಯನ್ನು ಸಮರ್ಪಿಸುವ ಪರಿ. ದಾನ ಎಂದ ಕೂಡಲೇ ಅದರ ಬೆಲೆಯನ್ನು ಹಣದಿಂದ ಅಳೆಯೋದು ಸರಿಯಲ್ಲ. ಬದಲಿಗೆ ಎಷ್ಟು ನಿಸ್ವಾರ್ಥದಿಂದ ದಾನ ಮಾಡುತ್ತಿದ್ದಾನೆ ಎನ್ನುವುದು ಕೂಡಾ ಮುಖ್ಯ. ಹಿಂದೂ ಧರ್ಮಗ್ರಂಥಗಳಲ್ಲಿ ಹೇಳಿರುವಂತೆ ಹಣದ ಜೊತೆಗೆ ಕೆಲವೊಂದು ವಸ್ತುಗಳ ದಾನ ಕೂಡಾ ಶ್ರೇಷ್ಠವಂತೆ. ಇದರಿಂದಲೂ ದಾನ ಧರ್ಮದ ಪುಣ್ಯ ಸಿಗುತ್ತದೆ.

ದಾನದ ಶ್ರೇಷ್ಠತೆ ಯಾವ ವಸ್ತುವನ್ನು ದಾನ ಮಾಡುತ್ತೇವೆ ಅಥವಾ ಅದಕ್ಕಾಗಿ ಎಷ್ಟು ಹಣ ಖರ್ಚು ಮಾಡ್ತೇವೆ ಎನ್ನುವುದರಿಂದ ನಿರ್ಧಾರ ಆಗುವುದಲ್ಲ. ದಾನ ಮಾಡುವ ವ್ಯಕ್ತಿಯ ಉದ್ದೇಶ ಕೂಡಾ ಇಲ್ಲಿ ಮುಖ್ಯ. ನಿಸ್ವಾರ್ಥ ಮನೋಭಾವದಿಂದ ಮಾಡುವ ಸೇವೆಯೇ ನಮ್ಮ ಜೀವನದಲ್ಲಿ ಪುಣ್ಯವನ್ನು ಸಂಪಾದಿಸಿ ಕೊಡುವುದು. ನಮ್ಮನ್ನು ಪ್ರಗತಿಯ ಮಾರ್ಗದಲ್ಲಿ ನಡೆಸುವುದು.

ದಾನಗಳಲ್ಲಿ ಶ್ರೇಷ್ಠವಾದದ್ದು ಯಾವುದು?

ಅನ್ನದಾನ ಮಹಾದಾನ ಎನ್ನುವ ಮಾತಿದೆ. ಹಾಗೆಯೇ ಅನ್ನದಾನ ಎಲ್ಲಾ ದಾನಗಳಿಗಿಂತ ಶ್ರೇಷ್ಠವಾದದ್ದು. ಸಾಮಾನ್ಯವಾಗಿ ಎಲ್ಲಾ ದೇವಾಲಯಗಳಲ್ಲಿ ಬರುವ ಭಕ್ತರಿಗೆ ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಇರುತ್ತದೆ. ಇದಕ್ಕಾಗಿ ಅಕ್ಕಿ, ಧಾನ್ಯ ಕಾಳುಗಳು, ಸಕ್ಕರೆ, ಬೆಲ್ಲ ಎಲ್ಲವೂ ಬೇಕಾಗುತ್ತದೆ. ಹೀಗೆ ದೇವಸ್ಥಾನಕ್ಕೆ ದಾನ ನೀಡಿದ ವಸ್ತುಗಳು ಅನ್ನ ಪ್ರಸಾದ ತಯಾರು ಮಾಡಲು ಉಪಯೋಗವಾಗುವುದು. ಮನೆಯಲ್ಲಿಯೇ ಆಗಲಿ, ದೇವಸ್ಥಾನಗಳಲ್ಲಿಯೇ ಆಗಲಿ ಯಾರಾದರೂ ಊಟದ ವೇಳೆ ಬಂದಾಗ ಅವರನ್ನು ಬರಿ ಗೈಯ್ಯಲ್ಲಿ ಕಳುಹಿಸಬಾರದು. ಹಾಗಾಗಿ ದೇವಸ್ಥಾನದ ಆಹಾರ ಭಂಡಾರ ಯಾವತ್ತೂ ತುಂಬಿರಬೇಕು.

ಬಟ್ಟೆ ದಾನ ಮಾಡುವುದರಿಂದ ಏನು ಉಪಯೋಗ?

ಸನಾತನ ಧರ್ಮದಲ್ಲಿ ಬಟ್ಟೆಗಳನ್ನು ದಾನ ಮಾಡುವುದು ಕೂಡಾ ಒಳ್ಳೆಯದು. ದೇವಾಲಯಗಳಿಗೆ ಬಟ್ಟೆಯನ್ನು ದಾನ ಮಾಡಿದರೆ ಅದನ್ನು ಪುರೋಹಿತರು, ಯಾತ್ರಿಗಳು, ಬಡವರಿಗೆ ನೀಡಲಾಗುತ್ತದೆ. ಬಟ್ಟೆ ದಾನ ಮಾಡುವುದರಿಂದ ನಮ್ಮಲ್ಲಿ ತ್ಯಾಗದ ಮನೋಭಾವ ಹೆಚ್ಚುತ್ತದೆಯಂತೆ. ಬಟ್ಟೆ ಎಂದರೆ ಅದು ಮೈ ಮುಚ್ಚಿಕೊಳ್ಳುವ ವಸ್ತು ಮಾತ್ರವಲ್ಲ, ಬದಲಿಗೆ ಅದು ಮಾನವ ಘನತೆಯ ಸಂಕೇತ.

ಎಣ್ಣೆ - ತುಪ್ಪ ದಾನ ಮಾಡುವುದರ ಹಿಂದಿನ ಉದ್ದೇಶ ಏನು?

ದೇವಾಲಯಗಳಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೆ ಪೂಜೆ ನಡೆಯುತ್ತಿರುತ್ತದೆ. ಅದರಲ್ಲಿಯೂ ದಿನಕ್ಕೆ ಮೂರು ಬಾರಿ ಮಹಾ ಪೂಜೆ ಇರುತ್ತದೆ. ಇನ್ನು ಭಕ್ತರು ಬಂದು ವಿಶೇಷ ಸೇವೆ ಬರೆಸಿದರೆ ಆಗಲೂ ಪೂಜೆ ಆರತಿ ನಡೆಯುತ್ತಲೇ ಇರುವುದು. ದೇವಸ್ಥಾನಗಳಲ್ಲಿ ದೀಪ ಪೂಜೆಗೆ ತುಪ್ಪ ಅಥವಾ ಎಣ್ಣೆಯನ್ನು ಲೀಟರ್‌ಗಟ್ಟಲೆ ಬೇಕಾಗುತ್ತದೆ. ಹೀಗಾಗಿ ದೇವಸ್ಥಾನದ ಪೂಜೆಗೆ ಅಗತ್ಯವಿರುವ ಎಣ್ಣೆ - ತುಪ್ಪವನ್ನು ದಾನ ಮಾಡುವುದರಿಂದ ವಿಶೇಷ ಪುಣ್ಯ ಸಿಗುತ್ತದೆ ಎನ್ನುವುದು ನಂಬಿಕೆ.

ದೀಪ ಕತ್ತಲೆ ಹೋಗಿಸಿ ಬೆಳಕು ಹರಿಸುತ್ತದೆ. ಹಾಗೆಯೇ ಮನಸ್ಸಿನ ಅಂಧಕಾರ ಸರಿಸಿ ಅಜ್ಞಾನವನ್ನು ಅಳಿಸಿ ಹಾಕುತ್ತದೆಯಂತೆ. ಪಾಸಿಟಿವ್‌ ಎನರ್ಜಿಯನ್ನು ತರುತ್ತದೆಯಂತೆ. ಆದ್ದರಿಂದ ದೇವಾಲಯಗಳಿಗೆ ಸಾಸಿವೆ ಎಣ್ಣೆ, ಎಳ್ಳೆಣ್ಣೆ ಅಥವಾ ಶುದ್ಧ ತುಪ್ಪವನ್ನು ದಾನ ಮಾಡುವುದರಿಂದ ದೈನಂದಿನ ಪೂಜೆಗಳು ಸರಿಯಾಗಿ ನಡೆಯಲು ಸಹಾಯ ಆಗುತ್ತದೆ.

ಸಾಮಾನ್ಯವಾಗಿ ಎಲ್ಲಾ ದೇವಾಲಯಗಳಲ್ಲಿ ಗೋವುಗಳಿರುತ್ತವೆ. ಗೋವು ಎಂದರೆ ಶ್ರೀಕೃಷ್ಣ ಮತ್ತು ಶಿವನಿಗೆ ಸಂಬಂಧಿಸಿರುವಂತದ್ದು. ಹಾಗಾಗಿ ಗೋಸೇವೆಗೆ ನಮ್ಮಲ್ಲಿ ವಿಶೇಷ ಮಹತ್ವವಿದೆ. ಗೋಶಾಲೆಗಳಿಗೆ ಹಸಿರು ಹುಲ್ಲು, ಧಾನ್ಯ ಅಥವಾ ಬೇರೆ ಅಗತ್ಯ ವಸ್ತುಗಳನ್ನು ದಾನ ಮಾಡುವುದು ಕೂಡಾ ಶುಭವೇ. ಸನಾತನ ಧರ್ಮದಲ್ಲಿ ಹಸು ಎಂದರೆ ಬೇಡಿದ್ದೆಲ್ಲಾ ಕೊಡುವ ಕಾಮಧೇನು ಎನ್ನುವ ನಂಬಿಕೆಯಿದೆ. ಹಸು ತಾಯಿ, ಕರುಣೆ ಮತ್ತು ಸಂಪತ್ತಿನ ಸಂಕೇತ. ಆದ್ದರಿಂದ, ಗೋಸೇವೆಯನ್ನು ಧಾರ್ಮಿಕ ಸೇವೆಗೆ ಸಮಾನ ಎಂದರೆ ತಪ್ಪಲ್ಲ.

ದೇವಾಲಯ ಸ್ವಚ್ವಾಗಿರುವುದು ಎಲ್ಲಕ್ಕಿಂತ ಮುಖ್ಯ. ಅನ್ನ ಪ್ರಸಾದ ಬಡಿಸುವಲ್ಲಿ ನೆರವಾಗುವುದು. ದೇವಸ್ಥಾನಕ್ಕೆ ಬಂದಿರುವ ವೃದ್ದರಿಗೆ ಸಹಾಯಕ್ಕೆ ಬರುವುದು, ದೇವಸ್ಥಾನದಲ್ಲಿ ಶುಚಿಗೊಳಿಸುವ ಕಾರ್ಯ, ಅಡುಗೆ ಕಾರ್ಯಗಳಲ್ಲಿ ಭಾಗಿಯಾಗಬೇಕು. ಈ ಮೂಲಕ ನಮ್ಮ ಅಮೂಲ್ಯ ಸಮಯವನ್ನು ದೇವಾಲಯದ ಕೆಲಸಗಳಿಗೆ ಕೊಟ್ಟ ಹಾಗೆ ಆಗುತ್ತದೆ. ಸುಲಭ ಮತ್ತು ಸರಳ ಪದಗಳಲ್ಲಿ ಹೇಳುವುದಾದರೆ ಸ್ವಯಂಸೇವಕರಂತೆ ಸೇವೆ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾಗುವುದು.

ಹಾಗಾಗಿ ನಿಜವಾದ ದಾನ ಎಂದರೆ ಕೇವಲ ದೇವಸ್ಥಾನಕ್ಕೆ ಕಾಣಿಕೆ ಹಾಕುವುದು, ಹಣ ನೀಡುವುದಲ್ಲ. ಸಮಯ, ಶ್ರಮ, ಕರುಣೆ ಮತ್ತು ಸೇವೆ ಕೂಡಾ ದಾನವೇ. ಈ ದಾನಗಳಲ್ಲಿ ಭಾಗಿಯಾಗುವವರ ಜೀವನದ ಸಂತೋಷ ಹೆಚ್ಚಾಗುವ ಮೂಲಕ ಸಮೃದ್ದಿ ಸಂಪತ್ತು ಕೂಡಾ ಹರಿಸು ಬರುತ್ತದೆಯಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+