ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದ ಸ್ಪುಟ್ನಿಕ್ 5 ಲಸಿಕೆ ಪರಿಣಾಮಕಾರಿ: ಭಾರತದ ಅಭಿಪ್ರಾಯ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 05: ಇಡೀ ವಿಶ್ವದ ಪ್ರಪ್ರಥಮ ಕೊರೊನಾ ಲಸಿಕೆ ಎನಿಸಿಕೊಂಡಿರುವ ರಷ್ಯಾದ ಸ್ಪುಟ್ನಿಕ್ 5 ಲಸಿಕೆ ಪರಿಣಾಮಕಾರಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

76 ಮಂದಿ ಮೇಲೆ ಆರಂಭಿಕ ಪ್ರಯೋಗ ನಡೆಸಲಾಗಿದೆ. 42 ದಿನಗಳಲ್ಲಿ ಇವರಲ್ಲಿ ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿಲ್ಲ. ಅದಲ್ಲದೆ, ಪ್ರಯೋಗಕ್ಕೆ ಒಳಗಾದ ಪ್ರತಿಯೊಬ್ಬರಲ್ಲೂ 21 ದಿನಗಳ ಒಳಗಾಗಿ ಪ್ರತಿರೋಧ ಶಕ್ತಿ ಹೆಚ್ಚಾಗಿದೆ. ಈ ಲಸಿಕೆಯು ಕೊರೊನಾ ಸೋಂಕಿನಿಂದ ರಕ್ಷಣೆ ನೀಡುತ್ತದೆ ಎಂದು ಅಭಿಪ್ರಾಯಪಡಲಾಗಿದೆ.

ಕೊವಿಡ್ ವಿರುದ್ಧ ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್ 5 ಲಸಿಕೆಯು ಸುರಕ್ಷಿತ ಮತ್ತು ವೈರಾಣು ವಿರುದ್ಧ ಪ್ರತಿರೋಧ ಶಕ್ತಿಯನ್ನು ಉಂಟು ಮಾಡುತ್ತದೆ.

Vaccine
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾತನಾಡಿದ್ದು, ತಮ್ಮ ಮಗಳಿಗೆ ಲಸಿಕೆ ನೀಡಲಾಗಿದೆ. ಅದು ಪರಿಣಾಮಕಾರಿಯಾಗಿದೆ ಎಂದು ಹೇಳಿದ್ದಾರೆ.

ಹೆಚ್ಚು ಸಂಖ್ಯೆಯ ಜನರಿಗೆ ಲಸಿಕೆ ನೀಡಿ, ದೀರ್ಘಾವಧಿ ಪ್ರಯೋಗ, ಲಸಿಕೆ ಹೋಲಿಕೆ ಪ್ರಕ್ರಿಯೆ ನಡೆಯಬೇಕಿದೆ. ದೀರ್ಘಾವಧಿಯಲ್ಲಿ ಲಸಿಕೆ ಸುರಕ್ಷಿತ ಮತ್ತು ಕೊವಿಡ್‌ನಿಂದ ಸುರಕ್ಷತೆ ಒದಗಿಸುತ್ತದೆ.

ಕರ್ನಾಟಕದಲ್ಲಿ ರೆಮ್‌ಡೆಸಿವಿರ್ ಲಸಿಕೆ ಬಳಕೆಗೆ ಮಾನದಂಡವೇನು?ಕರ್ನಾಟಕದಲ್ಲಿ ರೆಮ್‌ಡೆಸಿವಿರ್ ಲಸಿಕೆ ಬಳಕೆಗೆ ಮಾನದಂಡವೇನು?

ಎರಡನೇ ಹಂತದಲ್ಲಿ 40 ಸ್ವಯಂ ಸೇವಕರು ಮಾತ್ರ ಭಾಗಿಯಾಗಿದ್ದಾರೆ. ಈ ಸಂಖ್ಯೆ ಬಹಳ ಚಿಕ್ಕದು, ಇದನ್ನು ಬಿಟ್ಟರೆ, ಲಸಿಕೆಯು ಸಾಕಷ್ಟು ಪರಿಣಾಮಕಾರಿ ಅನಿಸುತ್ತದೆ. ಎಂದು ವೆಲ್‌ಕಮ್ ಟ್ರಸ್ಟ್‌ನ ಬಯೋಟೆಕ್ನಾಲಜಿ ವಿಭಾಗದ ಹಿರಿಯ ಸೋಂಕು ಶಾಸ್ತ್ರಜ್ಞ ಶಾಹಿದ್ ತಿಳಿಸಿದ್ದಾರೆ.

ಕಳೆದ ಕೆಲವು ತಿಂಗಳಿನಿಂದ ಸ್ಪುಟ್ನಿಕ್ 5 ಲಸಿಕೆಯ ಬಗ್ಗೆ ಭಾರಿ ವಿವಾದ ಸೃಷ್ಟಿಯಾಗಿತ್ತು. ಕೊವಿಡ್ ವಿರುದ್ಧ ಜಗತ್ತಿನ ಮೊದಲ ಲಸಿಕೆಯನ್ನು ರಷ್ಯಾ ಅಭಿವೃದ್ಧಿಪಡಿಸಿದ್ದರೂ ಕೂಡ ಅದರ ಪ್ರಯೋಗಗಳ ಸಮಯದ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿತ್ತು.

English summary
Defence Minister Rajnath Singh, who is in Moscow for the Shanghai Cooperation Organisation (SCO) meet, said on September 4 that the coronavirus vaccine being developed by Russia will be effective.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X