ಅಪನಗದೀಕರಣ ಸ್ವಾಗತಿಸಿದ ಗ್ರಾಮೀಣ ಭಾರತ:ನಾರಾಯಣಮೂರ್ತಿ

ಕೋಲ್ಕತ್ತಾ, ಮಾರ್ಚ್ 22: ಕೇಂದ್ರ ಸರ್ಕಾರ ನವೆಂಬರ್ 2016 ರಲ್ಲಿ ತೆಗೆದುಕೊಂಡ ಅಪನಗದೀಕರಣದ ನಿರ್ಧಾರವನ್ನು ನಗರ ಪ್ರದೇಶದ ಜನರು ಸ್ವಾಗತಿಸದಿದ್ದರೂ, ಗ್ರಾಮೀಣ ಪ್ರದೇಶದ ಜನರು ಮುಕ್ತ ಮನದಿಂದ ಸ್ವಾಗತಿಸಿದ್ದಾರೆ ಎಂದು ಇನ್ಫೋಸಿಸ್ ಕೋ ಫೌಂಡರ್ ಎನ್.ಆರ್.ನಾರಾಯಣಮೂರ್ತಿ ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಕೋಲ್ಕತ್ತದ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಅಪನಗದೀಕರಣದ ಬಗ್ಗೆ ಮಾತನಾಡುತ್ತಿದ್ದ ಅವರು ಹೀಗೆ ಹೇಳಿದರು.

"ನಾನು ಅರ್ಥಶಾಸ್ತ್ರಜ್ಞನಲ್ಲ. ಆದರೆ ಒಂದಂತೂ ಹೇಳಬಲ್ಲೆ. ಅಪನಗದೀಕರಣದ ಕುರಿತು ನಗರ ಪ್ರದೇಶದಲ್ಲಿ ಎಷ್ಟು ವಿರೋಧ ವ್ಯಕ್ತವಾಯಿತೋ, ಗ್ರಾಮೀಣ ಪ್ರದೇಶದಲ್ಲಿ ಅಷ್ಟೇ ಜನ ಅದನ್ನು ಸ್ವಾಗತಿಸಿದ್ದಾರೆ" ಎಂದು ಅವರು ಹೇಳಿದರು.

Rural India welcomed Demonetisation says Narayan Murthy

"ನನಗೆ ಈ ಬಗ್ಗೆ ಹೆಚ್ಚು ತಿಳಿದಿಲ್ಲ. ಆದರೆ ಸರ್ಕಾರ ಹಳೆಯ 500 ರೂ ನೋಟುಗಳನ್ನು ನಿಷೇಧಿಸಿ, ತಕ್ಷಣವೇ 2000 ರೂ.ಮುಖಬೆಲೆಯ ನೋಟುಗಳನ್ನು ಪರಿಚಯಿಸಿದ್ದು ಏಕೆ ಎಂಬುದು ನನಗೆ ಅರ್ಥವಾಗಿಲ್ಲ. ಇದನ್ನು ಯಾರಾದರೂ ತಜ್ಞರೇ ಹೇಳಬೇಕು" ಎಂದು ಅವರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+