ಎಫ್ ಟಿಐಐ ವಿದ್ಯಾರ್ಥಿಗಳ ಹೋರಾಟಕ್ಕೆ ರಾಹುಲ್ ಬಲ
ಪುಣೆ, ಜು.30: ಫಿಲ್ಮ್ ಮತ್ತು ಟೆಲಿವಿಶನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ(ಎಫ್ ಟಿಐಐ) ವಿದ್ಯಾರ್ಥಿಗಳುಕಳೆದ 50 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಬೆಳಗ್ಗೆ ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ವಿದ್ಯಾರ್ಥಿಗಳು ನಮ್ಮ ಸಮಸ್ಯೆ ಬಗ್ಗೆ ಸಂಸತ್ ಗಮನ ಸೆಳೆಯಬೇಕು ಎಂದು ಒತ್ತಾಯ ಮಾಡಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ರಾಹುಲ್, ಎನ್ ಡಿಎ ಸರ್ಕಾರ ಆಯಕಟ್ಟಿನ ಹುದ್ದೆಗಳಿಗೆ ಅಸಮರ್ಥರನ್ನು ನೇಮಕ ಮಾಡಿದೆ. ಎಫ್ ಟಿಐಐ ಮುಖ್ಯಸ್ಥ ಗಜೇಂದ್ರ ಚೌಹಾಣ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯ ಮಾಡಿದರು.(ಕರ್ನಾಟಕಕ್ಕೆ ಬರಲಿದ್ದಾರೆ ರಾಹುಲ್ ಗಾಂಧಿ)

ಆರ್ ಎಸ್ ಎಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ಖುದ್ದು ಪ್ರಧಾನಿಯೇ ಈ ಸಮಸ್ಯೆ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಅನೇಕ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ರಾಹುಲ್ ಬೆಂಬಲ ಶಕ್ತಿ ತುಂಬಿದೆ.[ರೈತರ ಆತ್ಮಹತ್ಯೆಗೆ ಪ್ರೇಮ ವೈಫಲ್ಯ ಕಾರಣವಂತೆ!]
ಮಾಜಿ ಸಂಸದೆ ರಮ್ಯಾ ಬೆಂಬಲ
ರಾಹುಲ್ ಗಾಂಧಿ ಹೋರಾಟಕ್ಕೆ ಮಾಜಿ ಸಂಸದೆ, ಚಿತ್ರನಟಿ ರಮ್ಯಾ ಸಹ ಬೆಂಬಲ ಸೂಚಿಸಿದ್ದಾರೆ. ಅನೇಕ ಬಾಲಿವುಡ್ ನಟರು ಸಹ ವಿದ್ಯಾರ್ಥಿಗಳೊಂದಿಗೆ ಹೋರಾಟಕ್ಕೆ ಧುಮುಕಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ, ರಾಜ್ ಬಬ್ಬರ್ ಸಹ ರಾಹುಲ್ ಗಾಂಧಿ ಜತೆ ಸೇರಿದ್ದು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ.[ಜನಮತ : ರಮ್ಯಾ ಮತ್ತೆ ರಾಜಕೀಯಕ್ಕೆ ಬರುವುದೇ ಬೇಡ!]
ಆದರೆ ರಾಹುಲ್ ಗಾಂಧಿ ಭೇಟಿ ನೀಡಿ ಸಂವಾದ ನಡೆಸಿರುವುದನ್ನು ಬಿಜೆಪಿ ಮತ್ತು ಆರ್ ಎಸ್ ಎಸ್ ತೀವ್ರವಾಗಿ ಖಂಡಿಸಿದೆ. ಅಲ್ಲದೇ ರಾಹುಲ್ ಗಾಂಧಿ ಸಂವಾದ ಕುರಿತಾಗಿ ಟ್ವಿಟರ್ ನಲ್ಲೂ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ವಿದ್ಯಾಲಯದ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯನ್ನು ಆರಂಭಿಸಿದ್ದಾರೆ.
Rahul Gandhi at FTII: They will say u are anti-national, anti-Hindu. They r scared of u.That is the nature of a bully pic.twitter.com/NYNQFuHCGx
— ANI (@ANI_news) July 31, 2015 Rahul Gandhi's visit to #FTII is the beginning of politicisation of an educational institution.Sad for #FTII
— Ashoke Pandit (@ashokepandit) July 31, 2015 Rahul Gandhi reaches Pune along with Raj Babbar and Chiranjeevi to support protesting #FTII students. @IndianExpress @OfficeOfRG
— Atikh Rashid (@taubaTOFsingh) July 31, 2015 Rahul Gandhi interacting with protesting #FTII students. #RGwithFTII pic.twitter.com/YZiJGJ2ou5
— NSUI (@nsui) July 31, 2015 











Click it and Unblock the Notifications