ಅಮೆಜಾನ್ ನಲ್ಲಿ ಆರೆಸ್ಸೆಸ್ ಬೆಂಬಲಿತ ಗೋಮೂತ್ರ ಇನ್ಮುಂದೆ ಲಭ್ಯ

ಲಕ್ನೋ, ಸೆಪ್ಟೆಂಬರ್ 24: ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಂಬಲಿತ ದೀನ ದಯಾಳ್ ಧಾಮ ಕೇಂದ್ರದಿಂದ ಉತ್ಪನ್ನಗಳು ಇನ್ಮುಂದೆ ಅಮೆಜಾನ್ ನಲ್ಲಿ ಮಾರಾಟಕ್ಕೆ ಲಭ್ಯವಾಗಲಿವೆ. ಇದರಲ್ಲಿ ಏನು ವಿಶೇಷ ಎಂದು ನೋಡಿದರೆ, ಇದೇ ಮೊದಲ ಬಾರಿಗೆ ಗೋಮೂತ್ರ, ಸಗಣಿ ಆಧಾರಿತ ಉತ್ಪನ್ನಗಳು ಆನ್ ಲೈನ್ ಶಾಪಿಂಗ್ ಮೂಲಕ ಗ್ರಾಹಕರಿಗೆ ಸಿಗಲಿದೆ.

ಗೋಮೂತ್ರ, ಸಗಣಿ ಆಧಾರಿತ ಸೋಪು, ಶಾಂಪು, ಡಿಟರ್ಜಂಟ್ ಇನ್ನಿತರ ಉತ್ಪನ್ನಗಳ ಮಾರಾಟವನ್ನು ಅಮೆಜಾನ್ ಆರಂಭಿಸಿದೆ. ಗೋ ಮೂತ್ರ ಹಾಗೂ ಸಗಣಿಯಿಂದ ತಯಾರಿಸಿರುವ ಸೋಪು, ಫೇಸ್​ಪ್ಯಾಕ್, ಶಾಂಪೂ, ವೈದ್ಯಕೀಯ ಉತ್ಪನ್ನಗಳು ಉತ್ತರಪ್ರದೇಶದ ಮಥುರಾದಲ್ಲಿ ದೀನದಯಾಳ್ ಧಾಮ ಕೇಂದ್ರದಲ್ಲಿ ಉತ್ಪಾದಿಸಲಾಗುತ್ತಿದೆ.

RSS-backed centre to start selling cow urine, dung-based soaps and face packs on Amazon

ಆರ್​ಎಸ್​ಎಸ್ ಬೆಂಬಲಿತ ಈ ಕೇಂದ್ರದ ಉತ್ಪನ್ನಗಳ ಕುರಿತ ಜಾಹೀರಾತುಗಳು ಇನ್ನೊಂದು ವಾರದಲ್ಲಿ ಅಮೆಜಾನ್ ಪುಟದಲ್ಲಿ ಕಾಣಿಸಲಿವೆ. ಸುದೀರ್ಘ ಚರ್ಚೆ ಬಳಿಕ ಮಾರಾಟಕ್ಕೆ ಅಮೆಜಾನ್ ಒಪ್ಪಿಗೆ ಸೂಚಿಸಿದೆ. ಮೊದಲಿಗೆ ಸೌಂದರ್ಯ ಹಾಗೂ ವೈದ್ಯಕೀಯ ಉತ್ಪನ್ನಗಳು ಮಾತ್ರ ದೊರೆಯಲಿವೆ. ಗ್ರಾಹಕರ ಪ್ರತಿಕ್ರಿಯೆ ನೋಡಿಕೊಂಡು ಇನ್ನಷ್ಟು ಉತ್ಪನ್ನಗಳನ್ನು ಮಾರಾಟಕ್ಕೆ ಇಡಲಾಗುವುದು ಎಂದು ಕೇಂದ್ರದ ಕಾರ್ಯ ನಿರ್ವಾಹಕ ಅಧಿಕಾರಿ ಘನಶ್ಯಾಮ ಗುಪ್ತಾ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+