ಗೂಗಲ್, ಆಪಲ್ ಕೋಟ್ಯಂತರ ರೂ ಸಂಬಳ

IIT-Madrasನಲ್ಲಿ ಇಬ್ಬರು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವೀಧರರು ವಾರ್ಷಿಕ ತಲಾ 1.31 ಕೋಟಿ ರೂ. ಸಂಬಳ ಭಾಗ್ಯದ ಉದ್ಯೋಗ ಗಿಟ್ಟಿಸಿದ್ದಾರೆ. ಇನ್ನೂ ವ್ಯಾಸಂಗನಿರತರಾಗಿರುವ ಈ ಇಬ್ಬರು ಕಂಪ್ಯೂಟರ್ ಇಂಜಿನಿಯರಿಂಗ್ ಪದವೀಧರರು ಸದರಿ ಕಂಪನಿಗೆ ಸೇರ್ಪಡೆಯಾದರೆ joining bonus ಸಹ ಪ್ರಾಪ್ತಿಯಾಗುತ್ತದಂತೆ.
ಅಂತಾರಾಷ್ಟ್ರೀಯ ಸ್ತರದ ಈ ಉದ್ಯೋಗ ನೀಡಿರುವ ಕಂಪನಿಯ ಹೆಸರನ್ನು IIT-M ಬಹಿರಂಗಪಡಿಸಿಲ್ಲವಾದರೂ ಬಹುಶಃ ಅದು ಒರಾಕಲ್ ಕಂಪನಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. (ಒನ್ಇಂಡಿಯಾದಿಂದ ಉದ್ಯೋಗ ಹುಡುಕಾಟ ಸೇವೆ)
ಇನ್ನು ಭಾರತದಲ್ಲೇ ಕೆಲಸ ಮಾಡುವುದಕ್ಕೂ ಕಂಪನಿಗಳು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿವೆ. ಕ್ಯಾಂಪಸ್ ಸೆಲಕ್ಷನ್ ನಲ್ಲಿ ಕಳೆದ ವರ್ಷ ತಲಾ 28.82 ಲಕ್ಷ ರೂ. ಸಂಬಳಗಳನ್ನು ನೀಡಿದ್ದ ಕಂಪನಿಗಳು ಈ ಬಾರಿ ಸಂಬಳಗಳನ್ನು ಬಹುತೇಕ ದುಪ್ಪಟ್ಟು (ಅಂದರೆ 48.68 ಲಕ್ಷ ರೂ) ಮಾಡಿವೆ. IIT Kharagpur ಮತ್ತು IIT-Guwahatiಯಲ್ಲಿಯೂ ನೇಮಕಾತಿ ಜೋರಾಗಿ ನಡೆದಿದೆ.
IIT Kharagpur ನಲ್ಲಿಯೂ ಅರ್ಹ ವಿದ್ಯಾರ್ಥಿಗಳಿಗೆ ಉತ್ತಮ ಸಂಬಳಗಳು ದಕ್ಕುತ್ತಿವೆ. ಅಂತಾರಾಷ್ಟ್ರೀಯ ಉದ್ಯೋಗಕ್ಕೆ ಈ ಬಾರಿ 93 ಲಕ್ಷ ರೂ ಅಫರ್ ನೀಡಲಾಗಿದೆ. IIT-Bombayಯಲ್ಲಿ ಕೊರಿಯಾದ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಕಂಪನಿಯು ಕಳೆದ ವರ್ಷದಂತೆ ಈ ಬಾರಿಯೂ 48.68 ಲಕ್ಷ ರೂ ಸಂಬಳದ ಉದ್ಯೋಗ ನೀಡಿದೆ. Schlumberger, Mitsubishi, Apple, Oracle ಮತ್ತು Zomato ಕಂಪನಿಗಳು ಭಾವಿ ಉದ್ಯೋಗಿಗಳಿಗಾಗಿ ಭರ್ಜರಿ ಅಫರ್ ಕೊಡಮಾಡುತ್ತಿವೆ.












Click it and Unblock the Notifications