Get Updates
Get notified of breaking news, exclusive insights, and must-see stories!

ಸದ್ಯದಲ್ಲೇ ಬರಲಿದೆ 200 ರೂಪಾಯಿಯ ಹೊಸ ನೋಟು

ನವದೆಹಲಿ, ಜೂನ್ 29: ಜನರ ನಗದು ಚಲಾವಣೆಯನ್ನು ಸುಲಭವಾಗಿಸಲು 200 ರೂಪಾಯಿಯ ನೋಟುಗಳು ಸದ್ಯದಲ್ಲೇ ಚಲಾವಣೆಗೆ ಬರಲಿವೆ. ಸದ್ಯ 200 ರೂ. ಮುಖ ಬೆಲೆಯ ನೋಟಿನ ಮುದ್ರಣ ಆರಂಭವಾಗಿದ್ದು ಇನ್ನು ಕೆಲವೇ ದಿನಗಳಲ್ಲಿ 200 ರೂಪಾಯಿಯ ನೋಟು ಜನರ ಕೈ ತಲುಪಲಿದೆ.

ಎರಡು ವಾರಗಳ ಹಿಂದೆ 200 ರೂ. ನೋಟುಗಳ ಮುದ್ರಣಕ್ಕೆ ಆದೇಶ ನೀಡುವಂತೆ ರಿಸರ್ವ್ ಬ್ಯಾಂಕ್ ಬಳಿ ಕೇಳಿಕೊಳ್ಳಲಾಗಿತ್ತು. ನೋಟು ಮುದ್ರಣಕ್ಕೆ ಬ್ಯಾಂಕ್ ಅವಕಾಶ ನೀಡಿರುವುದರಿಂದ ಈಗ ನೋಟುಗಳು ಚಾಲ್ತಿಗೆ ಬರಲಿವೆ. ಉತ್ಕೃಷ್ಟ ಭದ್ರತಾ ಅಂಶಗಳನ್ನು ಒಳಗೊಂಡ ಈ ನೋಟುಗಳ ನಕಲಿ ಸೃಷ್ಟಿಸುವುದು ಅಸಾಧ್ಯವಾಗಿದೆ.

Rs 200 note on its way as printing begins

ನವೆಂಬರ್ 8ರಂದು ಕೇಂದ್ರ ಸರಕಾರ ಅಪನಗದೀಕರಣ ಘೋಷಿಸಿತ್ತು. ರೂ. 500 ಮತ್ತು 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿತ್ತು. ಇದರಿಂದ ಚಾಲ್ತಿಯಲ್ಲಿದ್ದ 17.9 ಲಕ್ಷ ಕೋಟಿ ಬೆಲೆಯ ಶೇಕಡಾ 86ರಷ್ಟು ನೋಟುಗಳು ಅಮಾನ್ಯವಾಗಿದ್ದವು.

ನಂತರ ಕೇಂದ್ರ ಸರಕಾರ ಹೊಸ 2000 ಮುಖಬೆಲೆಯ ಹಾಗೂ 500 ಮುಖಬೆಲೆಯ ನೋಟನ್ನು ಜಾರಿಗೆ ತಂದಿತ್ತು. ಜೂನ್ 9ರವರೆಗೆ ಕೇವಲ 14.6 ಲಕ್ಷ ಕೋಟಿ ಹಣ ಮಾತ್ರ ಚಲಾವಣೆಗೆ ಬಂದಿದೆ. ಇನ್ನೂ ಶೇಕಡಾ 18.4 ರಷ್ಟು ಹಣ ಚಲಾವಣೆಗೆ ಬಂದಿಲ್ಲ.

ಇದೀಗ 200 ರೂ ಮುಖಬೆಲೆಯ ನೋಟಿನೊಂದಿಗೆ ಒಂದಷ್ಟು ಹಣ ಚಲಾವಣೆಗೆ ಬರಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+