ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಷಾರ್‌! ಚಪ್ಪಲಿ ಹಾಕಿಕೊಂಡು ಬೈಕ್ ಓಡಿಸಿದರೂ ಬೀಳುತ್ತೆ ದಂಡ

|
Google Oneindia Kannada News

Recommended Video

ಚಪ್ಪಲಿ ಹಾಕಿಕೊಂಡು ಬೈಕ್ ಓಡಿಸಿದರೂ ಬೀಳುತ್ತೆ ದಂಡ | Oneindia Kannada

ಬೆಂಗಳೂರು, ಸೆಪ್ಟೆಂಬರ್ 10: ಇನ್ನುಮುಂದೆ ಚಪ್ಪಲಿ ಹಾಕಿಕೊಂಡು ಬೈಕ್ ಓಡಿಸಿದರೂ ದಂಡ ಬೀಳುತ್ತೆ ಎನ್ನುವ ವಿಷಯ ಬಹಿರಂಗಗೊಂಡಿದೆ. ಹಾಗಾದರೆ ಚಪ್ಪಲಿ ಧರಿಸದೆಯೇ ದ್ವಿಚಕ್ರ ವಾಹನ ಓಡಿಸಬೇಕಾ ಎಂದು ಕೇಳಬೇಡಿ, ಚಪ್ಪಲಿ ಬದಲು ಶೂ ಧರಿಸಿದರೆ ಉತ್ತಮ.

ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ ಭಾರೀ ದಂಡಕ್ಕೆ ಗುರಿಯಾಗಬೇಕಾಗುತ್ತದೆ. ಪ್ರಯಾಣಿಕರ ಹಿತದೃಷ್ಟಿಯಿಂದ ಈ ಕಾನೂನು ರಚಿಸಲಾಗಿದೆ.

ಟ್ರಾಫಿಕ್ ಇಲಾಖೆಯ ಸ್ಪಷ್ಟ ಆದೇಶ: ಈ ದಾಖಲೆ ಒರಿಜಿನಲ್ ಇಲ್ಲಾಂದ್ರೆ ಭಾರೀ ಫೈನ್ಟ್ರಾಫಿಕ್ ಇಲಾಖೆಯ ಸ್ಪಷ್ಟ ಆದೇಶ: ಈ ದಾಖಲೆ ಒರಿಜಿನಲ್ ಇಲ್ಲಾಂದ್ರೆ ಭಾರೀ ಫೈನ್

ಈ ಹೊಸ ಟ್ರಾಫಿಕ್ ನಿಯಮದಿಂದಾಗಿ ದ್ವಿಚಕ್ರ ವಾಹನ ಸವಾರರಿಗೆ ಶಾಕ್ ನೀಡಿದಂತಾಗಿದೆ. ದಂಡದ ಮೊತ್ತವು 1,000 ರೂ. ಆಗಿದ್ದು, ಈ ತಪ್ಪು ಮರುಕಳಿಸಿದರೆ ದಂಡದ ಜೊತೆಗೆ 15 ದಿನಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

Riding A Bike with Slippers Is Not Allowed

ಸ್ಲಿಪ್ಪರ್, ಹವಾಯಿ ಚಪ್ಪಲಿ ಹಾಕಿದರೆ ದ್ವಿಚಕ್ರ ವಾಹನದ ಗೇರ್ ಬದಲಾಯಿಸಲು, ವಾಹನ ನಿಯಂತ್ರಣಕ್ಕೆ, ಪಾರ್ಕ್ ಮಾಡಲು, ಪಾರ್ಕಿಂಗ್‍ನಿಂದ ವಾಹನ ತೆಗೆಯಲು ಸಮಸ್ಯೆ ಆಗಲಿದೆ. ಜೊತೆಗೆ ಅಪಘಾತದವಾದಾಗ ಕಾಲಿಗೆ ಗಾಯವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಸವಾರರು ಶೂ ಧರಿಸಿದರೆ ಉತ್ತಮ ಎಂಬುದು ನಿಯಮದ ಉದ್ದೇಶವಾಗಿದೆ.

ಟ್ರಾಫಿಕ್ ನಿಯಮ ಉಲ್ಲಂಘನೆ: ಬೆಂಗಳೂರಿನ ಯುವಕನಿಗೆ 17000 ರೂ. ದಂಡ!ಟ್ರಾಫಿಕ್ ನಿಯಮ ಉಲ್ಲಂಘನೆ: ಬೆಂಗಳೂರಿನ ಯುವಕನಿಗೆ 17000 ರೂ. ದಂಡ!

ಹೊಸ ಟ್ರಾಫಿಟ್ ದಂಡ ಜಾರಿಯಾದ ಬಳಿಕ ಟ್ರಾಫಿಕ್ ಪೊಲೀಸರು ಕೂಡ ಫುಲ್ ಆ್ಯಕ್ಟೀವ್ ಆಗಿದ್ದು, ಲೈಸನ್ಸ್, ಹೆಲ್ಮೆಟ್, ಲೈಸನ್ಸ್ ಸೇರಿ ಎಲ್ಲ ರೀತಿಯ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಹೀಗಾಗಿ ದಂಡದ ಮೊತ್ತವು ಭಾರೀ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದೆ.

1988ರ ಮೋಟಾರು ವಾಹನ ಕಾಯ್ದೆಯಲ್ಲೇ ಇದನ್ನು ಉಲ್ಲೇಖಿಸಲಾಗಿದೆ. ಇಲ್ಲಿಯವರೆಗೆ ಈ ನಿಮಯವನ್ನು ಗಂಭೀರವಾಗಿ ಟ್ರಾಫಿಕ್ ಪೊಲೀಸರು ನೋಡುತ್ತಿರಲಿಲ್ಲ. ಆದರೆ ಈಗ ದೇಶದ ವಿವಿಧ ಕಡೆಗಳಲ್ಲಿ ಈ ನಿಯಮವನ್ನು ಪಾಲಿಸಲು ಮುಂದಾಗಿದ್ದು ಹಲವು ನಗರಗಳಲ್ಲಿ ಸವಾರರು ಈ ಪ್ರಕರಣದ ಅಡಿ ದಂಡ ಪಾವತಿ ಮಾಡುತ್ತಿದ್ದಾರೆ.

"ನಿತಿನ್ ಗಡ್ಕರಿ ಹೆಲ್ಮೆಟ್ ಇಲ್ದೆ ಗಾಡಿ ಓಡಿಸಿದ್ದಕ್ಕೆ ಫೈನ್ ಎಷ್ಟು?"

ಸವಾರರು ಸ್ಲಿಪ್ಪರ್, ಹವಾಯಿ ಚಪ್ಪಲ್ ಹಾಕಿಕೊಂಡು ಗೇರ್ ಹೊಂದಿರುವ ದ್ವಿಚಕ್ರ ವಾಹನ ಓಡಿಸುವಂತಿಲ್ಲ. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ ಭಾರೀ ದಂಡಕ್ಕೆ ಗುರಿಯಾಗಬೇಕಾಗುತ್ತದೆ. ದಂಡದ ಮೊತ್ತ 1,000 ರೂ. ಆಗಿದ್ದು, ಈ ತಪ್ಪು ಮರುಕಳಿಸಿದರೆ ದಂಡದ ಜೊತೆಗೆ 15 ದಿನಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

English summary
New Traffic Rules: Slipper, chappals are not allowed for Two wheeler.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X