ರಿವಾರಿ: ಅತ್ಯಾಚಾರದ ನಂತರ ತಾನೇ ವೈದ್ಯರಿಗೆ ಫೋನಾಯಿಸಿದ್ದ ಆರೋಪಿ!
ರಿವಾರಿ(ಹರ್ಯಾಣ), ಸೆಪ್ಟೆಂಬರ್ 17: ಹರ್ಯಾಣದ ರಿವಾರಿಯಲ್ಲಿ ಇತ್ತೀಚೆಗೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಓರ್ವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಮುಖ ಆರೋಪಿಯೇ ವೈದ್ಯರಿಗೂ ಫೋನ್ ಮಾಡಿ ಸಂತ್ರಸ್ಥೆಯ ಬಗ್ಗೆ ಮಾಹಿತಿ ನೀಡಿದ್ದ ಎಂಬ ಆಘಾತಕಾರಿ ಅಂಶ ವಿಚಾರಣೆಯ ವೇಳೆ ಹೊರಬಿದ್ದಿದೆ.
ನಿಶು ಫೋಗಟ್ ಎಂಬ ವ್ಯಕ್ತಿಯೇ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಈ ಸಾಮೂಹಿಕ ಅತ್ಯಾಚಾರದ ಸಂಪೂರ್ಣ ಯೋಜನೆಯನ್ನೂ ಹೂಡಿದ್ದು ಈತನೇ ಎಂಬುದು ವಿಶೇಷ ತನಿಖಾ ದಳ(ಎಸ್ಐಟಿ)ದ ವಿಚಾರಣೆ ವೇಳೆ ತಿಳಿದುಬಂದಿದೆ.
ಸಿಬಿಎಸ್ ಇ rank ವಿದ್ಯಾರ್ಥಿನಿ ಮೇಲೆ ಸುಮಅರು 12 ಜನ ಅತ್ಯಾಚಾರ ಎಸಗಿದ್ದು, ಈ ಭೀಕರ ಕೃತ್ಯಕ್ಕೆ ದೇಶದೆಲ್ಲೆಡೆ ಖಂಡನೆ ವ್ಯಕ್ತವಾಗಿದೆ. ಪಿಯುಸಿ ಪರೀಕ್ಶಃಎ ತಯಾರಿಯಲ್ಲಿದ್ದ ವಿದ್ಯಾರ್ಥಿನಿ ಕೋಚಿಂಗ್ ಗಕ್ಲಾಸ್ ಗೆ ತೆರಳಲು ಬಸ್ ಗಾಗಿ ಕಾಯುತ್ತ ನಿಂತಿದ್ದಾಗ ಬೈಕಿನಲ್ಲಿ ಬಂದ ಮೂವರು ಆಕೆಯನ್ನು ಅಪಹರಿಸಿದ್ದು, ಹತ್ತಿರದದ ಜಮೀನಿನಲ್ಲಿದ್ದ ಬಾವಿಯೊಂದರಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು.

ನಂತರ ಮತ್ತೆ ಆಕೆಯನ್ನು ಅದೇ ಬಸ್ ಸ್ಟಾಪ್ ಬಳಿ ತಂದು ಎಸೆದು ಹೋಗಿದ್ದರು. 'ಆಕೆ ಬಸ್ ಸ್ಟಾಪ್ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾಳೆ' ಎಂದು ಆರೋಪಿಗಳೇ ಆಕೆಯ ಮನೆಗೆ ಫೋನ್ ಮಾಡಿ ತಿಳಿಸಿದ್ದರು.
ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ಥೆ, ತನ್ನ ಮೇಲೆ ಅತ್ಯಾಚಾರ ಎಸಗಿದ್ದು, ತಮ್ಮದೇ ಊರಿನವರು ಎಂಬ ಮಾಹಿತಿಯನ್ನು ಪೊಲಿಸರಿಗೆ ನೀಡಿದ್ದಳು. ಮಾತ್ರವಲ್ಲ, ಅವರನ್ನು ಆಕೆ ಗುರುತಿಸಿದ್ದಳು. ಇದರಿಂದಾಗಿ ಆರೋಪಿಗಳನ್ನು ಸುಲಭವಾಗಿ ಪತ್ತೆ ಮಾಡಿರುವ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಉಳಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ.












Click it and Unblock the Notifications