ಸೋನಿಯಾ ನಾರಂಗ್ ಸೇರಿದಂತೆ 6 NIA ಅಧಿಕಾರಿಗಳಿಗೆ ಗೌರವ
ನವದೆಹಲಿ, ಜನವರಿ 26: ಕರ್ನಾಟಕದಿಂದ ಕೇಂದ್ರ ಸೇವೆಗೆ ತೆರಳಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿ ಸೋನಿಯಾ ನಾರಂಗ್ ಸೇರಿದಂತೆ 6 ಮಂದಿ ಎನ್ಐಎ ಅಧಿಕಾರಿಗಳಿಗೆ ಪೊಲೀಸ್ ಪ್ರಶಸ್ತಿ ಲಭಿಸಿದೆ. ಗಣರಾಜ್ಯೋತ್ಸವ ಅಂಗವಾಗಿ ವಿಶಿಷ್ಟ ಸೇವೆ ಸಲ್ಲಿಸಿದ ಐಪಿಎಸ್ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಪೊಲೀಸ್ ಪದಕ ಪ್ರಶಸ್ತಿ ಗೌರವ ನೀಡಲಾಗುತ್ತದೆ.
NIA ಕಾನ್ಸ್ ಟೇಬಲ್ ವಿನೋದ್ ಕುಮಾರ್ ಕೆಎಸ್ ಅವರಿಗೆ ವಿಶಿಷ್ಟ ಸೇವೆ ಸಲ್ಲಿಸಿದ್ದಕ್ಕಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ ನೀಡಲಾಗುತ್ತಿದೆ.
ಜಾರಿ ನಿರ್ದೇಶನಾಲಯದ ಹೆಚ್ಚುವರಿ ನಿರ್ದೇಶಕಿ, , ಈ ಹಿಂದಿನ ಎನ್ಐಎ ಡಿಐಜಿ 2002ನೇ ಬ್ಯಾಚಿನ ಐಪಿಎಸ್ ಅಧಿಕಾರಿ ಸೋನಿಯಾ ನಾರಂಗ್, ಹೈದರಾಬಾದ್ ಎನ್ಐಎ ಡಿವೈಎಸ್ಪಿ ರಾಜೇಶ್ ಟಿ ವಿ, ಕೋಲ್ಕತಾ ಎನ್ಐಎ ಸಹಾಯಕ ತಪನ್ ಕುಮಾರ್ ಘೋಶ್, ಮುಖ್ಯ ಕಾನ್ಸ್ ಟೇಬಲ್ ಮಹೇಶ್ ಕುಮಾರ್ ಯಾದವ್, ಲಕ್ನೋ ಎನ್ಐಎ ಮುಖ್ಯ ಕಾನ್ಸ್ ಟೇಬಲ್ ಅವರಿಗೂ ಪೊಲೀಸ್ ಪದಕ ಲಭಿಸಿದೆ.

2002 ರಾಜ್ಯ ಕೇಡರ್ ನ ಐಪಿಎಸ್ ಅಧಿಕಾರಿಯಾಗಿರುವ ಸೋನಿಯಾ ನಾರಂಗ್ ಈ ಹಿಂದೆ ಸಿಐಡಿ ಐಡಿಜಿಪಿಯಾಗಿದ್ದರು. ಲೋಕಾಯುಕ್ತ ಎಸ್ಪಿಯಾಗಿದ್ದ ವೇಳೆ ಅವರು ಹಲವು ಮಹತ್ತರ ತನಿಖೆಗಳನ್ನು ನಡೆಸಿ ಭ್ರಷ್ಟರನ್ನು ಹೆಡೆಮುರಿ ಕಟ್ಟಿದ್ದರು.
ಸೋನಿಯಾ ನಾರಂಗ್ ಅವರು ಮೂಲತಃ ಚಂಡೀಗಢ್‌ನವರು. ಬಿಎ ಪದವಿ ಪಡೆದ ಬಳಿಕ ಅವರು ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.












Click it and Unblock the Notifications