ಈ ಕ್ಷಣ ಚುನಾವಣೆಯಾದ್ರೆ ಮೋದಿಯದೇ ಜಯಭೇರಿ: ರಿಪಬ್ಲಿಕ್ ಸಮೀಕ್ಷೆ
ನವದೆಹಲಿ, ಜನವರಿ 19: ಜಿಎಸ್ಟಿ, ಅಪನಗದೀಕರಣ, ಜಿಡಿಪಿ ದರದಲ್ಲಿ ಇಳಿಕೆ ಇತ್ಯಾದಿ ಕಾರಣಗಳು ಕೇಂದ್ರದ ಎನ್ ಡಿಎ(ನ್ಯಾಶನಲ್ ಡೆಮಾಕ್ರಟಿಕ್ ಅಲಿಯನ್ಸ್) ಸರ್ಕಾರದ ಜನಪ್ರಿಯತೆಯನ್ನು ಕಡಿಮೆ ಮಾಡಿದೆಯಾ? 'ಖಂಡಿತ ಇಲ್ಲ' ಎನ್ನುತ್ತದೆ ಅರ್ನಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿ ಮತ್ತು ಸಿವೋಟರ್ ನಡೆಸಿದ ಸಮೀಕ್ಷೆ.
ದೇಶದಲ್ಲಿ ತಕ್ಷಣವೇ ಲೋಕಸಭಾ ಚುನಾವಣೆ ನಡೆದಲ್ಲಿ, 543 ಲೋಕಸಭಾ ಕ್ಷೇತ್ರಗಳ ಪೈಕಿ ಎನ್ ಡಿಎ ಸರ್ಕಾರ 335 ಸ್ಥಾನಗಳನ್ನು ಗೆಲ್ಲಲಿದ್ದು, ಯುಪಿಎ(ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಿಯನ್ಸ್) ಸರ್ಕಾರ 89 ಸ್ಥಾನ ಗೆಲ್ಲಲಷ್ಟೇ ಶಕ್ತವಾಗಲಿದೆ ಎಂದು ಈ ಸಮೀಕ್ಷೆ ಹೇಳಿದೆ.
2014 ರಲ್ಲಿ 16 ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮೈತ್ರಿಕೂಟ 336(543) ಸ್ಥಾನ ಪಡೆದು ಬಹುಮತ ಪಡೆದಿತ್ತು. ಈ ಚುನಾವಣೆಯಲ್ಲಿ ಸೋನಿಯಾ ಗಾಂಧಿ ನೇತೃತ್ವದ ಯುಪಿಎ ಮೈತ್ರಿಕೂಟ ಕೇವಲ 58 ಸ್ಥಾನವನ್ನು ಹರಸಾಹಸ ಪಟ್ಟು ಗೆದ್ದಿತ್ತು. ಇತರರು 149 ಸ್ಥಾನ ಗೆದ್ದಿದ್ದರು.
ಈಗಲೇ ಚುನಾವಣೆ ನಡೆದಲ್ಲಿ ಇದೇ ಸ್ಥಿತಿ ಮರುಕಳಿಸಲಿದ್ದು, ಎನ್ ಡಿಎ 335, ಯುಪಿಎ 89 ಮತ್ತು ಇತರರು 119 ಸ್ಥಾನ ಗೆಲ್ಲುತ್ತಾರೆಂದು ಸಮೀಕ್ಷೆ ಹೇಳಿದೆ. ಯಾವ ರಾಜ್ಯದಲ್ಲಿ, ಯಾವ ಪಕ್ಷ ಎಷ್ಟು ಸ್ಥಾನ ಗೆಲ್ಲಬಹುದು ಎಂಬ ಅಂದಾಜು ಪಟ್ಟಿ ಇಲ್ಲಿದೆ.

ಉತ್ತರ ಪ್ರದೇಶ
ಉತ್ತರ ಪ್ರದೇಶ ಅತ್ಯಂತ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯ. 80 ಲೋಕಸಭಾ ಕ್ಷೇತ್ರಗಳಲ್ಲಿ 2014 ರ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ 73 ಸ್ಥಾನ ಗೆದ್ದು ಅಭೂತಪೂರ್ವ ಯಶಸ್ಸು ಪಡೆದಿತ್ತು. ಈಗ ಚುನಾವಣೆ ನಡೆದಲ್ಲಿ ಅದು 60 ಸ್ಥಾನ ಗೆಲ್ಲಲಿದ್ದು, ಯುಪಿಎ 18, ಇತರರು 2 ಸ್ಥಾನ ಗೆಲ್ಲಲಿದ್ದಾರೆ.
2014ರಲ್ಲಿ: ಎನ್ ಡಿಎ 73, ಯುಪಿಎ 2 ಇತರರು 5

ಬಿಹಾರ
ಬಿಹಾರ ರಾಜ್ಯದಲ್ಲಿ ಒಟ್ಟು 40 ಲೋಕಸಭಾ ಕ್ಷೇತ್ರಗಳಿದ್ದು, ಇದರಲ್ಲಿ ಎನ್ ಡಿಎ 36, ಯುಪಿಎ 4, ಇತರರು 0 ಸ್ಥಾನ ಗೆಲ್ಲಲಿದ್ದಾರೆ.
2014 : ಎನ್ ಡಿಎ 31,ಯುಪಿಎ 7 ಇತರರು 2

ಕರ್ನಾಟಕ
ದಕ್ಷಿಣ ಭಾರತದಲ್ಲಿ ಸದ್ಯಕ್ಕೆ ಕಾಂಗ್ರೆಸ್ ಆಡಳಿತವಿರುವ ಅತೀ ದೊಡ್ಡ ರಾಜ್ಯ ಕರ್ನಾಟಕ. ಇಲ್ಲಿ ಒಟ್ಟು 28 ಲೋಕ ಸಭಾ ಕ್ಷೇತ್ರಗಳಿದ್ದು, ತತ್ ಕ್ಷಣ ಚುನಾವಣೆ ನಡೆದರೆ ಎನ್ ಡಿಎ 22 ಸ್ಥಾನ ಗೆಲ್ಲಬಹುದು. ಯುಪಿಎ 5 ಇತರರು 1 ಸ್ಥಾನ ಗೆಲ್ಲಬಹುದು ಎಂದು ರಿಪಬ್ಲಿಕ್ ಹೇಳಿದೆ.
2014 : ಎನ್ ಡಿಎ 17, ಯುಪಿಎ 9, ಇತರರು 2

ಮಹಾರಾಷ್ಟ್ರ
ಮಹಾರಾಷ್ಟ್ರದಲ್ಲಿ ಒಟ್ಟು 48 ಸ್ಥಾನಗಳದ್ದು, ಎನ್ ಡಿಎ, 44 ಯುಪಿಎ 2, ಇತರರು 2 ಸ್ಥಾನ ಗೆಲ್ಲಲಿದ್ದಾರೆ. 2014 : ಎನ್ ಡಿಎ 42 ಯುಪಿಎ 6 ಇತರರು 0

ಆಂಧ್ರಪ್ರದೇಶ
ಆಂಧ್ರಪ್ರದೇಶದಲ್ಲಿ ಒಟ್ಟು 25 ಲೋಕಸಭಾ ಕ್ಷೇತ್ರಗಳದ್ದು, ಎನ್ ಡಿಎ 12, ಯುಪಿಎ 0, ಇತರರು 13 ಸೀಟು ಗೆಲ್ಲಲಿದ್ದಾರೆ.
2014 : ಎನ್ ಡಿಎ17, ಯುಪಿಎ 0 ಇತರರು 8

ಒಡಿಶಾ
ಒಡಿಶಾದಲ್ಲಿರುವ ಲೋಕಸಭಾ ಕ್ಷೇತ್ರಗಳು 21. ಅವುಗಳಲ್ಲಿ ಎನ್ ಡಿಎ 13 ಯುಪಿಎ 0 ಇತರರು 8 ಸೀಟು ಗೆಲ್ಲಲಿವೆ.
2014: ಎನ್ ಡಿಎ 1 ಯುಪಿಎ 0 ಇತರರು 20

ದೆಹಲಿ
ರಾಜಧಾನಿ ದೆಹಲಿಯಲ್ಲಿರುವ ದೆಹಲಿ 7 ಲೋಕಸಭಾ ಕ್ಷೇತ್ರಗಳಲ್ಲಿ 2014 ರಂತೆ, ಈ ಬಾರಿಯೂ ಎನ್ ಡಿಎ 7 ಸ್ಥಾನಗಳನ್ನೂ ಗೆಲ್ಲಲಿದೆ.
2014 : ಎನ್ ಡಿಎ 7 ಯುಪಿಎ 0 ಇತರರು 0

ಗುಜರಾತ್
ಮೋದಿಯವರ ನಾಡು ಗುಜರಾತ್ ನಲ್ಲಿ ಒಟ್ಟು 26 ಲೋಕಸಭಾ ಕ್ಷೇತ್ರಗಳಿವೆ. ಕಳೆದ ಚುನಾವಣೆಯಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ದಾಖಲೆ ಬರೆದು 26 ಸ್ಥಾನಗಳನ್ನೂ ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ಈ ಬಾರಿ ಎನ್ ಡಿಎ 23 ಯುಪಿಎ 3 ಇತರರು 0 ಸೀಟು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.
2014: ಎನ್ ಡಿಎ 26 ಯುಪಿಎ 0 ಇತರರು 0

ಕೇರಳ
ಕೇರಳದಲ್ಲಿ ಕಳೆದ ಚುನಾವಣೆಯಲ್ಲೇ ಖಾತೆ ತೆರೆಯುವ ಅವಕಾಶವನ್ನು ಕೆಲವೇ ಮತಗಳ ಅಂತರದಿಂದ ತಪ್ಪಿಸಿಕೊಂಡ ಎನ್ ಡಿಎ ಈ ಬಾರಿ 1 ಸ್ಥಾನ ಗೆದ್ದು ಖಾತೆ ತೆರಯಬಹುದು ಎಂದು ಸಮೀಕ್ಷೆ ಹೇಳಿದೆ. ಇಲ್ಲಿನ 20 ಲೋಕಸಭಾ ಸ್ಥಾನಗಳ ಪೈಕಿ ಎನ್ ಡಿಎ 1 ಯುಪಿಎ 12 ಇತರರು 7 ಸ್ಥಾನ ಗೆಲ್ಲಲಿವೆ.
2014: ಎನ್ ಡಿಎ 0 ಯುಪಿಎ 12 ಇತರರು 8

ಹರ್ಯಾಣ
ಹರ್ಯಾಣದಲ್ಲಿ ಒಟ್ಟು 10 ಲೋಕಸಭಾ ಸ್ಥಾನಗಳಿವೆ. ಇವುಗಳಲ್ಲಿ ಎನ್ ಡಿಎ 8 ಯುಪಿಎ 1 ಇತರರು 1 ಸ್ಥಾನ ಗೆಲ್ಲಬಹುದು.
2014: ಎನ್ ಡಿಎ 7 ಯುಪಿಎ 1 ಇತರರು 2

ಅಂಡಮಾನ್ ನಿಕೋಬಾರ್
ಅಂಡಮಾನ್ ನಿಕೋಬಾರ್ ನಲ್ಲಿರುವ 1 ಲೋಕಸಭಾ ಕ್ಷೇತ್ರವನ್ನು ಎನ್ ಡಿಎ ಗೆಲ್ಲಲಿದೆ.
2014: ಎನ್ ಡಿಎ 1 ಯುಪಿಎ 0 ಇತರರು 0

ಚಂಡೀಗಢ
ಚಂಡೀಗಢ ರಾಜ್ಯದ 1 ಲೋಕಸಭಾ ಕ್ಷೇತ್ರವನ್ನು ಎನ್ ಡಿಎ ಗೆಲ್ಲಲಿದೆ.
2014: ಎನ್ ಡಿಎ 1 ಯುಪಿಎ 0 ಇತರರು 0

ಅರುಣಾಚಲ ಪ್ರದೇಶ
ಅರುಣಾಚಲ ಪ್ರದೇಶದಲ್ಲಿರುವ 2 ಲೋಕಸಭಾ ಕ್ಷೇತ್ರಗಳನ್ನೂ ಎನ್ ಡಿಎ ಮೈಗತ್ರಿಕೂಟ ಗೆಲ್ಲಿದೆ.
2014: ಎನ್ ಡಿಎ 1 ಯುಪಿಎ 1 ಇತರರು 0

ಹಿಮಾಚಲ ಪ್ರದೇಶ
ಹಿಮಾಚಲ ಪ್ರದೇಶದ ಒಟ್ಟು 4 ಸ್ಥಾನಗಳನ್ನು ಎನ್ ಡಿಎ ಕ್ಲೀನ್ ಸ್ವೀಪ್ ಮಾಡಲಿದೆ.
2014 : ಎನ್ ಡಿಎ 4 ಯುಪಿಎ 0 ಇತರರು 0

ಮಣಿಪುರ
ಮಣಿಪುರದ 2 ಲೋಕಸಭಾ ಕ್ಷೇತ್ರಗಳಲ್ಲಿ ಎರಡನ್ನೂ ಎನ್ ಡಿಎ ಗೆಲ್ಲಲಿದೆ.
2014: ಎನ್ ಡಿಎ 0 ಯುಪಿಎ 2 ಇತರರು 0

ಮಧ್ಯಪ್ರದೇಶ
ಮಧ್ಯಪ್ರದೇಶ ರಾಜ್ಯದ 29 ಲೋಕಸಭಾ ಕ್ಷೇತ್ರಗಳ ಪೈಕಿ
ಎನ್ ಡಿಎ 23 ಯುಪಿಎ 6 ಇತರರು 0 ಸ್ಥಾನ ಗೆಲ್ಲಲಿದ್ದಾರೆ.
2014: ಎನ್ ಡಿಎ 27 ಯುಪಿಎ 2 ಇತರರು 0

ಪಂಜಾಬ್
ಪಂಜಾಬ್ ನ ಒಟ್ಟು 13 ಸ್ಥಾನಗಳ ಪೈಕಿ ಎನ್ ಡಿಎ 2 ಯುಪಿಎ 9 ಇತರರು 2 ಸ್ಥಾನ ಗೆಲ್ಲಲಿವೆ.
2014 : ಎನ್ ಡಿಎ 6 ಯುಪಿಎ 3 ಇತರರು 4

ಛತ್ತೀಸ್ ಗಢ
ಛತ್ತೀಸ್ ಗಢದ 11 ಸ್ಥಾನಗಳಲ್ಲಿ ಎನ್ ಡಿಎ 4 ಯುಪಿಎ 7 ಇತರರು 0 ಸ್ಥಾನ ಗೆಲ್ಲಲಿದ್ದಾರೆ.
2014: ಎನ್ ಡಿಎ 10 ಯುಪಿಎ 1 ಇತರರು 0

ರಾಜಸ್ಥಾನ
ರಾಜಸ್ಥಾನದ ಒಟ್ಟು 25 ಸ್ಥಾನಗಳಲ್ಲಿ ಎನ್ ಡಿಎ 20 ಯುಪಿಎ 5 ಇತರರು 0 ಸ್ಥಾನ ಗೆಲ್ಲಲಿದ್ದಾರೆ.
2014 :ಎನ್ ಡಿಎ 25 ಯುಪಿಎ 0 ಇತರರು 0

ಗೋವಾ
ಗೋವಾದ 2 ಲೋಕಸಭಾ ಕ್ಷೇತ್ರಗಳಲ್ಲಿ ಎರಡನ್ನೂ ಎನ್ ಡಿಎ ಗೆಲ್ಲಿದೆ.
2014 : ಎನ್ ಡಿಎ 2 ಯುಪಿಎ 0 ಇತರರು 0

ಜಮ್ಮು ಮತ್ತು ಕಾಶ್ಮೀರ
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿರುವ 6 ಲೋಕಸಭಾ ಕ್ಷೇತ್ರಗಳಲ್ಲಿ ಎನ್ ಡಿಎ 4 ಯುಪಿಎ 2 ಇತರರು 0 ಸ್ಥಾನ ಗೆಲ್ಲಲಿದ್ದಾರೆ.
2014: ಎನ್ ಡಿಎ 6 ಯುಪಿಎ 0 ಇತರರು 0

ಅಸ್ಸಾಂ
ಅಸ್ಸಾಂನಲ್ಲಿರುವ 14 ಸ್ಥಾನಗಳಲ್ಲಿ
ಎನ್ ಡಿಎ 9 ಯುಪಿಎ 4 ಇತರರು 1 ಸ್ಥಾನ ಗೆಲ್ಲಲಿದ್ದಾರೆ.
2014: ಎನ್ ಡಿ ಎ 8 ಯುಪಿಎ 3 ಇತರರು 3

ಲಕ್ಷದ್ವೀಪ್
ಲಕ್ಷದ್ವೀಪ್ ದಲ್ಲಿರುವ 1 ಸ್ಥಾನವನ್ನು
ಯುಪಿಎ ಗೆಲ್ಲಿದೆ.
2014: ಎನ್ ಡಿಎ 0 ಯುಪಿಎ 1 ಇತರರು 0

ತೆಲಂಗಾಣ
ತೆಲಂಗಾಣದಲ್ಲಿರುವ 17 ಸ್ಥಾನಗಳಲ್ಲಿ ಎನ್ ಡಿಎ 3 ಯುಪಿಎ 2 ಇತರರು 12 ಸ್ಥಾನ ಗೆಲ್ಲಲಿದ್ದಾರೆ.
2014: ಎನ್ ಡಿಎ 2 ಯುಪಿಎ 2 ಇತರರು 13

ಜಾರ್ಖಂಡ್
ಜಾರ್ಖಂಡ್ ನಲ್ಲಿರುವ 14 ಸ್ಥಾನಗಳಲ್ಲಿ ಎನ್ ಡಿಎ 7 ಯುಪಿಎ 6 ಇತರರು 1 ಸ್ಥಾನ ಗೆಲ್ಲಲಿದ್ದಾರೆ.
2014: ಎನ್ ಡಿಎ 12 ಯುಪಿಎ 2 ಇತರರು 0

ತಮಿಳುನಾಡು
ತಮಿಳುನಾಡಿನಲ್ಲಿ 39 ಲೋಕಸಭಾ ಸ್ಥಾನಗಳಿದ್ದು
ಎನ್ ಡಿಎ 1 ಯುಪಿಎ 0 ಇತರರು 38 ಸ್ಥಾನ ಗೆಲ್ಲಲಿವೆ.

ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳದಲ್ಲಿ ಒಟ್ಟು 41 ಸ್ಥಾನಗಳಿದ್ದು, ಅವುಗಳಲ್ಲಿ ಎನ್ ಡಿಎ 12 ಯುಪಿಎ 1 ಇತರರು 29 ಸ್ಥಾನ ಗೆಲ್ಲಲಿದ್ದಾರೆ.

ಪಾಂಡಿಚೇರಿ
ಪಾಂಡಿಚೇರಿಯಲ್ಲಿರುವ 1 ಸ್ಥಾನವನ್ನು ಎನ್ ಡಿಎ ಗೆಲ್ಲಲಿದೆ.
2014: ಎನ್ ಡಿಎ 1 ಯುಪಿಎ 0 ಇತರರು 0
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications