• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಮಂದಿರಗಳು ಯಾವಾಗ ಓಪನ್?: ಪ್ರಕಾಶ್ ಜಾವಡೇಕರ್ ಏನಂದ್ರು?

|

ನವದೆಹಲಿ, ಜೂನ್ 3: ದೇಶದಲ್ಲಿ ಕೊರೊನಾವೈರಸ್ ಹಾವಳಿ ಹೆಚ್ಚಾಗುತ್ತಿದ್ದಂತೆ, ಮಾಲ್, ಚಿತ್ರಮಂದಿರಗಳು ಎಲ್ಲವನ್ನೂ ಬಂದ್ ಮಾಡಲಾಗಿತ್ತು.

ಜೂನ್‌ನಲ್ಲಿ ಕೊರೊನಾ ಸ್ಥಿತಿಗತಿ ನೋಡಿಕೊಂಡು ಚಿತ್ರಮಂದಿರಗಳನ್ನು ತೆರೆಯುವುದಾಗಿ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ಚಿತ್ರೀಕರಣ ಪ್ರಾರಂಭ, ಥಿಯೇಟರ್ ಆರಂಭಕ್ಕಾಗಿ ಸಿಎಂಗೆ ಚಿತ್ರರಂಗ ಮನವಿಚಿತ್ರೀಕರಣ ಪ್ರಾರಂಭ, ಥಿಯೇಟರ್ ಆರಂಭಕ್ಕಾಗಿ ಸಿಎಂಗೆ ಚಿತ್ರರಂಗ ಮನವಿ

ಕೊವಿಡ್-19 ಸ್ಥಿತಿಗತಿಯನ್ನು ಈ ತಿಂಗಳು ಪರಾಮರ್ಶಿಸಿ ಸಿನೆಮಾ ಹಾಲ್ ಗಳನ್ನು ಮರು ಆರಂಭಿಸುವ ಬಗ್ಗೆ ಚಿಂತಿಸಲಾಗುವುದು ಹೇಳಿದ್ದಾರೆ.ಹಲವು ರಾಜ್ಯಗಳಲ್ಲಿ ಜೂನ್ 8ರಿಂದ ಮಾಲ್‌ಗಳನ್ನು ತೆರೆಯಲು ಅನುಮತಿ ಸಿಕ್ಕಿದೆ. ಆದರೆ ಥಿಯೇಟರ್‌ಗಳ ಬಗ್ಗೆ ಇನ್ನೂ ಕ್ರಮ ಕೈಗೊಂಡಿಲ್ಲ.

ನಿರ್ಮಾಪಕರ ಸಂಘದ ಜೊತೆ ವಿಡಿಯೋ ಸಂವಾದ

ನಿರ್ಮಾಪಕರ ಸಂಘದ ಜೊತೆ ವಿಡಿಯೋ ಸಂವಾದ

ವಿಡಿಯೊ ಕಾನ್ಫರೆನ್ಸ್ ಮೂಲಕ ಚಲನಚಿತ್ರ ನಿರ್ಮಾಪಕರ ಸಂಘ, ಸಿನೆಮಾ ಪ್ರದರ್ಶಕರು ಮತ್ತು ಚಿತ್ರೋದ್ಯಮದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ಸಚಿವರು ಈ ಮಾತುಗಳನ್ನು ಹೇಳಿದ್ದಾರೆ.

ಚಲನಚಿತ್ರೋದ್ಯಮ ವಲಯಕ್ಕೆ ನಷ್ಟ

ಚಲನಚಿತ್ರೋದ್ಯಮ ವಲಯಕ್ಕೆ ನಷ್ಟ

ಕೊರೊನಾ ವೈರಸ್ ನಿಂದ ಲಾಕ್ ಡೌನ್ ಆದ ನಂತರ ದೇಶಾದ್ಯಂತ ಚಲನಚಿತ್ರೋದ್ಯಮ ವಲಯದಲ್ಲಿ ಉಂಟಾಗಿರುವ ನಷ್ಟ ಮತ್ತು ತೊಂದರೆ ಬಗ್ಗೆ ಈ ಪ್ರತಿನಿಧಿಗಳು ಈಗಾಗಲೇ ಸಚಿವರಿಗೆ ಮನವಿಗಳನ್ನು ಸಲ್ಲಿಸಿದ್ದರು.

ಸಿನೆಮಾ ಹಾಲ್ ಗಳನ್ನು ತೆರೆಯುವ ಬಗ್ಗೆ ಮಾಹಿತಿ ನೀಡಿದ ಸಚಿವರು ಈ ತಿಂಗಳು ಕೊವಿಡ್-19 ಸ್ಥಿತಿಗತಿಗಳನ್ನು ನೋಡಿಕೊಂಡು ನಿರ್ಧರಿಸಲಾಗುವುದು ಎಂದರು.

ಚಿತ್ರ ನಿರ್ಮಾಣ ಚಟುವಟಿಕೆಗಳು

ಚಿತ್ರ ನಿರ್ಮಾಣ ಚಟುವಟಿಕೆಗಳು

ನಿರ್ಮಾಣಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಆರಂಭಿಸುವುದರ ಬಗ್ಗೆ ಮಾತನಾಡಿದ ಸಚಿವ ಜಾವದೇಕರ್ ಸರ್ಕಾರದಿಂದ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದರು.

ಭಾರತದಾದ್ಯಂತ 9500ಕ್ಕೂ ಹೆಚ್ಚು ಸಿನೆಮಾ ಹಾಲ್

ಭಾರತದಾದ್ಯಂತ 9500ಕ್ಕೂ ಹೆಚ್ಚು ಸಿನೆಮಾ ಹಾಲ್

ಭಾರತದಾದ್ಯಂತ 9,500ಕ್ಕೂ ಹೆಚ್ಚು ಸಿನೆಮಾ ಹಾಲ್ ಗಳಿದ್ದು ಟಿಕೆಟ್ ಮಾರಾಟದಿಂದ ಪ್ರತಿದಿನ ಸುಮಾರು 30 ಕೋಟಿ ರೂಪಾಯಿ ಆದಾಯ ಬರುತ್ತದೆ.

ಚಲನಚಿತ್ರೋದ್ಯಮದಲ್ಲಿ ತೊಡಗಿಕೊಂಡಿರುವ ಅನೇಕ ಕಾರ್ಮಿಕರಿಗೆ ಆರ್ಥಿಕ ಸಂಕಷ್ಟ ಉಂಟಾಗಿದ್ದು ವೇತನದಲ್ಲಿ ಸಬ್ಸಿಡಿ, 3 ವರ್ಷಗಳವರೆಗೆ ಬಡ್ಡಿರಹಿತ ಸಾಲ, ತೆರಿಗೆ ಮತ್ತು ಸುಂಕ ವಿನಾಯ್ತಿ, ವಿದ್ಯುತ್ ಬಿಲ್ ಕಡಿತ ಹೀಗೆ ಹತ್ತಾರು ಬೇಡಿಕೆಗಳನ್ನು ಉದ್ಯಮದ ಪ್ರತಿನಿಧಿಗಳು ಸಚಿವರ ಮುಂದಿಟ್ಟಿದ್ದರು.

English summary
Reopening of cinema halls will be examined after assessing the status of the COVID-19 pandemic in the month of June, Information and Broadcasting Minister Prakash Javadekar said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X