ವಾಹನ ಮಾಲೀಕರಿಗೆ ತಾತ್ಕಾಲಿಕ ನೆಮ್ಮದಿ: ಫಾಸ್ಟ್ಯಾಗ್ ಕಡ್ಡಾಯ ಸದ್ಯಕ್ಕಿಲ್ಲ
ನವದೆಹಲಿ, ಡಿಸೆಂಬರ್ 14: ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಎಲ್ಲ ಸುಂಕದ ಫ್ಲಾಜಾಗಳಲ್ಲಿ ಸಾಗುವ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯದ ಗಡುವನ್ನು ಮತ್ತೆ ವಿಸ್ತರಿಸಲಾಗಿದೆ. ಇದರಿಂದ ವಾಹನ ಮಾಲೀಕರಿಗೆ ಸದ್ಯಕ್ಕೆ ನೆಮ್ಮದಿ ದೊರೆತಂತಾಗಿದೆ.
ಡಿ. 1ರಿಂದ ಅನ್ವಯವಾಗುವಂತೆ ದೇಶದಾದ್ಯಂತ ಎಲ್ಲ ರಾಷ್ಟ್ರೀಯ ಹೆದ್ದಾರಿಗಳ ಎಲ್ಲ ಟೋಲ್ ಪ್ಲಾಜಾಗಳಲ್ಲಿಯೂ ವಾಹನಗಳು ವಿದ್ಯುನ್ಮಾನ ಸುಂಕ ಪಾವತಿಗೆ ಅನುಕೂಲವಾಗುವಂತೆ ಫಾಸ್ಟ್ಯಾಗ್ ಹೊಂದುವುದನ್ನು ಕಡ್ಡಾಯಗೊಳಿಸಲಾಗಿತ್ತು. ಬಳಿಕ ಅದನ್ನು ಡಿ. 15ಕ್ಕೆ ವಿಸ್ತರಿಸಲಾಗಿತ್ತು. ಈಗ ಆ ಗಡುವು ಅಂತ್ಯಗೊಳ್ಳುವ ಒಂದು ದಿನ ಮುಂಚೆಯಷ್ಟೇ ಒಂದು ತಿಂಗಳ ಅವಧಿವರೆಗೆ ಗಡುವನ್ನು ವಿಸ್ತರಿಸಿ ಕೇಂದ್ರ ಸರ್ಕಾರ ಸೂಚನೆ ಹೊರಡಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ (ಆರ್‌ಎಫ್‌ಐಡಿ) ಸ್ಟಿಕ್ಕರ್‌ಗಳ ಪೂರೈಕೆಯ ಕೊರತೆಯಿಂದಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.
ಸುಂಕದ ಪ್ಲಾಜಾಗಳಲ್ಲಿನ ಎಲ್ಲ ಲೇನ್‌ಗಳನ್ನೂ ಫಾಸ್ಟ್ಯಾಗ್ ಲೇನ್‌ಗಳನ್ನಾಗಿ ಪರಿವರ್ತಿಸಲು 45 ದಿನಗಳ ಹೆಚ್ಚುವರಿ ಸಮಯ ನೀಡುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪತ್ರ ಬರೆದಿದೆ.

ಚಿಪ್ ಆಮದು ವಿಳಂಬ
ಡಿ. 15ರವರೆಗೂ ಟ್ಯಾಗ್‌ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಇದರಿಂದ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ ಎಂದು ಪ್ರಾಧಿಕಾರ ಪತ್ರದಲ್ಲಿ ತಿಳಿಸಿದೆ.
ಆರ್‌ಎಫ್‌ಐಡಿಯಲ್ಲಿ ಬಳಸಲಾಗುವ ಚಿಪ್ ಅನ್ನು ಆಮದು ಮಾಡಿಕೊಳ್ಳಲಾಗಿದ್ದು, ಅದರ ಪೂರೈಕೆಗೆ ಆರು ವಾರಗಳ ಸಮಯ ಬೇಕಾಗುತ್ತದೆ. ಎಲ್ಲ ತಯಾರಕರ ಒಟ್ಟಾರೆ ಸರಾಸರಿ ಉತ್ಪಾದನಾ ಸಾಮರ್ಥ್ಯವು ದಿನಕ್ಕೆ 30 ರಿಂದ 50 ಸಾವಿರದವರೆಗೆ ಇರುತ್ತದೆ.

ಜನರಿಗೆ ಫಾಸ್ಟ್ಯಾಗ್ ಸಿಗುತ್ತಿಲ್ಲ
ಬ್ಯಾಂಕ್‌ಗಳು ಮತ್ತು ಇತರೆ ಫಾಸ್ಟ್ಯಾಗ್ ಮಾರಾಟ ಪೂರೈಕೆದಾರರು ಉತ್ಪಾದನಾ ಸಾಮರ್ಥ್ಯದ ಅನಿಶ್ಚಿತತೆಯಿಂದ ತೊಂದರೆಗೆ ಸಿಲುಕಿದ್ದಾರೆ. ಪ್ರಸ್ತುತ ಅಂದಾಜು 18 ಲಕ್ಷ ಟ್ಯಾಗ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಚಿಪ್‌ಗಳ ಆಮದು ಮಾಡಿಕೊಳ್ಳುವ ಸಮಯ ಮತ್ತು ಅಗತ್ಯ ಪ್ರಮಾಣದ ಟ್ಯಾಗ್‌ಗಳ ಉತ್ಪಾದನೆಗಳ ಕೊರತೆಯಿಂದ ಮಾರುಕಟ್ಟೆಯಲ್ಲಿ ಫಾಸ್ಟ್ಯಾಗ್ ಲಭ್ಯತೆಗೆ ಹಿನ್ನಡೆಯಾಗಿದೆ. ಇದರಿಂದಾಗಿ ನಾಗರಿಕರಿಗೆ ಫಾಸ್ಟ್ಯಾಗ್ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರಾಧಿಕಾರ ಹೇಳಿದೆ.

ತಾತ್ಕಾಲಿಕ ಪರಿವರ್ತನೆ
ಎನ್‌ಎಚ್‌ಎಐನ ಮನವಿಯನ್ನು ಪರಿಗಣಿಸಿ ಮತ್ತು ನಾಗರಿಕರನ್ನು ಅನನುಕೂಲಕ್ಕೆ ಸಿಲುಕಿಸದಂತೆ ಎಚ್ಚರ ವಹಿಸುವ ದೃಷ್ಟಿಯಿಂದ ಮುಂದಿನ 30 ದಿನಗಳ ಅವಧಿಯವರೆಗೆ ಮಾತ್ರ ಫಾಸ್ಟ್ಯಾಗ್ ಬಳಕೆಯ ಗಡುವನ್ನು ವಿಸ್ತರಿಸಲಾಗುತ್ತಿದೆ. ಶೇ 25ಕ್ಕೂ ಹೆಚ್ಚಿಲ್ಲದಂತೆ ಸಂಚಾರ ದಟ್ಟಣೆಗೆ ಅನುಗುಣವಾಗಿ ಫೀ ಲೇನ್‌ನಲ್ಲಿನ ಫಾಸ್ಟ್ಯಾಗ್ ಲೇನ್‌ಗಳನ್ನು ತಾತ್ಕಾಲಿಕವಾಗಿ ಹೈಬ್ರಿಡ್ ಲೇನ್‌ಗಳಾಗಿ ಬದಲಾವಣೆ ಮಾಡಬಹುದಾಗಿದೆ ಎಂದು ಸಚಿವಾಲಯ ಹೇಳಿದೆ.

ನಿತ್ಯವೂ ವರದಿ ನೀಡಬೇಕು
ಎನ್‌ಎಚ್‌ಎಐನ ನಿಯಮದಂತೆ ಹೈಬ್ರಿಡ್ ಲೇನ್‌ಗಳು ಟೋಲ್ ಪ್ಲಾಜಾಗಳಲ್ಲಿ ನಗದು ಸುಂಕ ಪಾವತಿಗೆ ತೆರೆದುಕೊಂಡಿರುತ್ತವೆ. ಸ್ಪಷ್ಟವಾಗಿ ಹೇಳುವುದಾದರೆ ಟೋಲ್ ಪ್ಲಾಜಾಗಳಲ್ಲಿನ ಸುಂಕದ ಲೇನ್‌ಗಳಲ್ಲಿ ಒಂದನ್ನು ಹೊರತುಪಡಿಸಿ ಉಳಿದೆಲ್ಲ ಲೇನ್‌ಗಳನ್ನೂ ಫಾಸ್ಟ್ಯಾಗ್ ಲೇನ್‌ಗಳನ್ನಾಗಿ ಪರಿವರ್ತಿಸಬೇಕಿದೆ. ಇಂತಹ ಪ್ರಕರಣಗಳನ್ನು ದಿನನಿತ್ಯವೂ ಮೌಲ್ಯಮಾಪನ ಮಾಡಬೇಕು ಮತ್ತು ಸರಿಪಡಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಾಗೆಯೇ ದೈನಂದಿನ ಒಟ್ಟಾರೆ ವರದಿಯನ್ನು ನೀಡಬೇಕು ಎಂದು ಸಚಿವಾಲಯ ಸೂಚಿಸಿದೆ.
-
ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್ಗಳಲ್ಲಿ ಆಹಾರ ದರ ಏರಿಸಲು ಚಿಂತನೆ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ












Click it and Unblock the Notifications