Jio Recharge: ಬಳಕೆದಾರರಿಗೆ 'ಜಿಯೋ' ಶಾಕ್! ರೀಚಾರ್ಜ್ ದರ ಹೆಚ್ಚಳ; ಇಲ್ಲಿದೆ ಹೊಸ ದರಪಟ್ಟಿ
ಬಳಕೆದಾರರಿಗೆ 'ಜಿಯೋ' ಬೆಲೆ ಏರಿಕೆಯ ಶಾಕ್ ಕೊಟ್ಟಿದೆ. ಹೊಸ ಅನಿಯಮಿತ ಯೋಜನೆಗಳನ್ನು ಪ್ರಾರಂಭಿಸುವ ಜೊತೆಗೆ, ರೀಚಾರ್ಜ್ ದರಗಳನ್ನು ಗಣನೀಯವಾಗಿ ಹೆಚ್ಚಿಸಿದೆ. ಹೊಸ ದರಗಳು ಜುಲೈ 3 ರಿಂದ ಜಾರಿಗೆ ಬರಲಿವೆ.
ಮಾಸಿಕ, ದೈನಂದಿನ ಮತ್ತು ವಾರ್ಷಿಕ ಯೋಜನೆಗಳಿಗೆ ಈ ದರ ಹೆಚ್ಚಳ ಅನ್ವಯವಾಗುತ್ತದೆ. ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರ ಜೇಬಿಗೆ ರಿಲಯನ್ಸ್ ಜಿಯೋ ಮತ್ತಷ್ಟು ಹೊರೆಯಾಗಲಿದೆ.

ಹೊಸ ದರಗಳು ಹೀಗಿವೆ
| ಈಗಿರುವ ಯೋಜನೆ | ಯೋಜನೆಯ ಲಾಭ (ಅನಿಯಮಿತ ಕರೆ ಮತ್ತು ಮೆಸೇಜ್) | ಅವಧಿಯ ದಿನ | ಪರಿಷ್ಕೃತ ದರ |
| 155 | 2 GB | 28 | 189 |
| 209 | 1 GB/Day | 28 | 249 |
| 239 | 1.5 GB/Day | 28 | 299 |
| 299 | 2 GB/Day | 28 | 349 |
| 349 | 2.5 GB/day | 28 | 399 |
| 399 | 3 GB/Day | 28 | 449 |
| 479 | 1.5 GB/Day | 56 | 579 |
| 533 | 2 GB/Day | 56 | 629 |
| 395 | 6 GB | 84 | 479 |
| 666 | 1.5 GB/Day | 84 | 799 |
| 719 | 2 GB/Day | 84 | 859 |
| 999 | 3 GB/Day | 84 | 1199 |
| 1559 | 24 GB | 336 | 1899 |
| 2999 | 2.5 GB/day | 365 | 3599 |
| Data Add On | |||
| 15 | 1 GB | Base Plan | 19 |
| 25 | 2 GB | Base Plan | 29 |
| 61 | 6 GB | Base Plan | 69 |
| Postpaid | |||
| 299 | 30 GB | Bill Cycle | 349 |
| 399 | 75 GB | Bill Cycle | 449 |
ಹೊಸ ಅಪ್ಲಿಕೇಷನ್ ಬಿಡುಗಡೆ
ದರ ಹೆಚ್ಚಳದ ಜೊತೆಗೆ ಜಿಯೋ ಎರಡು ಹೊಸ ಅಪ್ಲಿಕೇಷನ್‌ಗಳನ್ನು ಕೂಡ ಪ್ರಾರಂಭಿಸಿದೆ.
ಜಿಯೋ ಸೇಫ್ (JioSafe): ಕರೆ, ಸಂದೇಶ ಕಳುಹಿಸುವಿಕೆ ಮತ್ತು ಫೈಲ್ ವರ್ಗಾವಣೆಗಾಗಿ ಕ್ವಾಂಟಮ್-ಸುರಕ್ಷಿತ ಸಂವಹನ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದು, ಬಳಕೆದಾರರು ತಿಂಗಳಿಗೆ 199 ರೂಪಾಯಿ ಪಾವತಿಸಿ ಬಳಸಬಹುದಾಗಿದೆ.
ಜಿಯೋ ಭಾಷಾಂತರ (JioTranslate): ಧ್ವನಿ ಕರೆಗಳು, ಸಂದೇಶಗಳು, ಪಠ್ಯ ಮತ್ತು ಚಿತ್ರಗಳನ್ನು ಭಾಷಾಂತರಿಸಲು ಎಐ-ಚಾಲಿತ ಬಹು-ಭಾಷಾ ಸಂವಹನ ಅಪ್ಲಿಕೇಶನ್ ಕೂಡ ಬಿಡುಗಡೆಯಾಗಲಿದ್ದು, ಇದನ್ನು ಬಳಸಲು ತಿಂಗಳಿಗೆ 99 ರೂಪಾಯಿ ಪಾವರಿ ಮಾಡಬೇಕಾಗುತ್ತದೆ.
ಜಿಯೋ ಬಳಕೆದಾರರು ಈ ಅಪ್ಲಿಕೇಶನ್‌ಗಳನ್ನು ಒಂದು ವರ್ಷದವರೆಗೆ ಉಚಿತವಾಗಿ ಪಡೆಯಬಹುದು ಎಂದು ಹೇಳಿದೆ.
ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷರಾದ ಆಕಾಶ್ ಎಂ ಅಂಬಾನಿ, "ಹೊಸ ಯೋಜನೆಗಳ ಪರಿಚಯವು ಉದ್ಯಮದ ಆವಿಷ್ಕಾರದತ್ತ ಒಂದು ಹೆಜ್ಜೆಯಾಗಿದೆ ಮತ್ತು 5ಜಿ ಮತ್ತು ಎಐ ತಂತ್ರಜ್ಞಾನದಲ್ಲಿ ಹೂಡಿಕೆಯ ಮೂಲಕ ಸುಸ್ಥಿರ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಡಿಜಿಟಲ್ ಇಂಡಿಯಾಗೆ ಉತ್ತಮ ಗುಣಮಟ್ಟದ, ಕೈಗೆಟುಕುವ ಇಂಟರ್ನೆಟ್ ಅತ್ಯಗತ್ಯ ಮತ್ತು ಅದಕ್ಕೆ ಕೊಡುಗೆ ನೀಡಲು ಜಿಯೋ ಹೆಮ್ಮೆಪಡುತ್ತದೆ. ಭಾರತದಲ್ಲಿ ಹೂಡಿಕೆ ಮಾಡುವ ಮೂಲಕ ನಾವು ನಮ್ಮ ದೇಶ ಮತ್ತು ಗ್ರಾಹಕರಿಗೆ ಆದ್ಯತೆ ನೀಡುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.












Click it and Unblock the Notifications