Fancy Number Plate: ಕಾರಿಗೆ ಬರೋಬ್ಬರಿ 1.17 ಕೋಟಿ ರೂಪಾಯಿಗೆ ಫ್ಯಾನ್ಸಿ ನಂಬರ್ ಖರೀದಿ: ಭಾರೀ ವೈರಲ್
Fancy Number Plate: ಹೊಸ ವಾಹನ ಖರೀದಿಸಿದ ವೇಳೆ ಅದಕ್ಕೆ ದುಬಾರಿ ಹಣ ಕೊಟ್ಟು ಫ್ಯಾನ್ಸಿ ನಂಬರ್ ಖರೀದಿಸಿರುವ ಉದಾಹರಣೆಗಳಿಗೆ. ಆದರೆ ಇದೀಗ ದಾಖಲೆಯ 1.17 ಕೋಟಿ ರೂಪಾಯಿ ಬೆಲೆಗೆ ನೋಂದಣಿ ಸಂಖ್ಯೆಯನ್ನು ಮಾರಾಟ ಮಾಡಲಾಗಿದೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಹಾಗಾದ್ರೆ ಎಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕೆಲವರಿಗೆ ವಾಹನಗಳನ್ನು ಕೊಂಡುಕೊಳ್ಳುವ ಕ್ರೇಜ್ ಜೊತೆ, ಅದಕ್ಕೆ ಫ್ಯಾನ್ಸಿ ನೋಂದಣಿ ಸಂಖ್ಯೆಯನ್ನು ಕೂಡ ಖರೀದಿ ಮಾಡುತ್ತಾರೆ. ಆದರೆ ಇದೀಗ ದಾಖಲೆಯ ಬೆಲೆಗೆ ನೋಂದಣಿ ಸಂಖ್ಯೆ ಹರಾಜಾಗಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ಕಾರಿನ ನಂಬರ್ ವಿಚಾರವಾಗಿ ಆನ್‌ಲೈನ್ ಹರಾಜು ಪ್ರಕ್ರಿಯೆ ಭಾರೀ ವೈರಲ್ ಆಗಿದೆ.

HR88B8888 ಎನ್ನುವ ನೋಂದಣಿ ಸಂಖ್ಯೆಯನ್ನು ಲಕ್ಷ ಅಲ್ಲ.. ಬರೋಬ್ಬರಿ ಬರೋಬ್ಬರಿ 1.17 ಕೋಟಿ ರೂಪಾಯಿಗೆ ಹರಾಜು ಮಾಡಲಾಗಿದೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇನ್ನು ಇದನ್ನು ಭಾರತದ ಅತ್ಯಂತ ದುಬಾರಿ ಕಾರು ನೋಂದಣಿ ಸಂಖ್ಯೆ ಎಂದು ಹೇಳಲಾಗುತ್ತಿದೆ. ಈ ಸಂಖ್ಯೆಯನ್ನು ಕೊಂಡುಕೊಳ್ಳಲು ಸುಮಾರು 45 ಜನರು ಮುಂದೆ ಬಂದಿದ್ದರು. ಮೊದಲಿಗೆ ಇದರ ಬೆಲೆ ಸಾವಿರ ಲೆಕ್ಕದಲ್ಲಿ ಇತ್ತು. ಆದರೆ, ಬೇಡಿಕೆ ಹೆಚ್ಚಾಗಿದ್ದು, ಇದೀಗ ಇದು ಕೋಟಿ ಲೆಕ್ಕದಲ್ಲಿ ಮಾರಾಟ ಆಗಿರುವುದು ಅಚ್ಚರಿಗೆ ಕಾರಣವಾಗಿದೆ.
ಹರಿಯಾಣದಲ್ಲಿ ಪ್ರತಿ ವಾರವೂ ವಿಐಪಿ ಹಾಗೂ ಫ್ಯಾನ್ಸಿ ನಂಬರ್ ಪ್ಲೇಟ್‌ಗಳ ವಿಚಾರವಾಗಿ ಆನ್‌ಲೈನ್ ಹರಾಜು ಮಾಡಲಾಗುತ್ತದೆ. ಈ ಹರಾಜು ಪ್ರಕ್ರಿಯೆಗೆ ಅರ್ಜಿ ಸಲ್ಲಿಕೆ ಮಾಡಲು ಶುಕ್ರವಾರ ಸಂಜೆ 5 ಗಂಟೆಯಿಂದ ಸೋಮವಾರ ಬೆಳಗ್ಗೆ 9 ಗಂಟೆಯವರೆಗೆ ಅವಕಾಶ ನೀಡಲಾಗುತ್ತದೆ. ಈ ಸಮಯದಲ್ಲಿ ನಂಬರ್ ಪ್ಲೇಟ್ ಸಂಖ್ಯೆಯನ್ನ ಪಡೆದುಕೊಳ್ಳಲು ಅರ್ಜಿ ಹಾಕಬಹುದು.
ಬಳಿಕ ಬುಧವಾರ ಸಂಜೆ 5 ಗಂಟೆಗೆ ಫಲಿತಾಂಶ ಪ್ರಕಟ ಮಾಡುವವರೆಗೂ ಬಿಡ್ಡಿಂಗ್ ಆಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳು fancy.parivahan.gov.in ಅಧಿಕೃತ ಪೋರ್ಟಲ್‌ನಲ್ಲಿ ಮಾಡಲಾಗುತ್ತದೆ. ಈ ವಾರ ಹರಾಜಿಗೆ ಬಂದಿದ್ದ ಸಂಖ್ಯೆಗಳಲ್ಲಿ 'HR88B8888' ಎನ್ನುವ ಸಂಖ್ಯೆಗೆ ತುಂಬಾ ಅರ್ಜಿ ಬಂದಿದ್ದು, ಬರೋಬ್ಬರಿ 45 ಅರ್ಜಿಗಳನ್ನ ಹಾಕಿದ್ದರು. ಇದರ ಮೂಲ ಬೆಲೆ 50,000 ಆಗಿತ್ತು. ಆದರೆ, ಅದರ ಬೆಲೆ ಕ್ಷಣದಿಂದ ಕ್ಷಣಕ್ಕೆ ಏರಿಕೆಯಾಗಿತ್ತು.
ಕೊನೆಗೆ ಇದು 1.17 ಕೋಟಿ ರೂಪಾಯಿಗಳಿಗೆ ತಲುಪಿದ್ದು, ಮಧ್ಯಾಹ್ನ 12 ಗಂಟೆ ಸುಮಾರಿಗೆ 88 ಲಕ್ಷ ರೂಪಾಯಿಗೆ ಬಂದಿತ್ತು. ನಂತರ ಕೋಟಿ ರೂಪಾಯಿ ಮೀರಿಸಿದೆ. ಅಲ್ಲದೆ, ಕಳೆದ ವಾರ 'HR22W2222' ಎಂಬ ನೋಂದಣಿ ಸಂಖ್ಯೆಯು ಬರೋಬ್ಬರಿ 37.91 ಲಕ್ಷಕ್ಕೆ ಮಾರಾಟ ಆಗಿತ್ತು.
ಇದಕ್ಕೂ ಮೊದಲು, ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಕೇರಳದ ಟೆಕ್ ಬಿಲಿಯನೇರ್ ವೆಂಕಟೇಶನ್ ಗೋಪಾಲಕೃಷ್ಣನ್ ಅವರು ತಮ್ಮ ಲ್ಯಾಂಬೋರ್ಘಿನಿ ಉರುಸ್ ಪರ್ಫಾರ್ಮೆಂಟ್ ಕಾರಿಗೆ 'KL 07 DG 0007' ಎನ್ನುವ ವಿಐಪಿ ನಂಬರ್ ಪ್ಲೇಟ್ ಪಡೆದುಕೊಳ್ಳಲು 45.99 ಲಕ್ಷ ಕೊಟ್ಟಿದ್ದರು. ಇದು ಕೂಡ ದಾಖಲೆ ಬರೆದಿತ್ತು.
ಸಾಮಾನ್ಯವಾಗಿ ಹೆಚ್ಚಾಗಿ ರಾಜಕಾರಣಿಗಳು, ರಾಜಕಾರಣಿಗಳ ಮಕ್ಕಳು, ಸೆಲೆಬ್ರೆಟಿಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಮ್ಮ ವಾಹನಗಳಿಗೆ ಫ್ಯಾನ್ಸಿ ನಂಬರ್ ಖರೀದಿ ಮಾಡಿರುವ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಆದರೆ, ಇದೀಗ ಮಾರಾಟ ಆಗಿರುವ ಕೋಟಿ ಲೆಕ್ಕದ ನಂಬರ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಹುಟ್ಟುಹಾಕಿದೆ. ಈ ಕುರಿತು ನೆಟ್ಟಗರು ಪ್ರತಿಕ್ರಿಯಿಸಿದ್ದು, "ಫ್ಯಾನ್ಸಿ ನಂಬರೇ ಕೋಟಿ ಆದ್ರೆ, ಇನ್ನೂ ಕಾರು ಇನ್ನೆಷ್ಟು ಬೆಲೆಯದ್ದು," ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications