ಒಂದೇ ದಿನ ಭಾರತದಲ್ಲಿ 24 ಸಾವಿರ ಕೋವಿಡ್ - 19 ಪ್ರಕರಣ!

ನವದೆಹಲಿ, ಜುಲೈ 05 : ಕೊರೊನಾ ವೈರಸ್ ಸೋಂಕಿನ ಪ್ರಕರಣದಲ್ಲಿ ಭಾರತ ಹೊಸ ದಾಖಲೆ ಬರೆದಿದೆ. ಇದೇ ಮೊದಲ ಬಾರಿಗೆ 24 ಗಂಟೆಯಲ್ಲಿ 24,850 ಪ್ರಕರಣಗಳು ದೇಶದಲ್ಲಿ ದಾಖಲಾಗಿದೆ.

ಶನಿವಾರ ಬೆಳಗ್ಗೆ 8ಗಂಟೆಯಿಂದ ಭಾನುವಾರ ಬೆಳಗ್ಗೆ ತನಕ ಭಾರತದಲ್ಲಿ 24,850 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. 613 ಜನರು ಮೃತಪಟ್ಟಿದ್ದಾರೆ. ದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 6,73,105ಕ್ಕೆ ಏರಿಕೆಯಾಗಿದೆ.

ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ವಿಶ್ವದಲ್ಲಿ ರಷ್ಯಾ 3ನೇ ಸ್ಥಾನದಲ್ಲಿದೆ. ಭಾರತದಲ್ಲಿ 800 ಪ್ರಕರಣ ದಾಖಲಾದರೆ ರಷ್ಯಾಕ್ಕಿಂತ ಮೇಲಿನ ಸ್ಥಾನಕ್ಕೆ ಬರಲಿದೆ. ದಿನದಿಂದ ದಿನಕ್ಕೆ ವಿವಿಧ ರಾಜ್ಯಗಳಲ್ಲಿ ಸೋಂಕಿನ ಪ್ರಕರಣ ಹೆಚ್ಚಾಗುತ್ತಲೇ ಇದೆ.

ದೇಶದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 19,268ಕ್ಕೆ ಏರಿಕೆಯಾಗಿದೆ. ಇದುವರೆಗೂ 4,09,083 ಜನರು ಗುಣಮುಖರಾಗಿದ್ದಾರೆ. ಕಳೆದ 9 ದಿನಗಳಿಂದ ದೇಶದಲ್ಲಿ ಪ್ರತಿದಿನ 18,000ಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ.

2 ಲಕ್ಷ ದಾಟಿದ ಸಂಖ್ಯೆ

2 ಲಕ್ಷ ದಾಟಿದ ಸಂಖ್ಯೆ

ಭಾರತದಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಸೋಂಕಿತರು ಇರುವ ರಾಜ್ಯ ಮಹಾರಾಷ್ಟ್ರ. ಶನಿವಾರ ಮಹಾರಾಷ್ಟ್ರದಲ್ಲಿ 7074 ಹೊಸ ಕೊರೊನಾ ವೈರಸ್ ಪ್ರಕರಣ ದಾಖಲಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2 ಲಕ್ಷದ ಗಟಿದಾಟಿದೆ. ಮಹಾರಾಷ್ಟ್ರ ಹೊರತುಪಡಿಸಿದರೆ ತಮಿಳುನಾಡು, ದೆಹಲಿ, ಗುಜರಾತ್‌ನಲ್ಲಿ ಹೆಚ್ಚು ಪ್ರಕರಣ ದಾಖಲಾಗಿದೆ.

ನವದೆಹಲಿ ಪರಿಸ್ಥಿತಿ

ನವದೆಹಲಿ ಪರಿಸ್ಥಿತಿ

ಶನಿವಾರ ನವದೆಹಲಿಯಲ್ಲಿ 2,505 ಹೊಸ ಪ್ರಕರಣಗಳು ದಾಖಲಾಗಿವೆ. ರಾಷ್ಟ್ರ ರಾಜಧಾನಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 97,000ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇದುವರೆಗೂ ಮೃತಪಟ್ಟವರ ಸಂಖ್ಯೆ 3004.

ಚೆನ್ನೈನಲ್ಲಿ ಲಾಕ್ ಡೌನ್ ಇಲ್ಲ

ಚೆನ್ನೈನಲ್ಲಿ ಲಾಕ್ ಡೌನ್ ಇಲ್ಲ

ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ 17 ದಿನದ ಲಾಕ್ ಡೌನ್ ಮುಕ್ತಾಯಗೊಂಡಿದೆ. ಭಾನುವಾರ ನಗರದಲ್ಲಿ ಲಾಕ್ ಡೌನ್‌ನಿಂದ ವಿನಾಯಿತಿ ನೀಡಲಾಗಿದೆ. ಮಧುರೈ ಸೇರಿದಂತೆ 4 ಜಿಲ್ಲೆಗಳಲ್ಲಿ ಜುಲೈ 12ರ ತನಕ ಲಾಕ್ ಡೌನ್ ಮುಂದುವರೆಯಲಿದೆ.

ಭಾನುವಾರದ ಲಾಕ್ ಡೌನ್

ಭಾನುವಾರದ ಲಾಕ್ ಡೌನ್

ಕರ್ನಾಟಕದಲ್ಲಿ ಶನಿವಾರ ಒಂದೇ ದಿನ 1839 ಹೊಸ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಜುಲೈ 5ರಿಂದ ಆಗಸ್ಟ್ 2ರ ತನಕ ಪ್ರತಿ ಭಾನುವಾರ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ ಶನಿವಾರ 1172 ಹೊಸ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+