ಪ್ರಧಾನಿ ಮೋದಿ ಪುಂಗಿವೂದಿದ್ದನ್ನು ಕೇಳಿ ಸಾಕು ಸಾಕಾಗಿ ಹೋಗಿದೆ: ಚಿದಂಬರಂ

Recommended Video

      ಪ್ರಧಾನಮಂತ್ರಿ ಪುಂಗಿವೂದಿದ್ದನ್ನು ಕೇಳಿ ಕೇಳಿ ಸಾಕಾಗಿಹೋಯ್ತು | Oneindia Kannada

      ನವದೆಹಲಿ, ಏ 24: ಪ್ರಧಾನಮಂತ್ರಿ ನರೇಂದ್ರ ಮೋದಿ, ಹೇಳಿದ್ದನ್ನೇ ಹೇಳುತ್ತಿದ್ದಾರೆ. ಅವರ ಮಾತನ್ನು ಕೇಳಿ ಸಾಕುಸಾಕಾಗಿ ಹೋಗಿದೆ ಎಂದು ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಕಿಡಿಕಾರಿದ್ದಾರೆ.

      ಲೋಕಸಭಾ ಚುನಾವಣೆಯ ಪ್ರತೀ ಭಾಷಣದಲ್ಲೂ ಪಾಕಿಸ್ತಾನದ ವಿಚಾರವನ್ನು ಮೋದಿ ಪ್ರಸ್ತಾವಿಸುತ್ತಿದ್ದಾರೆ. ಪಾಕಿಸ್ತಾನದ ವಿಚಾರದಲ್ಲಿ ಅವರು ತೆಗೆದುಕೊಂಡ ಕ್ರಮ ಏನು ಎನ್ನುವುದು ಗೊತ್ತಿದೆ. ಚುನಾವಣೆಯ ಪ್ರಚಾರ ಮುಗಿಯುವ ಮುನ್ನ, ಜನರ ಸಮಸ್ಯೆಯ ಬಗ್ಗೆ ಅವರು ಮಾತನಾಡುತ್ತಾರಾ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.

      ಅಪನಗದೀಕರಣ, ಉದ್ಯೋಗ, ರೈತರ ಸಮಸ್ಯೆಗಳು, ಎಲ್ಲಾ ವರ್ಗದವರ ಭದ್ರತೆ, ಜಿಎಸ್ಟಿ ಮತ್ತು ಸಾಲದ ಬಗ್ಗೆ ಮೊದಲು ಪ್ರಧಾನಿಯವರು ಮಾತನಾಡಬಹುದೆಂದು ಜನ ನಿರೀಕ್ಷಿಸುತ್ತಿದ್ದಾರೆಂದು ಚಿದಂಬರಂ ಹೇಳಿದ್ದಾರೆ.

      Tired of listening to PM Modi beat his own trumpet on Pakistan: Chidambaram

      ಬದುಕು ವೈವಿಧ್ಯಮಯವಾಗಿರಬೇಕು, ವಿಭಜನೆಯ ಮನಸ್ಸು ಇರಬಾರದು ಎನ್ನುವ ಬಾಲಿವುಡ್ ನಟ ಶಾರೂಖ್ ಖಾನ್ ಅವರ ಟ್ವೀಟ್ ಅನ್ನು ಉಲ್ಲೇಖಿಸುತ್ತಾ, ಹಿಂದಿನಟನ ಈ ಮಾತಿಗೆ ಪ್ರಧಾನಿ ಶ್ಲಾಘನೆ ವ್ಯಕ್ತಪಡಿಸುತ್ತಾರೆಂದು ನಾನು ನಂಬಿದ್ದೇನೆ ಎಂದು ಚಿದಂಬರಂ, ಪ್ರಧಾನಿ ಮೋದಿಯ ಕಾಲೆಳೆದಿದ್ದಾರೆ.

      ಲೋಕಸಭೆ ಚುನಾವಣೆಯ ಪ್ರಚಾರಕ್ಕೆ ಅಡ್ಡಿಪಡಿಸುವ ಸಲುವಾಗಿ ತಮ್ಮ ಮನೆ ಮೇಲೆ ಅದಾಯ ತೆರಿಗೆ ಇಲಾಖೆ ದಾಳಿ ನಡೆಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಕೇಂದ್ರ ಸರ್ಕಾರದ ನಡೆಗಳನ್ನು ದೇಶದ ಜನರು ಗಮನಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಅವರಿಗೆ ಸರಿಯಾದ ಉತ್ತರ ನೀಡಲಿದ್ದಾರೆ ಎಂದು ಚಿದಂಬರಂ ಇತ್ತೀಚೆಗೆ ಮೋದಿ ಸರಕಾರದ ವಿರುದ್ದ ಕಿಡಿಕಾರಿದ್ದರು.

      ಪ್ರಧಾನಿಯವರು ನೀವು ಹೇಳಿದ ಯಾವ ವಿಚಾರವನ್ನೂ ಪ್ರಸ್ತಾವಿಸುವುದಿಲ್ಲ, ಅದನ್ನು ಹೇಳಿದರೆ ಅವರಿಗೆ ಒಂದು ಸೀಟೂ ಬರುವುದಿಲ್ಲ. ಹೇಳಲು ಏನಾದರೂ ಸಾಧನೆ ಮಾಡಿದ್ದರೆ ತಾನೇ ಎಂದು ಚಿದಂಬರಂ ಟ್ವೀಟಿಗೆ ಕೆಲವು ಪ್ರತಿಕ್ರಿಯೆಗಳು ಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+