Pushpa 2: ಪುಷ್ಪ ಸಿನಿಮಾ ನೋಡುತ್ತಿದ್ದಾಗಲೇ ಸ್ಮಗ್ಮರ್ ಬಂಧನ!

ಪುಷ್ಪ 2 ಸಿನಿಮಾದಲ್ಲಿ ನಾಯಕ ನಟ ರಕ್ತ ಚಂದನವನ್ನು ಪೊಲೀಸರ ಕಣ್ತಪ್ಪಿಸಿ ಸ್ಮಗ್ಲಿಂಗ್ ಮಾಡುವಾಗ ಜನ ಶಿಳ್ಳೆ ಹೊಡೆದು, ಕೇಕೆ ಹಾಕಿ ಸಂಭ್ರಮಿಸುತ್ತಿದ್ದರೆ, ಅದೇ ಚಿತ್ರಮಂದಿರಲ್ಲಿ ಪೊಲೀಸರು ಸ್ಮಗ್ಲರ್ ಒಬ್ಬನನ್ನು ಬಂಧಿಸಿದರೆ ಹೇಗಿರುತ್ತದೆ? ಹೌದು, ಇದೇ ರೀತಿಯ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ. 10 ತಿಂಗಳನಿಂದ ತಲೆಮರೆಸಿಕೊಂಡಿದ್ದ ಸ್ಮಗ್ಲರ್ ಒಬ್ಬನನ್ನು ಪೊಲೀಸರು ಪುಷ್ಪ 2 ನೋಡುವಾಗಲೇ ಚಿತ್ರಮಂದಿರದಲ್ಲಿ ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ಈ ಘಟನೆ ನಡೆದಿದೆ. ತಡರಾತ್ರಿ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರದಲ್ಲಿ ಪುಷ್ಪಾ 2 ಸಿನಿಮಾ ವೀಕ್ಷಣೆ ಮಾಡುತ್ತಿದ್ದ ಪ್ರೇಕ್ಷಕರಿಗೆ ಶಾಕ್ ಕಾದಿತ್ತು. ಸಿನಿಮಾ ಹಾಲ್‌ಗೆ ನುಗ್ಗಿದ ಪೊಲೀಸರು ಕೊಲೆ ಮತ್ತು ಮಾದಕವಸ್ತು ಸಾಗಾಣಿಕೆ ಪ್ರಕರಣದಲ್ಲಿ ಬೇಕಾಗಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.

real life action scene pushpa 2 show nagpur

ಘಟನೆಯ ಸಂಪೂರ್ಣ ವಿವರ

ಗುರುವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಕೊಲೆ ಮತ್ತು ಮಾದಕವಸ್ತು ಸಾಗಾಣಿಕೆ ಸೇರಿದಂತೆ ಹಲವು ಪ್ರಕರಣದಲ್ಲಿ ಬೇಕಾಗಿದ್ದ ವಿಶಾಲ್ ಮೆಶ್ರಾಮ್‌ ಎನ್ನುವಾತನನ್ನು ತುಂಬಿದ ಚಿತ್ರಮಂದಿರದಲ್ಲಿ ಬಂಧಿಸಲಾಗಿದೆ. ಪೊಲೀಸರು ಚಿತ್ರಮಂದಿರದಲ್ಲಿ ಬಂಧಿಸಿದ್ದನ್ನು ನೋಡಿ ಒಂದು ಕ್ಷಣ ಜನ ಗಾಬರಿಯಾದರು. ಆದರೆ ಸಿನಿಮಾ ವೀಕ್ಷಣೆಗೆ ಯಾವುದೇ ಅಡ್ಡಿಯಿಲ್ಲ ಎಂದು ಪೊಲೀಸರು ಭರವಸೆ ನಿಡಿದ್ದು, ಆರೋಪಿಯನ್ನು ಬಂಧಿಸಿ ಕರೆದೊಯ್ದಿದ್ದಾರೆ.

ತಲೆಮರೆಸಿಕೊಂಡಿದ್ದ ವಿಶಾಲ್ ಮೆಶ್ರಾಮ್‌ಗೆ ಪುಷ್ಪ 2 ಸಿನಿಮಾ ನೋಡಲು ಆಸಕ್ತಿಯಿದೆ ಎಂದು ಖಚಿತ ಮಾಹಿತಿ ಪಡೆದ ಬಳಿಕ ಆತನನ್ನು ಪೊಲೀಸರು ಅಂತಿಮವಾಗಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಮೆಶ್ರಾಮ್ ವಿರುದ್ಧ ಎರಡು ಕೊಲೆ ಮತ್ತು ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ 27 ಪ್ರಕರಣಗಳಿದ್ದು, ಆತ ಜನರಿಗೆ ಹಿಂಸೆ ನೀಡುವ ಮೂಲಕ ಹೆಸರು ಮಾಡಿದ್ದನು. ಈ ಮೊದಲು ಆತ ಪೊಲೀಸರ ಮೇಲೆ ಕೂಡ ಹಲ್ಲೆ ಮಾಡಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಸೈಬರ್ ಕಣ್ಗಾವಲು ಮತ್ತು ಹೊಸ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಯಲ್ಲಿ ಅವನ ಚಲನವಲನಗಳನ್ನು ಟ್ರಾಕ್ ಮಾಡಿದ್ದು, ಕೊನೆಯವರೆಗೂ ಆತನನ್ನು ಹಿಂಬಾಲಿಸಿದ್ದಾರೆ. ಸಿನಿಮಾ ನೋಡುತ್ತಾ ಖುಷಿ ಪಡುತ್ತಿದ್ದ ಆತನಿಗೆ ಪೊಲೀಸರು ಕೊನೆಗೂ ಶಾಕ್ ಕೊಟ್ಟಿದ್ದಾರೆ.

ಚಿತ್ರಮಂದಿರದ ಒಳಗೆ ಪ್ರವೇಶಿಸುವ ಮೊದಲು ಪೊಲೀಸರು ಆರೋಪಿಯ ವಾಹನದ ಟೈರ್‍‌ಗಳ ಗಾಳಿಯನ್ನು ತೆಗೆದಿದ್ದಾರೆ. ಆತ ತಪ್ಪಿಸಿಕೊಳ್ಳದಂತೆ ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಮಡೇ ಆತನನ್ನು ಸುತ್ತುವರೆಯಲಾಗಿದೆ. ಸಿನಿಮಾದ ಕ್ಲೈಮ್ಯಾಕ್ಸ್ ವೇಳೆಗೆ ಪೊಲೀಸರು ಚಿತ್ರಮಂದಿರಕ್ಕೆ ನುಗ್ಗಿದ್ದಾರೆ, ಸಿನಿಮಾ ನೋಡುತ್ತಾ ಮೈಮರತಿದ್ದ ಮೆಶ್ರಾಮ್‌ಗೆ ವಿರೋಧಿಸಲು ಕೂಡ ಪೊಲೀಸರು ಯಾವುದೇ ಅವಕಾಶ ನೀಡದೇ ಸುತ್ತುವರೆದಿದ್ದಾರೆ.

ನಾಗ್ಪುರದ ಕೇಂದ್ರ ಕಾರಾಗೃಹದಲ್ಲಿ ಮೆಶ್ರಾಮ್ ನನ್ನು ಬಂಧಿಸಲಾಗಿದ್ದು, ಶೀಘ್ರದಲ್ಲೇ ನಾಸಿಕ್ ಜೈಲಿಗೆ ವರ್ಗಾಯಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+