ಶ್ರೀನಗರ ಸಂಸತ್ ಕ್ಷೇತ್ರದ ಉಪಚುನಾವಣೆ: 14ರಂದು ಮರು ಮತದಾನ

ಏಪ್ರಿಲ್ 16ರೊಳಗೆ ಶ್ರೀನಗರ ಸಂಸತ್ ಕ್ಷೇತ್ರದ ಮರು ಚುನಾವಣೆ ನಡೆಸಲೇಬೇಕಿರುವುದರಿಂದ ಏ. 14ರಂದೇ ಮರು ಮತದಾನ ನಡೆಸಲು ಕೇಂದ್ರ ಚುನಾವಣಾ ಆಯೋಗ ತೀರ್ಮಾನಿಸಿದೆ.

ಶ್ರೀನಗರ, ಏಪ್ರಿಲ್ 11: ಹಿಂಸಾಚಾರದಿಂದಾಗಿ ಮುಂದೂಲ್ಪಟ್ಟಿದ್ದ ಶ್ರೀನಗರ ಸಂಸತ್ ಕ್ಷೇತ್ರದ ಉಪ ಚುನಾವಣೆಯ ಮರು ಮತದಾನ ಏಪ್ರಿಲ್ 13ರಂದು ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ. ಅಂದು, ಬೆಳಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ.

ಎರಡು ದಿನಗಳ ಹಿಂದೆ ನಡೆದಿದ್ದ ಮತದಾನದ ವೇಳೆ ಹಿಂಸಾಚಾರ ಭುಗಿಲೆದ್ದು 6 ಜನರು ಬಲಿಯಾಗಿದ್ದರಲ್ಲದೆ, 36 ಜನರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯದ ಸಲಹೆಯ ಮೇರೆಗೆ ಉಪ ಚುನಾವಣೆಯನ್ನು ಅಮಾನ್ಯಗೊಳಿಸಿತು.

Re-polling for Srinagar Parlimentary Constituency will be on April 13

ಅಲ್ಲದೆ, ಮರು ಚುನಾವಣೆಯನ್ನು ಮತ್ತೊಮ್ಮೆ ನಡೆಸಲು ತೀರ್ಮಾನಿಸಿತ್ತು. ಆದರೀಗ, ಏಪ್ರಿಲ್ 16ರೊಳಗೆ ಆ ಕ್ಷೇತ್ರದ ಚುನಾವಣೆ ನಡೆಸಲೇಬೇಕಿರುವುದರಿಂದ ಏ. 14ರಂದೇ ಮರು ಮತದಾನ ನಡೆಸಲು ತೀರ್ಮಾನಿಸಿದೆ.

ಜಮ್ಮು-ಕಾಶ್ಮೀರದ ಇತಿಹಾಸದಲ್ಲೇ 1986 ನಂತರ, ಇದೇ ಮೊದಲ ಬಾರಿಗೆ ಶೇ. 7ರಷ್ಟು ಮತದಾನವಾಗಿತ್ತು. ಕಾಶ್ಮೀರದಲ್ಲಿರುವ ಪ್ರತ್ಯೇಕತವಾದಿಗಳು ಸಂಸತ್ ಉಪಚುನಾವಣೆಯನ್ನು ಬಹಿಷ್ಕಾರಗೊಳಿಸಲು ಕರೆ ನೀಡಿದ್ದು ಇದಕ್ಕೆ ಕಾರಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+