ಕಿಂಗ್ಸ್ ಮಣಿಸಿದ ಆರ್ ಸಿಬಿಗೆ ಮೊದಲ ಗೆಲುವಿನ ನಗೆ: ಚಿತ್ರಗಳಲ್ಲಿ ನೋಡಿ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 14: ಈ ಸಲ ಕಪ್ ನಮ್ದೇ ಎಂದು ಎಂಬ ಅಭಿಮಾನಿಗಳ ಉದ್ಘೋಷಕ್ಕೆ ಕೊನೆಗೂ ಫಲ ಸಿಕ್ಕಿತು. ನೆಚ್ಚಿನ ಆಟಗಾರ ಎಬಿ ಡೆವಿಲಿಯರ್ಸ್ ಜವಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಆರ್ ಸಿಬಿ ತಂಡ ಐಪಿಎಲ್ -11ರ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು 4 ವಿಕೆಟ್ ಗಳಿಂದ ಮಣಿಸಿತು.

ಕಾರ್ ಬಾನಟ್ ಮೇಲೆ ಕಾರ್ಮಿಕನನ್ನು 4ಕಿಮೀ ಹೊತ್ತೊಯ್ದ ಅಧಿಕಾರಿ!

ಮೊದಲು ಬ್ಯಾಟ್ ಮಾಡಿದ ಪಂಜಾಬ್ ಆರ್ ಸಿಬಿ ಬೌಲಿಂಗ್ ಬೆದರಿ 155 ರನ್ ಗಳಿಗೆ ಸರ್ವಪತನಗೊಂಡಿತು, ಈ ಆವೃತ್ತಿಯಲ್ಲಿ ಎದುರಾಳಿಯನ್ನು ಆಲೌಟ್ ಮಾಡಿದ ಮೊದಲ ತಂಡ ಎನ್ನುವ ಹೆಗ್ಗಳಿಕೆಗೆ ಆರ್ ಸಿ ಬಿ ಪಾತ್ರವಾಯಿತು. ಪಂಜಾಬ್ ನೀಡಿದ್ದ ಸುಲಭ ಗುರಿ ಬೆನ್ನಟ್ಟಲು ಇಳಿದ ಆರ್ ಸಿ ಬಿ ಮೊದಲ ಓವರ್ ನಲ್ಲೇ ಆಘಾತ ಅನುಭವಿಸಿತು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕನ್ನಡಿಗ ರಾಹುಲ್(47ರನ್, 30ಎಸೆತ, 2 ಬೌಂಡರಿ, 4ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನಡುವೆಯೂ 19.2 ಓವರ್ ಗಳಲ್ಲಿ 155ರನ್ ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಆರ್ ಸಿ ಬಿ ತಂಡ 19.3 ಓವರ್ ಗಳಲ್ಲಿ 6 ವಿಕೆಟ್ ಗೆ 159 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಆರ್‌ಸಿಬಿ ವಿಜಯೋತ್ಸವದಲ್ಲಿ ಮಿಂದೆದ್ದ ಅನುಷ್ಕಾ

ಆರ್‌ಸಿಬಿ ವಿಜಯೋತ್ಸವದಲ್ಲಿ ಮಿಂದೆದ್ದ ಅನುಷ್ಕಾ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಆರ್ ಸಿಬಿ ನಡುವಿನ ಹಣಾಹಣಿಯಲ್ಲಿ ಗೆಲುವು ಸಾಧಿಸಿದ ಆರ್ ಸಿಬಿಯನ್ನು ಕಂಡು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸಂಭ್ರಮಿಸಿದ್ದು ಹೀಗೆ.

ಅರ್ಧ ಶತಕ ಬಾರಿಸಿದ ಡೆವಿಲಿಯರ್ಸ್ ಸಂತಸ

ಅರ್ಧ ಶತಕ ಬಾರಿಸಿದ ಡೆವಿಲಿಯರ್ಸ್ ಸಂತಸ

ರಾಯಲ್ ಚಾಲೆಂಜರ್ಸ್ ಆಫ್ ಬೆಂಗಳೂರು ತಂಡದ ಎಬಿ ಡೆವಿಲಿಯರ್ಸ್ ಅರ್ಧ ಶತಕ ಬಾರಿಸಿದ ಸಂಭ್ರಮದಲ್ಲಿರುವುದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಆರ್ ಸಿ ಬಿ ನಡುವಿನ ಕ್ರಿಕೆಟ್ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಡೆವಿಲಿಯರ್ಸ್.

ಕಿಂಗ್ಸ್ ಪಂಜಾಬ್ ಆಟಕ್ಕೆ ಚಿಯರ್ಸ್ ಹೇಳಿದ ಒಡತಿ ಪ್ರೀತಿ ಜಿಂಟಾ

ಕಿಂಗ್ಸ್ ಪಂಜಾಬ್ ಆಟಕ್ಕೆ ಚಿಯರ್ಸ್ ಹೇಳಿದ ಒಡತಿ ಪ್ರೀತಿ ಜಿಂಟಾ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಆರ್ ಸಿಬಿ ನಡುವಿನ ಹಣಾಹಣಿಗೂ ಮುನ್ನ ಕಿಂಗ್ಸ್ ಒಡತಿ ಪ್ರೀತಿ ಜಿಂಟಾ ತಂಡದ ಸದಸ್ಯರಿಗೆ ಆಲ್ ದಿ ಬೆಸ್ಟ್ ಹೇಳುತ್ತಿರುವ ದೃಶ್ಯ

ಕುತುವಾ ಅತ್ಯಾಚಾರ ವಿರುದ್ಧ ಪ್ರತಿಭಟನೆ

ಕುತುವಾ ಅತ್ಯಾಚಾರ ವಿರುದ್ಧ ಪ್ರತಿಭಟನೆ

ಅಹ್ಮದಾಬಾದ್ ನಲ್ಲಿ ಬಕೆರ್ ವಾಲ್ ಸಮುದಾಯಕ್ಕೆ ಸೇರಿದ ಬಾಲಕಿ ಜನವರಿ 10ರಂದು ಕುದುರೆ ಮೇಯಿಸಲು ಅರಣ್ಯ ಪ್ರದೇಶಕ್ಕೆ ತೆರಳಿದ್ದಳು. ಒಂದು ವಾರದ ಬಳಿಕ ಆಕೆಯ ಮೃತದೇಹ ಕಾಡಿನಲ್ಲಿ ದೊರೆತಿತ್ತು.ಬಾಲಕಿಯಲ್ಲಿ ಅಲ್ಲಿನ ದೇವಸ್ಥಾನದಲ್ಲಿ ವಾರದವರೆಗೂ ಬಂಧಿಸಿಟ್ಟಿದ್ದ ಆರು ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಲಾಗಿದೆ. ಆಕೆಯ ಮೇಲೆ ನಿರಂತರ ಅತ್ಯಾಚಾರ ನಡೆಸಿ ಹತ್ಯೆ ಎಸಗಲಾಗಿತ್ತು. ಇದರ ವಿರುದ್ಧ ಸ್ಥಳೀಯರು ಬಾಯಿಗೆ ಕಪ್ಪುಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು.

ದೆಹಲಿಯಲ್ಲಿ ಅಗ್ನಿ ದುರಂತದಲ್ಲಿ ಮೃತಪಟ್ಟ ಕುಟುಂಬದ ಸದಸ್ಯರ ಶ್ರದ್ಧಾಂಜಲಿ

ದೆಹಲಿಯಲ್ಲಿ ಅಗ್ನಿ ದುರಂತದಲ್ಲಿ ಮೃತಪಟ್ಟ ಕುಟುಂಬದ ಸದಸ್ಯರ ಶ್ರದ್ಧಾಂಜಲಿ

ದೆಹಲಿಯಲ್ಲಿ ಶುಕ್ರವಾರ ಕೋಹತ್ ಎನ್ ಕ್ಲೇವ್ ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ ಕುಟುಂಬ ಸದಸ್ಯರ ಆಕ್ರಂದನ ಮುಗಿಲುಮುಟ್ಟಿತ್ತು. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕೋಹತ್ ಎನ್‌ಕ್ಲೇವ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ.

ಹಣಕಾಸು ವರದಿ ಪ್ರಕಟ

ಹಣಕಾಸು ವರದಿ ಪ್ರಕಟ

ಬೆಂಗಳೂರಿನಲ್ಲಿರುವ ಇನ್‌ಫೋಸಿಸ್ ಕಂಪನಿಯಲ್ಲಿ ಇನ್‌ಫೋಸಿಸ್ ಸಿಇಒ ಸಲಿಲ್ ಪರೇಖ್, ಸಿಒಒ ಪ್ರವೀಣ್ ರಾವ್, ಎಂಡಿ ರಂಗನಾಥ್ ಅವರು ಹಣಕಾಸು ವರದಿ ಪ್ರಕಟಿಸಿದರು.

ಹೂವಿಂದ ಹೂವಿಗೆ ಹಾರುವ ಚಿಟ್ಟೆ, ಏನನು ಹೇಳುತಿದೆ

ಹೂವಿಂದ ಹೂವಿಗೆ ಹಾರುವ ಚಿಟ್ಟೆ, ಏನನು ಹೇಳುತಿದೆ

ಚಿಟ್ಟೆಯೊಂದು ಹೂವಿನ ಮೇಲೆ ಕುಳಿತು ಹೂವಿನಿಂದ ಬರುವ ಮಕರಂದವನ್ನು ಹೀರುತ್ತಿರುವ ದೃಶ್ಯ ಅಸ್ಸಾಂನ ಕಾಡೊಂದರಲ್ಲಿ ಕಂಡುಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Anushka Sharma rocks in celebration after RCB team won the match in Bangalore on Friday night. Here are some pictures which explores different movement of RCB victory against King's XI Punjab.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ