• search
For Quick Alerts
ALLOW NOTIFICATIONS  
For Daily Alerts

  ಬಿಜೆಪಿಗೆ ವರ, ಕಾಂಗ್ರೆಸ್ಸಿಗೆ ದುಃಸ್ವಪ್ನವಾಗಲಿದೆ ನೆಹರು ಬರೆದಿದ್ದ 'ಆ ಪತ್ರ'!

  |
    ಜವಹರಲಾಲ್ ನೆಹರು ಬರೆದಿರುವ ಒಂದು ಪತ್ರದಿಂದ ಬಿಜೆಪಿಗೆ ನಿರಾಳ | ಕಾಂಗ್ರೆಸ್ ಗೆ ಸಂಕಷ್ಟ | Oneindia Kannada

    ನವದೆಹಲಿ, ನವೆಂಬರ್ 05: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI)ದ ಗವರ್ನರ್ ಮತ್ತು ಮೋದಿ ಸರ್ಕಾರದ ನಡುವಿನ ವಿವಾದ ಕಾಂಗ್ರೆಸ್ಸಿನ ಬಹುಮುಖ್ಯ ಅಸ್ತ್ರವಾಗಿ ಬತ್ತಳಿಕೆ ಸೇರಿಕೊಂಡಿದೆ.

    ದೀಪಾವಳಿ ವಿಶೇಷ ಪುರವಣಿ

    ಆದರೆ 1957 ರ ಜನವರಿಯಲ್ಲಿ ಅಂದಿನ ಪ್ರಧಾನಿಯಾಗಿದ್ದ ಜವಹರಲಾಲ್ ನೆಹರು ಅವರು ಆರ್ ಬಿಐ ಗವರ್ನರ್ ಗೆ ಬರೆದಿದ್ದ ಪತ್ರವೊಂದು ಕಾಂಗ್ರೆಸ್ಸಿನ ಬಾಯಿಮುಚ್ಚಿಸುವ ಅಸ್ತ್ರವಾಗಿ ಬಿಜೆಪಿ ಬತ್ತಳಿಕೆಗೆ ಸೇರಿಕೊಳ್ಳಲಿದೆ!

    ಹೊಂದಾಣಿಕೆ ಕೊರತೆ: ಆರ್‌ ಬಿಐಗೂ ಮೋದಿ ಸರ್ಕಾರಕ್ಕೂ ಶುರುವಾಗಿದೆಯೇ ತಿಕ್ಕಾಟ?

    1957 ರಲ್ಲಿ ಸರ್ಕಾರ ಮತ್ತು ಆರ್ಬಿಐ ನಡುವೆ ಇಂಥದೇ ವಿವಾದ ಎದ್ದಿದ್ದ ಸಂದರ್ಭದಲ್ಲಿ ಸ್ವತಃ ನೆಹರು ಅವರೇ ಆರ್ ಬಿ ಐ ಗವರ್ನರ್ ಅವರ ರಾಜೀನಾಮೆ ಕೇಳಿದ್ದರು! ಅಷ್ಟೇ ಅಲ್ಲ, ಆರ್ ಬಿಐ ನಲ್ಲಿ ಸರ್ಕಾರ ಮೂಗು ತೂರಿಸುವುದು ತಪ್ಪಲ್ಲ ಎಂದು ಸಹ ತಮ್ಮ ಪತ್ರದಲ್ಲಿ ಬರೆದಿದ್ದರು!

    ಆರ್ ಬಿಐ ಗವರ್ನರ್ ಗೆ ನೆಹರೂ ಪತ್ರ

    ಆರ್ ಬಿಐ ಗವರ್ನರ್ ಗೆ ನೆಹರೂ ಪತ್ರ

    ಆರ್ ಬಿಐ ನ ನಾಲ್ಕನೇ ಗವರ್ನರ್ ಆಗಿದ್ದ ಬೆನಗಲ್ ರಾಮ ರಾವು ಅವರು ಏಳೂವರೆ ವರ್ಷಗಳ ಕಾಲ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. ನೆಹರೂ ಸಂಪುಟದಲ್ಲಿ ಟಿ ಟಿ ಕೃಷ್ಣಮಾಚಾರಿ ಅವರು ಹಣಕಾಸು ಸಚಿವರಾಗಿದ್ದಾಗ, ಆರ್ ಬಿಐ ನ ಹಲವು ಕಾರ್ಯಗಳಲ್ಲಿ ಮೂಗುತೂರಿಸುತ್ತಿದ್ದರು. ಇದರಿಂದ ಕಿರಿಕಿರಿ ಅನುಭವಿಸಿದ ರಾವು ಅವರು, 'ಕೃಷ್ಣಮಾಚಾರಿ ಅವರ ಒರಟು ವರ್ತನೆ ಮತ್ತು ವಿನಾಕಾರಣ ಆರ್ ಬಿಐ ಕಾರ್ಯಗಳಲ್ಲಿ ತಲೆಹಾಕುವುದು ನಮಗೆ ಇರಿಸುಮುರಿಸುಂಟು ಮಾಡುತ್ತಿದೆ' ಎಂದು ನೆಹರು ಅವರ ಬಳಿ ದೂರು ನೀಡಿದ್ದರು.

    ವಿವಾದ ತಾರಕಕ್ಕೇರುವ ಮೊದಲೇ ಊರ್ಜಿತ್ ರಾಜೀನಾಮೆ ನೀಡ್ತಾರಾ?

    ನೆಹರು ಪ್ರತಿಕ್ರಿಯೆ!

    ನೆಹರು ಪ್ರತಿಕ್ರಿಯೆ!

    ರಾವು ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ನಾಯಕ ನೆಹರು, 'ಆರ್ ಬಿಐ ಸಹ ಸರ್ಕಾರದ ಒಂದು ಭಾಗ. ಸರ್ಕಾರದ ಎಷ್ಟೋ ಕೆಲಸಗಳು ಆರ್ ಬಿಐ ಮೂಲಕವೇ ಆಗಬೇಕು. ಆದ್ದರಿಂದ ಸರ್ಕಾರ ಆರ್ ಬಿಐ ನಲ್ಲಿ ತಲೆತೂರಿಸುವುದು ತಪ್ಪಲ್ಲ. ಸರ್ಕಾರಕ್ಕೆ ಆ ಅಧಿಕಾರ ಇದೆ' ಎಂದು ಹೇಳಿದ್ದರು. 'ಆರ್ ಬಿಐ ಸರ್ಕಾರಕ್ಕೆ ಯಾವುದೇ ರೀತಿಯ ಸಲಹೆ ನೀಡಬಹುದು. ಆದರೆ ಅದು ಸರ್ಕಾರದೊಂದಿಗೇ ಕೆಲಸ ನಿರ್ವಹಿಸಬೇಕು' ಎಂದು ನೆಹರು, ರಾವು ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ರಾವು ರಾಜೀನಾಮೆ ನೀಡಿದ್ದರು!

    ಆರ್ ಬಿಐ ಮೇಲೆ ಬೆಂಕಿಯುಗುಳಿದ ಆರೆಸ್ಸೆಸ್ ಸಹವರ್ತಿ ಸಂಸ್ಥೆ

    ಬಿಜೆಪಿಗೆ ನಿಟ್ಟುಸಿರು ತಂದ ನೆಹರು ಪತ್ರ!

    ಬಿಜೆಪಿಗೆ ನಿಟ್ಟುಸಿರು ತಂದ ನೆಹರು ಪತ್ರ!

    ಸದ್ಯಕ್ಕೆ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರು ಸಹ ಬಿಜೆಪಿ ಸರ್ಕಾರದ ವಿರುದ್ಧ ಇದೇ ರೀತಿಯ ಆರೋಪ ಮಾಡಿದ್ದಾರೆ. ಆರ್ ಬಿಐ ಗವರ್ನರ್ ಪದಚ್ಯುತಿಯಾಗಬಹುದು ಅನುಮಾನ ಎದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಆರ್ ಬಿಐ ಬೆಂಬಲಕ್ಕೆ ನಿಂತಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಿಗೆ ತಮ್ಮದೇ ನಾಯಕರಾಗಿದ್ದ ನೆಹರು ಅವರು ಒಂದಾನೊಂದು ಕಾಲದಲ್ಲಿ ಬರೆದಿದ್ದ ಪತ್ರವೇ ಮುಳುವಾಗಿದೆ! ಈ ಪತ್ರದ ಬಗ್ಗೆ ತಿಳಿದು ಬಿಜೆಪಿಯಂತೂ ನಿಟ್ಟುಸಿರುಬಿಟ್ಟಿದೆ!

    ಇಂದಿರಾಗಿತ್ತೆ ನೆಹರೂ ಸೆಕ್ರೆಟರಿ ಜೊತೆ ಸೀಕ್ರೆಟ್ ಸಂಬಂಧ?

    ಆರ್ ಬಿಐ ವಿವಾದವೇನು?

    ಆರ್ ಬಿಐ ವಿವಾದವೇನು?

    ಸರ್ಕಾರ ಮತ್ತು ಆರ್ ಬಿಐ ನಡುವೆ ಹೊಂದಾಣಿಕೆ ಇಲ್ಲದಿರುವುದೇ ಈ ಎಲ್ಲ ವಿವಾದಗಳಿಗೆ ನಾಂದಿ ಹಾಡಿದೆ. ಸರ್ಕಾರ ಮತ್ತು ಆರ್ ಬಿಐ ಯೋಜನೆಗಳು ಪರಸ್ಪರ ವ್ಯತಿರಿಕ್ತವಾಗಿರುತ್ತಿರುವುದರಿಂದ ಜನಸಾಮಾನ್ಯ ಬೆಲೆ ಏರಿಕೆ ಬಿಸಿ ಎದುರಿಸುವಂತಾಗಿದೆ. ಊರ್ಜಿತ್ ಪಟೇಲ್ ಅವರಿಗೆ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರ ಆರೋಪಿಸಿದರೆ, ಸರ್ಕಾರ ಆರ್ ಬಿಐ ಕಾರ್ಯಗಳಲ್ಲಿ ಮೂಗು ತೂರಿಸದೆ ಇದ್ದರೆ ನಾವು ನಮ್ಮ ಕೆಲಸವನ್ನು ಮುಕ್ತವಾಗಿ ಮಾಡುತ್ತೇವೆ ಎಂದು ಆರ್ ಬಿಐ ಹೇಳಿದೆ. ಇದರಿಂದಾಗಿ ತಲೆದೂರಿದ ಸಮಸ್ಯೆ ಆರ್ ಬಿಐ ಗವರ್ನರ್ ಪದಚ್ಯುತಿಯ ಸಾಧ್ಯತೆಯನ್ನು ಹೆಚ್ಚಿಸಿದೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    RBI controversy: Same issue happened in Ex PM Jawaharlal Nehru's tenure also. Nehru wrote a letter to then RBI governmer Benegal Rama Rau. This might be a biggest weapon to BJP for defend itself and attack Congress,

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more