ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಬಿತ್ತು ಆರ್‌ಬಿಐನಿಂದ ಕೋಟಿ ಕೋಟಿ ದಂಡ, ಯಾಕೆ?, ದೇಗುಲ ಉಲ್ಲಂಘಿಸಿದ ನಿಯಮ ಇದು

ತಿರುಪತಿ, ಮಾರ್ಚ್ 28: ಇದು ತಿರುಪತಿ ವೆಂಕಟೇಶ್ವರನ ಭಕ್ತರಿಗೆ ಕಹಿ ಸುದ್ದಿಯೊಂದು ಲಭಿಸಿದೆ. ತಿರುಪತಿ ತಿಮ್ಮಪ್ಪನ ದೇವಾಲಯದಲ್ಲಿ ಹುಂಡಿ ಮತ್ತು ವಿದೇಶಿ ಕೊಡುಗೆಗಳನ್ನು ಸ್ವೀಕರಿಸುವಲ್ಲಿ ಮಾಡಿದ ನಿಯಮ ಉಲ್ಲಂಘನೆಯಿಂದಾಗಿ ಟಿಟಿಡಿ ಕೋಟಿ ಕೋಟಿ ರೂಪಾಯಿ ದಂಡ ಕಟ್ಟುವಂತಾಗಿದೆ.

ಹುಂಡಿ ಮತ್ತು ವಿದೇಶಿ ಕೊಡುಗೆಗಳನ್ನು ಸ್ವೀಕರಿಸುವಲ್ಲಿ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ (ಎಫ್‌ಸಿಆರ್‌ಎ) ವ್ಯಾಪ್ತಿಯ ನಿಯಗಳನ್ನು ಪಾಲಿಸದೇ ಉಲ್ಲಂಘನೆ ಮಾಡಲಾಗಿದೆ. ಹೀಗೆಂದು ಭಾರತೀಯ ರಿಸರ್ವ್‌ ಬ್ಯಾಂಕ್ (RBI) ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) 10ಕೋಟಿ ರೂಪಾಯಿ ದಂಡ ಹಾಕಿದೆ.

RBI Imposed penalty 10 crore for Tirupati Thimmappa Temple due to TTD rules break Use of money

ಈ ಪ್ರಕ್ರಿಯೆ ಬಳಿಕ ಬ್ಯಾಂಕ್ ಸಂಬಂಧಿತ ಅಧಿಕಾರಿಗಳ ಮಾತುಕತೆ ನಡೆಸಿದ ಟಿಟಿಡಿ ಮುಖ್ಯಸ್ಥರು ದಂಡದ ಮೊತ್ತವನ್ನು ಕಡಿಮೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಂಡದ ಮೊತ್ತವು ಹತ್ತು ಕೋಟಿ ರೂಪಾಯಿಯಿಂ3 ಕೋಟಿ ರೂಪಾಯಿಗೆ ಇಳಿಕೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಇನ್ನೂ ದೇವಾಲಯಕ್ಕೆ ಸಲ್ಲಿಕೆಯಾಗುವ ವಿದೇಶಿ ದೇಣಿಗೆಯನ್ನು ಬಳಸಿಕೊಳ್ಳುವಲ್ಲಿ ಟಿಟಿಡಿ ಮಾಡಿರುವ ತಪ್ಪನ್ನು ಕೇಂದ್ರ ಸಚಿವಾಲಯ ಪತ್ತೆ ಮಾಡಿದೆ. ಅಷ್ಟೇ ಅಲ್ಲದೇ ವಿದೇಶಿ ಕೊಡುಗೆಗಳ ಮೂಲಕ ಗಳಿಸಿದ ಬಡ್ಡಿ ಬಳಕೆಯ ಬಗ್ಗೆಯೂ ಕೇಂದ್ರ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದೆ.

RBI Imposed penalty 10 crore for Tirupati Thimmappa Temple due to TTD rules break Use of money

ದೇವಾಲಯದ ಟ್ರಸ್ಟ್‌ನ ಎಫ್‌ಸಿಆರ್‌ಎ ನೋಂದಣಿಯನ್ನು ತಾಂತ್ರಿಕ ವ್ಯತ್ಯಾಸಗಳಿಂದ ಬಂದ ಮಾಡಲಾಗಿದೆ, ಹೊರತು ದೇಣಿಗೆ ಹಣ ದುರ್ಬಳಕೆ ಮಾಡಿಕೊಳ್ಳಲು ಅಲ್ಲ ಎನ್ನಲಾಗಿದೆ. 2023 ಕ್ಕೆ ಕೊನೆಗೊಳ್ಳುವ ಐದು ವರ್ಷಗಳ ಅವಧಿಯಲ್ಲಿ, ದೇಗುಲದ ಟ್ರಸ್ಟ್ 30 ಕೋಟಿ ರೂಪಾಯಿ ಮೌಲ್ಯದ ವಿದೇಶಿ ಹಣ/ಕರೆನ್ಸಿಯನ್ನು ಸಂಗ್ರಹ ಮಾಡಿದೆ. ಆದರೆ ಎಸ್‌ಬಿಐ ಮಾತ್ರ ವಿದೇಶಿ ದೇಣಿಗೆಗಳನ್ನು ಠೇವಣಿ ಮಾಡಲು ನಿರಾಕರಿಸಿತ್ತು. ದೇಣಿಗೆ ಕೊಟ್ಟವರ ಗುರುತು ಸಹ ಇರಲಿಲ್ಲ ಎನ್ನಲಾಗಿದೆ.

2020ರಲ್ಲಿ ಎಫ್‌ಸಿಆರ್‌ಎ ನಿಯಮಗಳಲ್ಲಿನ ಮಾಹಿತಿಪ್ರಕಾರ, ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ) ವಿದೇಶದಿಂದ ಹರಿದು ಬಂದ ದೇಣಿಗೆಗಳನ್ನು ಎಸ್‌ಬಿಐ ಬ್ಯಾಂಕ್‌ ಖಾತೆಗೆ ಜಮೆ ಮಾಡಬೇಕಿರುತ್ತದೆ. ಈ ಕ್ರಮದ ಆಧಾರದಲ್ಲಿ ಕೇಂದ್ರ ಸಚಿವಾಲಯ ದೇವಸ್ಥಾನಕ್ಕೆ ಪತ್ರ ಬರೆದಿದೆ. ಎಫ್‌ಸಿಆರ್‌ಎಯು 'ಹುಂಡಿ'ಯಲ್ಲಿ ಸ್ವೀಕರಿಸಿದ ದೇಣಿಗೆ ಪ್ರಕ್ರಿಯೆ ಕುರಿತು ಸ್ಪಷ್ಟನೆ ಇಲ್ಲ ಎಂದು ಸಚಿವಾಲಯ ಹೇಳಿದೆ.

ಪ್ರಕರಣ ಬಗ್ಗೆ ಟಿಟಿಡಿ ಅಧ್ಯಕ್ಷರು ಹೇಳಿದ್ದೇನು?

ನಿಯಮ ಉಲ್ಲಂಘನೆ ಮತ್ತು ದಂಡದ ವಿಚಾರವಾಗಿ ಟಿಟಿಡಿ ಅಧ್ಯಕ್ಷರಾದ ವೈ.ವಿ ಸುಬ್ಬಾರೆಡ್ಡಿ ಅವರು, ತಿಮ್ಮಪ್ಪನ ಭಕ್ತರು ಸ್ವಯಂ ಆಗಿ ನೀಡುವ ಕೊಡುಗೆ, ಕಾಣಿಕೆ ಬಿಟ್ಟು ವಿದೀಶಿ ಕೊಡುಗೆ ಸ್ವೀಕರಿಸಲು ಅಥವಾ ಪಡೆಯಲು ಟಿಟಿಡಿಗೆ ಬೇರೆ ಯಾವುದೇ ಮಾರ್ಗಗಳು ಇಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಹೀಗೆಲ್ಲ ಇದ್ದರೂ ಸಹ ಟಿಟಿಡಿ ದಂಡ ಕಟ್ಟಲು ಒಪ್ಪಿದೆ. ವಿದೇಶಿ ದೇಣಿಗೆ ಸ್ವೀಕರಿಸುವ ಸಂದರ್ಭದಲ್ಲಿ ಕೆಲ ಲೋಪದೋಷಗಳು ಆಗಿರಬಹುದು. ಅದಕ್ಕೆಂದೆ ದಂಡ ಪಾವತಿಸಲಾಗಿದೆ. ವಿದೇಶದಿಂದ ಟಿಟಿಡಿಗೆ ಭಕ್ತರು ನೀಡುವ ಕೊಡುಗೆ ಭಾರತೀಯ ಕರೆನ್ಸಿಗೆ ಪರಿವರ್ತನೆ ಮಾಡುವುದರಲ್ಲಿ ವ್ಯತ್ಯಾಸ ಆಗಿದೆ. ಸಂಗ್ರಹಿಸಿದ್ದ ಮೊತ್ತದ ಖರ್ಚು ಮಾಡುವ ವಿಚಾರದಲ್ಲಿ ನಿಯಮ ಮತ್ತು ನಿಬಂಧನೆಗಳು ಇವೆ. ಟಿಟಿಡಿಯಿಂದ ಸಂಗ್ರಹಿಸಿದ್ದರ ಮೊತ್ತದಲ್ಲಿ ಮಾಡಿದ ಖರ್ಚು ಅತ್ಯಲ್ಪ ಹೀಗಿದ್ದರೂ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದೆ

ಎಫ್‌ಸಿಆರ್ಎ ನೋಂದಣಿ ಸ್ಥಗಿತ ಆಗಿದ್ದು ಹಣ ದುರ್ಬಳಕೆಗಲ್ಲ

ಹಿಂದಿನ 3 ವರ್ಷದಿಂದ ಟಿಟಿಡಿ ತನ್ನ ಎಫ್‌ಸಿಆರ್‌ಎ ನೋಂದಣಿಯನ್ನು ನವೀಕರಿಸಲು ಪ್ರಯತ್ನಿಸುತ್ತಿದೆ. ಈ ನವೀಕರಣ ವಿಚಾರದಲ್ಲಿ ಟಿಟಿಡಿ ಮಾಡಿರುವ ವಿಳಂಬದಿಂದ ಇಂದು ದಂಡ ಕಟ್ಟುವ ಪರಿಸ್ಥಿತಿ ಎದುರಾಗಿದೆ. ಮೂಲಗಳ ಪ್ರಕಾರ, ಕೆಲವು ತಾಂತ್ರಿಕ ಕಾರಣದಿಂದಾಗಿ ಎಫ್‌ಸಿಆರ್‌ಎ ನೋಂದಣಿ ಸ್ಥಗಿತ ಆಗಿದೆ, ಆದರೆ ವಿದೇಶಿ ಕೊಡುಗೆಯ ದುರ್ಬಳಕೆಯಿಂದ ಅದು ದುರುಪಯೋಗ ಆಗಿಲ್ಲ ಎಂದು ಮೂಲಗಳು ತಿಳಿಸಿವೆ. ಕಳೆದ 05 ವರ್ಷಗಳಲ್ಲಿ ಟಿಟಿಡಿಗೆ 30 ಕೋಟಿ ರೂಪಾಯಿ ಮೌಲ್ಯದ ವಿದೇಶಿ ತೆರಿಗೆ ಸಂಗ್ರಹ ಆಗಿದ್ದು, ದಾನಿಗಳ ಗುರುತು ತಿಳಿಯದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+