ಹಳೆ ನೋಟು ಬದಲಾವಣೆ ಗಡುವು ವಿಸ್ತರಣೆ
ನವದೆಹಲಿ, ಜೂ. 26: ಹಳೆ ನೋಟು ಬದಲಾವಣೆಗೆ ನೀಡಿದ್ದ ಅವಧಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಡಿಸೆಂಬರ್ 31 ರವರೆಗೆ ವಿಸ್ತರಣೆ ಮಾಡಿದೆ. 2005ನೇ ಇಸವಿಗೂ ಮುನ್ನ ಮುದ್ರಣಗೊಂಡಿರುವ ಎಲ್ಲ ನೋಟುಗಳನ್ನು ಬದಲಿಸಿಕೊಳ್ಳಲು ಜೂನ್ 30ರವರೆಗೂ ಗಡುವು ನೀಡಿತ್ತು.
2005 ಕ್ಕೂ ಮುನ್ನ ಅಂದರೆ 10 ವರ್ಷದ ಮೊದಲು ಮುದ್ರಿತವಾದ 500 ಮತ್ತು ಸಾವಿರ ರು. ಸೇರಿದಂತೆ ಎಲ್ಲ ನೋಟುಗಳ ಚಲಾವಣೆ ರದ್ದುಗೊಳಿಸಿರುವುದರಿಂದ ನೋಟು ಗಳನ್ನು ಬದಲಿಸಿಕೊಳ್ಳಬೇಕು ಎಂದು ಆರ್‌ಬಿಐ ಸೂಚನೆ ತಿಳಿಸಿದೆ.[ಗಡುವು ವಿಸ್ತರಣೆ ಮಾಡಿದ್ದು ಯಾಕೆ?]

ಹಳೇಯ ನೊಟು ಗುರುತಿಸುವುದು ಹೇಗೆ?
ಹಳೆಯ ನೋಟುಗಳ ಹಿಂಬದಿಯಲ್ಲಿ ಹಿಂಬದಿಯಲ್ಲಿ ಇಸವಿ ಮುದ್ರಣ ಆಗಿರುವುದಿಲ್ಲ. 2005ರ ನಂತರದ ನೋಟುಗಳಲ್ಲಿ ನಕಲು ಮಾಡಲು ಸಾಧ್ಯವಾಗದ ಹಲವು ಚಿಹ್ನೆಗಳನ್ನು, ಮೇಲ್ನೋಟಕ್ಕೆ ಕಾಣಿಸ ದಂತಹ ಸಂಕೇತಾಕ್ಷರಗಳನ್ನೂ ಬಳಸಲಾಗಿದೆ.
ಕಪ್ಪುಹಣ ಮತ್ತು ನಕಲಿ ನೋಟುಗಳ ಚಲಾವಣೆ ತಡೆಯುವ ಉದ್ದೇಶದಿಂದ ಆರ್‌ಬಿಐ ಈ ನೋಟುಗಳ ಚಲಾವಣೆ ಇಂಥ ತೀರ್ಮಾನ ಕೈಗೊಂಡಿದೆ. ಖೋಟಾ ನೋಟುಗಳ ಹಾವಳಿ ತಡೆಯಲು ಏಕರೂಪದ ವ್ಯವಸ್ಥೆ ಜಾರಿ ಮಾಡುವುದು ಆರ್ ಬಿಐ ಉದ್ದೇಶ.
ಮೊದಲಿಗೆ 2014ರ ಮಾರ್ಚ್ ಗಡುವು ನೀಡಲಾಗಿತ್ತು. ನಂತರ 2015ರ ಜ. 1ರವರೆಗೂ ವಿಸ್ತರಿಸಿತ್ತು. ಬಳಿಕ 2015ರ ಜೂನ್ 30ರವರೆಗೂ ನೋಟು ಬದಲಾವಣೆಗೆ ಅವಕಾಶವಿದೆ ಎಂದು ತಿಳಿಸಲಾಗಿತ್ತು. ಇದೀಗ 2015 ರ ಅಂತ್ಯದವರೆಗೂ ನೋಟಿ ಬದಲಾವಣೆಗೆ ಅವಕಾಶವಿದೆ. ನಿಮ್ಮ ಬಳಿ ಹಳೆಯ ನೋಟುಗಳಿದ್ದರೆ ಕೂಡಲೇ ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್ ಗೆ ತೆರಳಿ ಬದಲಾವಣೆ ಮಾಡಿಕೊಳ್ಳಿ.












Click it and Unblock the Notifications