ಸಣ್ಣ ವರ್ತಕರಿಗೆ ಆರ್ ಬಿಐ ಕೊಡುಗೆ: ಡೆಬಿಟ್ ಕಾರ್ಡ್ ಎಂಡಿಆರ್ ಕಡಿತ

ನವದೆಹಲಿ, ಡಿಸೆಂಬರ್ 11: ಅಪನಗದೀಕರಣದ ನಂತರ ನಗದು ರಹಿತ ವ್ಯವಹಾರಕ್ಕೆ ಎಲ್ಲಿಲ್ಲದ ಉತ್ತೇಜನ ಲಭಿಸಿದೆ. ಕಾರಣ ಕ್ರೆಡಿಟ್, ಡೆಬಿಟ್ ಕಾರ್ಡ್ ಗಳ ಬಳಕೆ ಹೆಚ್ಚಾಗಿದೆ.

ಈ ಸಂಬಂಧ ಸಣ್ಣ ವರ್ತಕರು ಡೆಬಿಟ್ ಕಾರ್ಡ್ ಉಪಯೋಗಿಸುವುದನ್ನು ಉತ್ತೇಜಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ 'ಎಂಡಿಆರ್' (ವರ್ತಕರ ರಿಯಾಯಿತಿ ದರ- ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ವ್ಯವಹಾರದ ವೇಳೆ ವರ್ತಕರಿಗೆ ಬ್ಯಾಂಕ್ ಗಳು ವಿಧಿಸುವ ದರ)ವನ್ನು ಪರಿಷ್ಕರಿಸಿದೆ. ಸಣ್ಣ ಮತ್ತು ದೊಡ್ಡ ವ್ಯಾಪಾರಿಗಳಿಗೆ ಪ್ರತ್ಯೇಕವಾದ ಎಂಡಿಆರ್ ಅನ್ನು ಪ್ರಕಟಿಸಲಾಗಿದ್ದು, ಈ ಹೊಸ ಶುಲ್ಕ ಜ.1 ರಿಂದ ಜಾರಿಗೆ ಬರಲಿದೆ.

RBI cuts debit card transaction charges in digital push: applicable from Jan 1st

ಪರಿಷ್ಕೃತ ದರದ ಪ್ರಕಾರ, 20 ಲಕ್ಷ ರೂ. ಗಿಂತಲೂ ಕಡಿಮೆ ವ್ಯವಹಾರಕ್ಕಾದರೆ ಶೇ.0.40 ಎಂಡಿಆರ್ ವಿಧಿಸಲಾಗುತ್ತದೆ. 20 ಲಕ್ಷ ರೂ. ಗಿಂತಲೂ ಹೆಚ್ಚಿನ ವ್ಯವಹಾರ ನಡೆಸುವ ವರ್ತಕರಿಗೆ ಶೇ.0.90(ಗರಿಷ್ಠ 1000 ರೂ.) ಎಂಡಿಆರ್, ಕ್ಯೂಆರ್ ಆಧರಿತ ಪಾವತಿಗಳಲ್ಲಿ ಶೇ.0.80(ಗರಿಷ್ಠ 1000 ರೂ.) ಎಂಡಿಆರ್ ವಿಧಿಸಲಾಗುತ್ತದ ಎಂದು ಆರ್ ಬಿಐ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+