Ratan Tata: ಲವ್ ಮಾಡಿದ ಹುಡುಗಿ ಸಿಗಲೇ ಇಲ್ಲ, ನೋವಿನಲ್ಲೇ ಮದುವೆ ಆಗದೆ ಉಳಿದಿದ್ದ ರತನ್ ಟಾಟಾ...
ರತನ್ ಟಾಟಾ ಅವರಿಗೆ ಯಾಕೆ ಮದುವೆ ಆಗಿರಲಿಲ್ಲ? ಅಂದಹಾಗೆ ಶತಕೋಟಿ ಭಾರತೀಯ ಪ್ರಜೆಗಳಿಗೆ ಮಾತ್ರವಲ್ಲ, ಈ ಪ್ರಶ್ನೆ ಜಗತ್ತಿನ ಕೋಟಿ ಕೋಟಿ ಜನರಿಗೆ ಕಾಡಿತ್ತು. ಯಾಕೆ ಅಂದ್ರೆ ನೋಡಲು ಅಷ್ಟು ಸುಂದರವಾಗಿದ್ದ ಒಬ್ಬ ವ್ಯಕ್ತಿ, ಜೀವನದ ಕೊನೆಯವರೆಗೂ ಮದುವೆಯನ್ನೇ ಆಗದೇ ಒಂಟಿಯಾಗೇ ಇದ್ದರು. ಹಾಗಿದ್ರೆ ರತನ್ ಟಾಟಾ ಅವರು ಮದುವೆ ಯಾಕೆ ಆಗಿರಲಿಲ್ಲ? ರತನ್ ಟಾಟಾ ಅವರಿಗೆ ಲವ್ ಫೆಲ್ಯೂರ್ ಆಗಿತ್ತಾ? ಜೀವನದಲ್ಲಿ ರತನ್ ಟಾಟಾ ಅವರು, ಅನುಭವಿಸಿದ್ದ ನೋವುಗಳು ಎಂತಹದ್ದು? ಬನ್ನಿ ತಿಳಿಯೋಣ.
ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇದ್ದೇ ಇರುತ್ತಾಳೆ ಅನ್ನೋ ಮಾತಿಗೆ ಈಗ ರತನ್ ಟಾಟಾ ಕೂಡ ಹೊರತಾಗಿಲ್ಲ. ಆದರೆ ರತನ್ ಟಾಟಾ ಅವರ ಲವ್ ಸ್ಟೋರಿ ತುಂಬಾ ನೋವಿನಿಂದ ಕೂಡಿತ್ತು. ರತನ್ ಟಾಟಾ ಅವರು ಕಟ್ಟಿಕೊಂಡ ನೂರಾರು ಕನಸುಗಳ ಮೇಲೆ ಬೆಂಕಿ ಬಿದ್ದಿತ್ತು. ಆ ಎಲ್ಲಾ ನೋವುಗಳನ್ನು ತಡೆದುಕೊಂಡು, ನೋವು ನುಂಗಿ ಬದುಕಿದ್ದ ರತನ್ ಟಾಟಾ ಅವರು ಭಾರತದ ಉದ್ಯಮ ಲೋಕದ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದ್ದು ಈಗ ಇತಿಹಾಸ. ಹಾಗಾದ್ರೆ, ರತನ್ ಟಾಟಾ ಅವರು ಜೀವನದಲ್ಲಿ ಮದುವೆಯೇ ಆಗಬಾರದು ಎಂಬ ನಿರ್ಧಾರ ಕೈಗೊಂಡಿದ್ದು ಏಕೆ?

ಪ್ರೀತಿಯಲ್ಲಿ ಸೋತು, ಜೀವನದಲ್ಲಿ ಗೆದ್ದರು!
ರತನ್ ಟಾಟಾ ಅವರ ಬಗ್ಗೆ ಜನರಿಗೆ ಯಾಕಿಷ್ಟು ಗೌರವ? ಯಾಕಿಷ್ಟು ಪ್ರೀತಿ? ಅಂತಾ ಪ್ರಶ್ನೆ ಕೇಳಿದರೆ ಅದಕ್ಕೆ ಉತ್ತರ ರತನ್ ಟಾಟಾ ಅವರ ನಡತೆ. ಹೌದು, ರತನ್ ಟಾಟಾ ಅವರ ಬಳಿ ಸಾವಿರಾರು ಕೋಟಿ ರೂಪಾಯಿ ಇದ್ದರೂ ಸಮಾಜಮುಖಿ ಕೆಲಸ ಮಾಡುತ್ತಾ ಬದುಕಿದ್ದರು. ಹಾಗೂ ರತನ್ ಟಾಟಾ ಅವರು ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಆಗದೆ ನರಳಿದ್ದರೂ, ಭಾರತದಲ್ಲಿ ಕೋಟ್ಯಂತರ ಜನರ ಜೀವ & ಜೀವನ ಉಳಿಸಿದ್ದರು. ಇಂದಿಗೂ ರತನ್ ಟಾಟಾ ಅವರ ಕಾರಣಕ್ಕೆ ಭಾರತದಲ್ಲಿ ಅದೆಷ್ಟೋ ದೊಡ್ಡ ಉದ್ಯಮಗಳು ಸಕ್ಸಸ್ ಆಗಿವೆ. ಹಾಗಾದ್ರೆ ರತನ್ ಟಾಟಾ ಅವರು ಲವ್ ಮಾಡಿದ್ದ ಹುಡುಗಿ ಯಾರು? ಪ್ರೀತಿಗೆ ಹಣ ಅಡ್ಡಿ ಬಂದಿತ್ತಾ? ಇಬ್ಬರೂ ದೂರವಾಗಿದ್ದು ಏಕೆ?
ರತನ್ ಟಾಟಾ ಪ್ರೀತಿ ಮುರಿದಿದ್ದು ಹೇಗೆ?
ಜೀವನದಲ್ಲಿ ಒಂದು ಮದುವೆ ಆಗಿ ಬಿಡಬೇಕು, ಮದುವೆ ಆಗುವುದೇ ದೊಡ್ಡ ಸಾಧನೆ ಎಂಬ ರೀತಿ ಕೆಲವರು ಮಾತನಾಡುತ್ತಾರೆ. ಆದರೆ ರತನ್ ಟಾಟಾ ಅವರ ಜೀವನದಲ್ಲಿ ಈ ಮಾತು ಸುಳ್ಳಾಗಿ ಹೋಗಿತ್ತು. ರತನ್ ಟಾಟಾ ಅವರು ಅಮೆರಿಕದಲ್ಲಿ ಶಿಕ್ಷಣ ಪಡೆದಿದ್ದರು & ಟಾಟಾ ಅವರು ಕೆಲವು ಸಮಯ ಅಮೆರಿಕದಲ್ಲೇ ಕೆಲಸ ಮಾಡಿ ಅನುಭವ ಪಡೆದರು. ಹೀಗೆ ಅವರು ಅಂದ್ರೆ ರತನ್ ಟಾಟಾ ಅವರು ಅಮೆರಿಕದಲ್ಲಿ ಕೆಲಸ ಮಾಡುವಾಗ, ಅಮೆರಿಕ ದೇಶದ ಲಾಸ್ ಏಂಜಲೀಸ್‌ನಲ್ಲಿ ಒಬ್ಬ ಯುವತಿ ಜೊತೆಗೆ ಲವ್ ಆಗಿತ್ತಂತೆ.
ರತನ್ ಟಾಟಾ ಅವರಿಗೆ ಲವ್ ಆಗಿದ್ದ ಸಮಯದಲ್ಲೇ, 1962ರ ಇಂಡೋ-ಚೀನಾ ಯುದ್ಧವು ನಡೆಯುತ್ತಿತ್ತು. ಹೀಗೆ ಭಾರತ & ಚೀನಾ ನಡುವೆ ಯುದ್ಧದ ಹಿನ್ನೆಲೆ, ರತನ್ ಟಾಟಾ ಅವರು ಪ್ರೀತಿ ಮಾಡಿದ್ದ ಹುಡುಗಿಯ ಪೋಷಕರು ಭಾರತಕ್ಕೆ ಬರಲು ಒಪ್ಪಲಿಲ್ಲ ಎನ್ನಲಾಗಿತ್ತು. ಇದೇ ಕಾರಣಕ್ಕೆ ರತನ್ ಟಾಟಾ ಅವರ ಪ್ರೀತಿಯು ಮುರಿದು ಬಿತ್ತು. ಕೊನೆಗೆ ಇದೇ ನೋವಲ್ಲಿ ರತನ್ ಟಾಟಾ ಅವರು ಮದುವೆ ಆಗದೆ ಕೊನೆಯವರೆಗೂ ಒಂಟಿಯಾಗಿ ಇದ್ದರಂತೆ. ಈ ಮೂಲಕ, ಲವ್ ಫೆಲ್ಯೂರ್ ಆಗಿ ಸೋತು ಹೋದರೂ, ಜೀವನದಲ್ಲಿ ರತನ್ ಟಾಟಾ ಅವರು ದೊಡ್ಡ ಗೆಲುವು ಸಾಧಿಸಿದ್ದರು.












Click it and Unblock the Notifications