ಕಾಣಲಿಲ್ಲ ಚಂದಿರ: ಶುಕ್ರವಾರದ ಬದಲು ಶನಿವಾರ ರಂಜಾನ್
ನವ ದೆಹಲಿ, ಜೂನ್ 14: ಗುರುವಾರ ರಾತ್ರಿ ಚಂದ್ರ ಕಾಣದ ಕಾರಣ ಶುಕ್ರವಾರದ ಬದಲಿಗೆ ಶನಿವಾರ ರಂಜಾನ್ ಆಚರಿಸುವಂತೆ ಜಾಮಾ ಮಸೀದಿ ಹೇಳಿದೆ.
ಈ ಮುಂಚೆ ಶುಕ್ರವಾರ ರಂಜಾನ್ ಇರುವುದಾಗಿ ಹೇಳಲಾಗಿತ್ತು. ಆದರೆ ಗುರುವಾರ ರಾತ್ರಿ ಚಂದಿರನ ದರ್ಶನವಾಗದ ಕಾರಣ ಶನಿವಾರ ರಂಜಾನ್ ಆಚರಿಸುವಂತೆ ಜಾಮಾ ಮಸೀದಿಯ ಇಮಾಮ್ ಘೊಷಿಸಿದ್ದಾರೆ.

ಗುರುವಾರ ದೇಶದ ಯಾವ ಕಡೆಯೂ ಚಂದಿರನ ದರ್ಶನ ಆಗಿಲ್ಲವೆನ್ನಲಾಗುತ್ತಿದೆ. ರಂಜಾನ್ ಆಚರಣೆಯ ಹಿಂದಿನ ದಿನ ಚಂದಿರನ ದರ್ಶನ ಕಡ್ಡಾಯವಾಗಿದೆ. ಅಕಸ್ಮಾತ್ ಚಂದಿರನ ದರ್ಶನ ಆಗದಿದ್ದಲ್ಲಿ ಒಂದು ದಿನ ಕಳೆದು ರಂಜಾನ್ ಆಚರಿಸಬಹುದಾಗಿದೆ.
ತಿಂಗಳ ಉಪವಾಸದ ಕೊನೆಯ ದಿನ ಚಂದಿರನ ದರ್ಶನ ಮಾಡಿ ಉಪವಾಸ ಮುರಿಯುವುದು ಮುಸ್ಲೀಂರ ಪ್ರತೀತಿ. ಉಪವಾಸದ ಕೊನೆಯ ದಿನ ಆದರೆ ಇಂದು ಚಂದಿರ ಕಾಣದ ಕಾರಣ ಒಂದು ದಿನವಾಗಿ ರಂಜಾನ್ ಆಚರಣೆಗೆ ನಿರ್ಣಯ ಮಾಡಲಾಗಿದೆ.












Click it and Unblock the Notifications