ರಂಜಾನ್ 2022 ಪ್ರಾರಂಭ: ಪ್ರಧಾನಿ ಮೋದಿ ಸೇರಿ ಹಲವು ಗಣ್ಯರ ಶುಭಾಶಯ
ನವದೆಹಲಿ, ಏಪ್ರಿಲ್ 03: ನಿನ್ನೆ ಸಂಜೆ ದೇಶದ ಹಲವೆಡೆ ಚಂದ್ರ ದರ್ಶನವಾದ ಬಳಿಕ ಪವಿತ್ರ ರಂಜಾನ್ ಮಾಸ ಇಂದು (ಏಪ್ರಿಲ್ 03) ಆರಂಭವಾಗಿದೆ. ಮುಸ್ಲಿಂ ಬಾಂಧವರು ನಿನ್ನೆ ರಾತ್ರಿ ಸ್ಥಳೀಯ ಮಸೀದಿಗಳಲ್ಲಿ ತರಾವೀಹ್ ಎಂಬ ವಿಶೇಷ ರಾತ್ರಿ ಪ್ರಾರ್ಥನೆ ಸಲ್ಲಿಸಿದರು. ಇಂದು ಉಪವಾಸದ ಮೊದಲ ದಿನ ಆರಂಭವಾಗಿದೆ. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಶುಭಾಶಯ ತಿಳಿಸಿದ್ದಾರೆ.
ಪವಿತ್ರ ರಂಜಾನ್ ತಿಂಗಳ ಆರಂಭದ ಹಿನ್ನೆಲೆ ಶುಭಾಶಯ ತಿಳಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ಈ ಪವಿತ್ರ ಮಾಸ ಬಡವರ ಸೇವೆ ಮಾಡಲು ಜನರನ್ನು ಪ್ರೇರೇಪಿಸಲಿ," ಎಂದು ಟ್ವೀಟ್‌ನಲ್ಲಿ ಮೋದಿ ಹಾರೈಸಿದ್ದಾರೆ. "ಇದು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಾನುಭೂತಿಯ ಮನೋಭಾವವನ್ನು ಮತ್ತಷ್ಟು ಹೆಚ್ಚಿಸುತ್ತದೆ," ಎಂದಿದ್ದಾರೆ.
ಇದೇ ವೇಳೆ, ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಕೂಡಾ ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದಾರೆ. ಪವಿತ್ರ ರಂಜಾನ್ ತಿಂಗಳ ಆರಂಭದಲ್ಲಿ ಜನರಿಗೆ ಶುಭಾಶಯ ಕೋರಿದ್ದಾರೆ. "ರಂಜಾನ್ ದೇವರ ಮೇಲಿನ ನಂಬಿಕೆ, ಜೀವನದಲ್ಲಿ ಶುದ್ಧತೆ ಮತ್ತು ಬಡವರ ಬಗ್ಗೆ ಸಹಾನುಭೂತಿಯನ್ನು ಸಂಕೇತಿಸುತ್ತದೆ. ಈ ರಂಜಾನ್ ಜನರ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ," ಎಂದು ಹಾರೈಸಿದ್ದಾರೆ.
Greetings on the commencement of Ramzan. pic.twitter.com/Q5YaWzaz38
— Narendra Modi (@narendramodi) April 2, 2022
ರಂಜಾನ್ ಇಸ್ಲಾಮಿಕ್ ಕ್ಯಾಲೆಂಡರ್‌ನ ಒಂಬತ್ತನೇ ತಿಂಗಳು ಮತ್ತು ಈದ್-ಉಲ್-ಫಿತರ್ ಅನ್ನು ಉಪವಾಸದ ತಿಂಗಳ ಕೊನೆಯಲ್ಲಿ ಆಚರಣೆ ಮಾಡಲಾಗುತ್ತದೆ. ಇನ್ನು ಈ ಪವಿತ್ರ ತಿಂಗಳ ಆರಂಭದಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡಾ ಶುಭಾಶಯ ಹೇಳಿದ್ದಾರೆ. "ರಂಜಾನ್ ಮುಬಾರಕ್! ಈ ಪವಿತ್ರ ಮಾಸವು ಎಲ್ಲರಿಗೂ ಉತ್ತಮ ಆರೋಗ್ಯ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ," ಎಂದು ಟ್ವೀಟ್ ಮಾಡಿದ್ದಾರೆ.

ಕರ್ನಾಟಕ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಕೂಡಾ ಶುಭಾಶಯ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸುಧಾಕರ್, "ರಂಜಾನ್‌ನ ಈ ಪವಿತ್ರ ತಿಂಗಳು ಎಲ್ಲರಿಗೂ ಶಾಂತಿ ಮತ್ತು ಸಂತೋಷವನ್ನು ತರಲಿ. ಸರ್ವಶಕ್ತನು ನಮ್ಮೆಲ್ಲರ ಜೀವನವನ್ನು ಸಮೃದ್ಧಿ ಮತ್ತು ಬೆಳಕಿನಿಂದ ತುಂಬಲಿ," ಎಂದು ಹಾರೈಸಿದ್ದಾರೆ.
May this holy moth of Ramzan bring peace and joy for all. May the almighty fill all our lives with prosperity and light. pic.twitter.com/aYbTNgtzsZ
— Dr Sudhakar K (@mla_sudhakar) April 3, 2022
ಕರ್ನಾಟಕ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, "ಪವಿತ್ರ ರಂಜಾನ್ ಭಕ್ತಿ, ಸಹನೆ, ಸೇವೆಯ ಮಹೋನ್ನತ ಸಂದೇಶ ಹೊತ್ತು ತಂದಿದೆ. ಹಸಿವುಮುಕ್ತ ಸಮಾಜ ಸೃಷ್ಟಿಗೆ ಉಪವಾಸವು ಉಪಯುಕ್ತ ಪ್ರೇರಣೆ. ಭಾವೈಕ್ಯತೆ, ಸಮೃದ್ಧ, ಸೌಹಾರ್ದತೆಯೊಂದಿಗೆ ಕರುನಾಡು ಇನ್ನಷ್ಟು ಬೆಳಗಲಿ ಎಂಬ ಪ್ರಾರ್ಥನೆಯೊಂದಿಗೆ ಸಮಸ್ತ ಮುಸ್ಲಿಂ ಬಾಂಧವರಿಗೆ ರಂಝಾನ್ ಮಾಸಾರಂಭದ ಶುಭಾಶಯಗಳನ್ನು ಕೋರುತ್ತೇನೆ," ಎಂದು ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದಾರೆ.












Click it and Unblock the Notifications