ರಾಮ್‌ಗೋಪಲ್ ವರ್ಮಾ ಯಾವುದೇ ಕ್ಷಣದಲ್ಲಾದರೂ ಅರೆಸ್ಟ್ ಸಾಧ್ಯತೆ!
Ram Gopal Varma: ಸದಾ ವಿವಾದಗಳಿಂದಲೇ ಫೇಮಸ್ ಆಗಿರುವ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಅವರು ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆಯಿಂದ ಅರೆಸ್ಟ್ ಆಗುವ ಮಟ್ಟಕ್ಕೆ ಸಂಕಷ್ಟವನ್ನು ತಂದುಕೊಂಡಿದ್ದಾರೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಆಂಧ್ರ ಸಚಿವ ಹಾಗೂ ಚಂದ್ರಬಾಬು ನಾಯ್ಡು ಅವರ ಮಗ ನಾರಾ ಲೋಕೇಶ್ ಮತ್ತು ಅವರ ಪತ್ನಿ ಬ್ರಹ್ಮಿಣಿ ಅವರ ಬಗ್ಗೆ ವಿವಾದಾತ್ಮಕ ಪೋಸ್ಟ್ ಮಾಡಿ ತಗ್ಲಾಕೊಂಡಿದ್ದಾರೆ ಎನ್ನಲಾಗಿದೆ.
ವಿವಾದಾತ್ಮಕ ಪೋಸ್ಟ್ ಮಾಡಿದ ಆರೋಪದ ಮೇಲೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿಯ ಪೊಲೀಸರು ರಾಮ್‌ಗೋಪಾಲ್ ವರ್ಮಾ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ರಾಮ್‌ಗೋಪಾಲ್ ವರ್ಮಾ ಅವರ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿರುವ ಆರೋಪದ ಮೇಲೆ ತೆಲುಗು ದೇಶಂ ಪಕ್ಷದ (ಟಿಡಿಪಿ) ಸ್ಥಳೀಯ ಮುಖಂಡರೊಬ್ಬರು ಅಲ್ಲಿ ದೂರು ನೀಡಿದ್ದಾರೆ.

ವರ್ಮಾ ಅವರು ಅವರ ಸಿನಿಮಾದಲ್ಲಿ ಚಂದ್ರಬಾಬು ನಾಯ್ಡು ಅವರ ಬಗ್ಗೆ ಕೆಟ್ಟದಾಗಿ ಚಿತ್ರಿಸಿದ್ದಾರೆ. ಅಲ್ಲದೇ, ಸೋಷಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ಪೋಸ್ಟ್ ಹಾಗೂ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎನ್ನಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಪದೇ ಪದೇ ಚಂದ್ರಬಾಬು ನಾಯ್ಡು ಹಾಗೂ ತೆಲುಗುದೇಶಂ ಪಕ್ಷದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಆದರೆ, ವರ್ಮಾ ಅವರ ಮಾತು ಕೇವಲ ಸಕಾರಾತ್ಮಕ ಟೀಕೆಯಾಗಿದರೆ, ವಿವಾದದ ಕೇಂದ್ರ ಬಿಂದುವಾಗಿದೆ ಎನ್ನಲಾಗಿದೆ.
ಐಟಿ ಕಾಯ್ದೆ ಬಳಕೆ: ಇನ್ನು ರಾಮ್‌ಗೋಪಾಲ್ ವಿರುದ್ಧ ಐಟಿ ಕಾಯ್ದೆಯ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಆಂಧ್ರಪ್ರದೇಶದ ಸೋಷಿಯಲ್ ಮೀಡಿಯಾದ ಮೇಲೆ ಕಣ್ಣಿಟ್ಟಿದ್ದಾರೆ. ಅಲ್ಲಿ ವಿವಾದಾತ್ಮಕ, ದ್ವೇಷ ಹಾಗೂ ಸುಳ್ಳು ವಿಷಯಗಳನ್ನು ಹಂಚಿಕೊಳ್ಳುವವರ ಮೇಲೆ ಕಣ್ಣಿಟ್ಟಿದ್ದು, ಎಲ್ಲೆ ಮೀರಿ ನಡೆದಿಕೊಳ್ಳುತ್ತಿರುವವರ ಮೇಲೆ ದೂರು ದಾಖಲಿಸಿಕೊಳ್ಳಲಾಗುತ್ತಿದೆ ಎನ್ನಲಾಗುತ್ತಿದೆ.
ದರ್ಶನ್ ಬಗ್ಗೆಯೂ ಮಾತಾಡಿದ್ದರು: ಇನ್ನು ಈ ಹಿಂದೆ ರಾಮ್‌ಗೋಪಾಲ್ ವರ್ಮಾ ಅವರು, ನಟ ಹಾಗೂ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಅವರ ಬಗ್ಗೆಯೂ ಈ ಹಿಂದೆ ಟ್ವೀಟ್ ಮಾಡಿದ್ದರು. ಆದರೆ, ನಟ ದರ್ಶನ್ ಅವರ ಹೆಸರನ್ನು ಉಲ್ಲೇಖ ಮಾಡದೆ ಮರ್ಮಾ ಅವರು ಟ್ವೀಟ್ ಮಾಡಿದ್ದರು.
ವಿವಾದಾತ್ಮಕ ಸಿನಿಮಾ, ಕಾಮೆಂಟ್: ರಾಮ್‌ಗೋಪಾಲ್ ವರ್ಮಾ ಅವರು ವಿವಾದಾತ್ಮಕ ಸಿನಿಮಾ ಹಾಗೂ ಕಾಮೆಂಟ್‌ಗಳಿಂದಲೇ ಹೆಚ್ಚು ಫೇಮಸ್ ಆದವರು. ಅವರ ಪ್ರತಿ ಸಿನಿಮಾವೂ ಒಂದಿಲ್ಲೊಂದು ವಿವಾದವನ್ನು ಸೃಷ್ಟಿ ಮಾಡಿವೆ. ಸಿನಿಮಾ ಬಿಡುಗಡೆಗೆ ಮುಂಚೆ ಒಂದು ವಿವಾದವಾದರೆ, ಸಿನಿಮಾ ಬಿಡುಗಡೆಯಾದ ಮೇಲೆ ಮತ್ತೊಂದು ರೀತಿಯ ವಿವಾದ ಸೃಷ್ಟಿಯಾಗಿದ್ದು, ಇದೆ. ಪ್ರಮುಖ ನಟ, ನಟಿಯರ ಬಗ್ಗೆ ಕೆಟ್ಟದಾಗಿ ಹಾಗೂ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿರುವ ಉದಾಹರಣೆಯೂ ಇದೆ.
ರಾಷ್ಟ್ರಪತಿ ವಿರುದ್ಧವೇ ಮಾತನಾಡಿದ್ದರು: ಇನ್ನು ರಾಷ್ಟ್ರಪತಿ ವಿರುದ್ಧವೂ ರಾಮಗೋಪಾಲ ವರ್ಮಾ ವಿವಾದಾತ್ಮಕವಾಗಿ ಮಾತನಾಡಿರುವುದು ಇದೆ. ದ್ರೌಪತಿ ಮುರ್ಮು ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದ ಬೆನ್ನಲ್ಲೇ, "ದ್ರೌಪತಿ" ಅವರು ರಾಷ್ಟ್ರಪತಿಯಾದರೆ ಪಾಂಡವರು ಯಾರು ಎಲ್ಲಕ್ಕಿಂತ ಮುಖ್ಯವಾಗಿ ಕೌರವರು ಯಾರು ಎಂದು ಟ್ವೀಟ್ ಮಾಡಿ ವಿವಾದ ಸೃಷ್ಟಿ ಮಾಡಿದ್ದರು. ಈ ಟ್ವೀಟ್‌ಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ಮಾತ್ರವಲ್ಲ ವರ್ಮಾ ವಿರುದ್ಧ ಕೇಸ್ ಸಹ ದಾಖಲಾಗಿತ್ತು. ಇದಾದ ನಂತರ ಟ್ವೀಟ್ ಬಗ್ಗೆ ಮಾತನಾಡಿದ್ದ ವರ್ಮಾ, ನಾನು ಸುಮ್ಮನೆ ತಮಾಷೆಗೆ ಹೇಳಿದ್ದೆ. ದ್ರೌಪತಿ ಎನ್ನುವ ಹೆಸರು ಅಪರೂಪವಾಗಿದೆ. ಹೀಗಾಗಿ ನಾನು ಸುಮ್ಮನೆ ತಮಾಷೆ ಮಾಡಿದ್ದೆ ಎಂದಿದ್ದರು.












Click it and Unblock the Notifications