Raksha Bandhan Gift 2026: ರಾಶಿಗನುಸಾರವಾಗಿ ರಕ್ಷಾಬಂಧನದ ದಿನ ಸಹೋದರಿಗೆ ಯಾವ ಉಡುಗೊರೆ ನೀಡಬೇಕು?

Raksha Bandhan Gift 2026: ಆಗಸ್ಟ್ 28, ಶುಕ್ರವಾರ ರಕ್ಷಾಬಂಧನ ಹಬ್ಬವನ್ನು ಆಚರಿಸಲಾಗುವುದು. ರಾಖಿ ಕಟ್ಟಿದ ಮೇಲೆ ಸಹೋದರಿಗೆ, ಉಡುಗೊರೆ ನೀಡುವುದು ಹಿಂದಿನಿಂದ ನಡೆದುಕೊಂಡ ಪದ್ದತಿ. ಕೆಲವೊಮ್ಮೆ ಸಹೋದರಿ ಇಂಥದ್ದೇ ಉಡುಗೊರೆ ಬೇಕು ಬೇಡಿಕೆ ಇಡಬಹುದು. ಆದರೆ ಬಹುತೇಕ ಸಂದರ್ಭಗಳಲ್ಲಿ ಸಹೋದರನೇ ತನ್ನ ಅಕ್ಕ ಅಥವಾ ತಂಗಿಗೆ ಏನು ಬೇಕು ಎನ್ನುವುದನ್ನು ಮನದಟ್ಟು ಮಾಡಿಕೊಂಡು ಉಡುಗೊರೆ ನೀಡುತ್ತಾನೆ. ಹೀಗೆ ಉಡುಗೊರೆ ನೋಡುವಾಗ ರಾಶಿಗೆ ಅನುಸಾರವಾಗಿ ಯಾವ ರೀತಿಯ ಉಡುಗೊರೆಗಳನ್ನು ನೀಡಬೇಕು ಎನ್ನುತ್ತದೆ ಜ್ಯೋತಿಷ್ಯ.

ಮೇಷ ರಾಶಿ: ಮಂಗಳ ಮೇಷ ರಾಶಿಯ ಅಧಿಪತ್ಯದ ಗ್ರಹ. ಇದು ಈ ರಾಶಿಯನ್ನು ಶಕ್ತಿಯುತ, ಸ್ಪರ್ಧಾತ್ಮಕ ಮತ್ತು ಕ್ರಿಯಾಶೀಲವಾಗಿಸುತ್ತದೆ. ಮೇಷ ರಾಶಿಯವರು ಫಿಟ್‌ನೆಸ್ ಅಥವಾ ಸಾಹಸವನ್ನು ಪ್ರೋತ್ಸಾಹಿಸುವ ಉಡುಗೊರೆಯನ್ನು ಇಷ್ಟಪಡಬಹುದು.

Raksha Bandhan Gift 2026

ಮೇಷ ರಾಶಿಯವರಿಗೆ ರಕ್ಷಾ ಬಂಧನದ ಅತ್ಯುತ್ತಮ ಉಡುಗೊರೆಗಳು

ಸ್ಮಾರ್ಟ್ ವಾಚ್ ಅಥವಾ ಫಿಟ್ನೆಸ್ ಟ್ರ್ಯಾಕರ್
ಸ್ಫೋಟ್ಸ್‌ ಶೂ ಅಥವಾ ಜಿಮ್ ಪರಿಕರಗಳು
ವೈರ್‌ಲೆಸ್ ಹೆಡ್‌ಫೋನ್‌ಗಳು, ಗೇಮಿಂಗ್ ಪರಿಕರಗಳು
ಮೇಷ ರಾಶಿಯವರು ಸಾಮಾನ್ಯವಾಗಿ ಇಂಥಹ ಉಡುಗೊರೆಗಳನ್ನು ಹೆಚ್ಚು ಇಷ್ಟಪಡುತ್ತಾರೆ.

ವೃಷಭ ರಾಶಿ: ವೃಷಭ ರಾಶಿಯ ಅಧಿಪತಿ ಗ್ರಹ ಶುಕ್ರ. ಇವರು ಸೌಕರ್ಯ, ಸೌಂದರ್ಯ, ಐಷಾರಾಮಿ ವಸ್ತುಗಳನ್ನು ಇಷ್ಟಪಡುತ್ತಾರೆ. ವೃಷಭ ರಾಶಿಯ ಸಹೋದರ ಅಥವಾ ಸಹೋದರಿ ಪ್ರಮಾಣಕ್ಕಿಂತ ಗುಣಮಟ್ಟವನ್ನು ಹೆಚ್ಚು ಗೌರವಿಸಬಹುದು.

ವೃಷಭ ರಾಶಿಯವರಿಗೆ ರಕ್ಷಾ ಬಂಧನದ ಅತ್ಯುತ್ತಮ ಉಡುಗೊರೆಗಳು

ಪ್ರೀಮಿಯಂ ಸುಗಂಧ ದ್ರವ್ಯ
ಪರ್ಸ್‌
ಸ್ಕಿನ್‌ ಕೇರ್‌, ಸೆಲ್ಫ್‌ ಕೇರ್ ಪ್ರಾಡಕ್ಟ್‌
ಗಡಿಯಾರ‌
ಸುಂದರವಾಗಿ ಪ್ಯಾಕ್ ಮಾಡಲಾದ ಫುಡ್ ಹ್ಯಾಂಪರ್ .

ಮಿಥುನ ರಾಶಿ: ಮಿಥುನ ರಾಶಿಯ ಅಧಿಪತಿ ಬುಧ ಗ್ರಹ. ಇದು ಸಂವಹನ, ಕುತೂಹಲ ಮತ್ತು ಬುದ್ಧಿಶಕ್ತಿಗೆ ಸಂಬಂಧಿಸಿದ ಗ್ರಹವಾಗಿದೆ. ಈ ರಾಶಿಯವರು ಹೊಸ ವಿಷಯಗಳನ್ನು ಕಂಡುಕೊಳ್ಳಲು ಮತ್ತು ಆಕ್ಟಿವ್‌ ಆಗಿರಲು ಇಷ್ಟಪಡುತ್ತಾರೆ.

ಮಿಥುನ ರಾಶಿಯವರಿಗೆ ರಕ್ಷಾ ಬಂಧನದ ಅತ್ಯುತ್ತಮ ಉಡುಗೊರೆಗಳು

ಬೆಸ್ಟ್ ಸೆಲ್ಲರ್ ಅಥವಾ ಆಸಕ್ತಿದಾಯಕ ಪುಸ್ತಕ
ಸ್ಮಾರ್ಟ್ ಗ್ಯಾಜೆಟ್
ವೈರ್‌ಲೆಸ್ ಇಯರ್‌ಬಡ್‌ಗಳು
ಜರ್ನಲ್ ಅಥವಾ ರೈಟಿಂಗ್‌ ಸೆಟ್‌
ಬೋರ್ಡ್ ಅಥವಾ ಸ್ಟಾಟರ್ಜಿ ಗೇಮ್‌

ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯ ಅಧಿಪತಿ ಚಂದ್ರ. ಈ ರಾಶಿಯವರು ಅತ್ಯಂತ ಭಾವನಾತ್ಮಕವಾಗಿರುತ್ತಾರೆ. ಕರ್ಕಾಟಕ ರಾಶಿಯ ಸಹೋದರಿಯರು ದುಬಾರಿ ಉಡುಗೊರೆಗಿಂತ ಭಾವನೆಗಳನ್ನು ಅರ್ಥವನ್ನು ಹೊಂದಿರುವ ಉಡುಗೊರೆಯನ್ನು ಇಷ್ಟಪಡಬಹುದು.

ಕರ್ಕಾಟಕ ರಾಶಿಯವರಿಗೆ ರಕ್ಷಾ ಬಂಧನದ ಅತ್ಯುತ್ತಮ ಉಡುಗೊರೆಗಳು

ಪರ್ಸನಲೈಸ್ಡ್‌ ಫೋಟೋ ಆಲ್ಬಮ್
ಕಸ್ಟಮೈಸ್ ಮಾಡಿದ ಆಭರಣಗಳು
ಮೆಮೊರಿ ಸ್ಕ್ರ್ಯಾಪ್‌ಬುಕ್
ಕೈಬರಹದ ಪತ್ರ
ಪರ್ಸನಲೈಸ್ಡ್‌ ಹೋಂ ಡೆಕೋರ್‌

ಸಿಂಹ ರಾಶಿ : ಸೂರ್ಯ ಸಿಂಹ ರಾಶಿಯವರ ಅಧಿಪತಿ ಗ್ರಹ

ಸಿಂಹ ರಾಶಿಯವರಿಗೆ ರಕ್ಷಾ ಬಂಧನದ ಅತ್ಯುತ್ತಮ ಉಡುಗೊರೆಗಳು

ಸ್ಟೇಟ್‌ಮೆಂಟ್ ವಾಚ್
ಸ್ಟೈಲಿಶ್ ಸನ್ಗ್ಲಾಸ್
ಪ್ರೀಮಿಯಂ ಪರಿಕರಗಳು
ಪರ್ಸನಲೈಸ್ಡ್‌ ಆಭರಣಗಳು
ಫ್ಯಾಷನ್ ಅಥವಾ ಗ್ರೂಮಿಂಗ್‌ ಹ್ಯಾಂಪರ್‌

ಕನ್ಯಾರಾಶಿ: ಕನ್ಯಾ ರಾಶಿಯ ಅಧಿಪತಿ ಗ್ರಹ ಬುಧ. ಇವರು ಪ್ರಾಯೋಗಿಕ, ಸಂಘಟಿತ ವಿಷಯಗಳಿಗೆ ಹೆಸರುವಾಸಿಯಾಗಿರುತ್ತಾರೆ. ನಿಮ್ಮ ಮನೆಯಲ್ಲಿಯೂ ಕನ್ಯಾ ರಾಶಿಯ ಸಹೋದರಿಯರಿದ್ದರೆ ಅವರ ದೈನಂದಿನ ಜೀವನವನ್ನು ಸುಲಭಗೊಳಿಸುವ ಚಿಂತನಶೀಲ ಉಡುಗೊರೆಯನ್ನು ನೀಡುವುದು ಒಳ್ಳೆಯದು.

ಕನ್ಯಾ ರಾಶಿಯವರಿಗೆ ರಕ್ಷಾ ಬಂಧನದ ಅತ್ಯುತ್ತಮ ಉಡುಗೊರೆಗಳು

ಪ್ರೀಮಿಯಂ ಪ್ಲಾನರ್
ಡೆಸ್ಕ್ ಆರ್ಗನೈಸರ್
ಸ್ಮಾರ್ಟ್ ಪ್ರೊಡಕ್ಟಿವಿಟಿ ಗ್ಯಾಜೆಟ್
ಗುಣಮಟ್ಟದ ಲೇಖನ ಸಾಮಗ್ರಿಗಳು
ಉಪಯುಕ್ತ ಪ್ರಯಾಣ ಪರಿಕರಗಳು

ತುಲಾ ರಾಶಿ: ತುಲಾ ರಾಶಿಯ ಅಧಿಪತಿ ಗ್ರಹ ಶುಕ್ರ. ತುಲಾ ರಾಶಿಯವರು ಸೊಗಸಾದ ಮತ್ತು ನೋಡುವುದಕ್ಕೆ ಆಕರ್ಷಕವಾದ ಉಡುಗೊರೆಗಳನ್ನು ಇಷ್ಟಪಡುತ್ತಾರೆ.

ತುಲಾ ರಾಶಿಯವರಿಗೆ ಅತ್ಯುತ್ತಮ ರಕ್ಷಾ ಬಂಧನ ಉಡುಗೊರೆಗಳು

ಸುಗಂಧ ದ್ರವ್ಯ
ಸ್ಟೈಲಿಶ್ ಹ್ಯಾಂಡ್‌ಬ್ಯಾಗ್ ಅಥವಾ ವ್ಯಾಲೆಟ್
ಆಭರಣಗಳು
ಫ್ಯಾಷನ್ ಪರಿಕರ
ಸೌಂದರ್ಯ ಅಥವಾ ಗ್ರೂಮಿಂಗ್‌ ಹ್ಯಾಂಪರ್

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಅಧಿಪತಿ ಗ್ರಹ ಕೂಡಾ ಮಂಗಳ.

ವೃಶ್ಚಿಕ ರಾಶಿಯವರಿಗೆ ರಕ್ಷಾ ಬಂಧನದ ಅತ್ಯುತ್ತಮ ಉಡುಗೊರೆಗಳು

ಪರ್ಸನಲೈಸ್ಡ್‌ ಸ್ಮರಣಿಕೆ
ಕಸ್ಮೈಸ್ಡ್‌ ಆಭರಣಗಳು
ಅರ್ಥಪೂರ್ಣ ಪುಸ್ತಕ.
ಮಿಸ್ಟ್ರೀ ಅಥವಾ ಸ್ಟಾಟರ್ಜಿ ಗೇಮ್‌

ಧನು ರಾಶಿ: ಧನು ರಾಶಿಯವರನ್ನು ಆಳುವುದು ಗುರುಗ್ರಹ. ಇವರಿಗೆ ಸ್ವಾತಂತ್ರ್ಯ, ಅನ್ವೇಷಣೆ ಮತ್ತು ಸಾಹಸ ಅಂದರೆ ಇಷ್ಟ. ಸಾಂಪ್ರದಾಯಿಕ ಉಡುಗೊರೆಯೆಂದರೆ ಈ ರಾಶಿಯವರಿಗೆ ಇಷ್ಟ.

ಧನು ರಾಶಿಯವರಿಗೆ ರಕ್ಷಾ ಬಂಧನದ ಅತ್ಯುತ್ತಮ ಉಡುಗೊರೆಗಳು

ಟ್ರಾವಲ್‌ ಬ್ಯಾಕ್‌ಪ್ಯಾಕ್‌
ಪಾಸ್‌ಪೋರ್ಟ್ ಹೋಲ್ಡರ್‌
ಟ್ರಾವೆಲ್‌ ಆರ್ಗನೈಜರ್‌
ಎಕ್ಸ್‌ಪೀರಿಯೆನ್ಸ್‌ ವೋಚರ್
ಅಡ್ವೆಂಚರ್‌ ಆಕ್ಟಿವಿಟಿ

ಮಕರ ರಾಶಿ: ಶನಿ ಮಕರ ರಾಶಿಯ ಅಧಿಪತಿ. ಇವರು ಶಿಸ್ತು, ಮಹತ್ವಾಕಾಂಕ್ಷೆ, ಜವಾಬ್ದಾರಿ ಮತ್ತು ದೀರ್ಘಕಾಲೀನ ಗುರಿಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಈ ರಾಶಿಯವರು ಸಾಮಾನ್ಯವಾಗಿ ಶಾಶ್ವತ ಮೌಲ್ಯವನ್ನು ಹೊಂದಿರುವ ಉಡುಗೊರೆಗಳನ್ನು ಇಷ್ಟಪಡುತ್ತಾರೆ.

ಮಕರ ರಾಶಿಯವರಿಗೆ ರಕ್ಷಾ ಬಂಧನದ ಅತ್ಯುತ್ತಮ ಉಡುಗೊರೆಗಳು

ಕ್ಲಾಸಿಕ್ ವಾಚ್‌
ಪ್ರೀಮಿಯಂ ಹ್ಯಾಂಡ್‌ ಬ್ಯಾಗ್‌
ಆಫೀಸ್‌ ಆಕ್ಸೆಸರಿ
ಉತ್ತಮ ಕ್ವಾಲಿಟಿಯ ಪರ್ಸ್‌
ವೃತ್ತಿಪರ ಗ್ಯಾಜೆಟ್
ಇವುಗಳಲ್ಲಿ ಅತ್ಯಾಧುನಿಕ ಮತ್ತು ಬಾಳಿಕೆ ಬರುವ ಯಾವುದರೊಂದು ವಸ್ತುವನ್ನು ಆರಿಸಿ.

ಕುಂಭ ರಾಶಿ: ಕುಂಭ ರಾಶಿಯ ಅಧಿಪತಿ ಕೂಡಾ ಶನಿ ಗ್ರಹವೇ.

ಕುಂಭ ರಾಶಿಯವರಿಗೆ ಅತ್ಯುತ್ತಮ ರಕ್ಷಾ ಬಂಧನ ಉಡುಗೊರೆಗಳು

ನವೀನ ಗ್ಯಾಜೆಟ್
ಸ್ಮಾರ್ಟ್ ಹೋಮ್
ಡೆಸ್ಕ್‌ ಡೆಕೋರ್‌
ಕ್ರಿಯೇಟಿವ್‌ DIY ಕಿಟ್

ಮೀನ ರಾಶಿ: ಮೀನ ರಾಶಿಯವರು ಸೃಜನಶೀಲತೆ, ಸಂಗೀತ, ಕಲೆ ಮತ್ತು ಭಾವನಾತ್ಮಕವಾಗಿ ಅರ್ಥಪೂರ್ಣ ವಿಚಾರಗಳತ್ತ ಆಕರ್ಷಿತರಾಗುತ್ತಾರೆ.

ಮೀನ ರಾಶಿಯವರಿಗೆ ರಕ್ಷಾ ಬಂಧನದ ಅತ್ಯುತ್ತಮ ಉಡುಗೊರೆಗಳು

ಕಲಾ ಸಾಮಗ್ರಿಗಳು
ಸಂಗೀತಕ್ಕೆ ಸಂಬಂಧಿಸಿದ ಉಡುಗೊರೆ
ಕಾವ್ಯ ಅಥವಾ ಕಾದಂಬರಿ ಪುಸ್ತಕ
ಪರ್ಸನಲೈಸ್ಡ್‌ ಕಲಾಕೃತಿ
ಸ್ಪಿರಿಚ್ಯುವೆಲ್‌ ಅಥವಾ ಮೆಡಿಟೇಶನ್‌ ಆಕ್ಸೆಸರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+