Raksha Bandhan: ಗಡಿ ಕಾಯುವ ಯೋಧರಿಗೆ ರಾಖಿ ಕಟ್ಟಿದ ಮಕ್ಕಳು!
ಸಹೋದರ & ಸಹೋದರಿಯ ಬಂಧನ ಸಾರುವ ದಿನ ಇದು. ಹಿಂದೂ ಸಂಪ್ರದಾಯದಲ್ಲಿ ಈ ದಿನ ಅತ್ಯಂತ ಪವಿತ್ರದ್ದು. ಹೀಗೆ ಅಕ್ಕ & ತಂಗಿಯರು ತಮ್ಮ ಅಣ್ಣ & ತಮ್ಮಂದಿರಿಗೆ ಇಂದು ರಾಖಿ ಕಟ್ಟಿ, ಶುಭ ಕೋರುತ್ತಾರೆ. ಆದರೆ ಗಡಿಯಲ್ಲಿ ದೇಶ ಕಾಯುತ್ತಿರುವ ಮತ್ತು ತಮ್ಮ ದೇಶದ ಕೋಟ್ಯಂತರ ಸಹೋದರ ಹಾಗೂ ಸಹೋದರಿಯರಿಗಾಗಿ ಚಳಿ, ಗಾಳಿಯನ್ನ ಲೆಕ್ಕಿಸದೆ ಕೆಲಸ ಮಾಡುವ ಯೋಧರನ್ನು ಮರೆಯಲು ಆಗುತ್ತಾ?
#WATCH | Jammu and Kashmir: Under the campaign 'Thanks Jawan', women in Boniyar, Baramulla district prepare rakhis for soldiers ahead of Raksha Bandhan pic.twitter.com/2B0r7rueMr
— ANI (@ANI) August 29, 2023
ಹೌದು, ಇಂದು ದೇಶಾದ್ಯಂತ ರಕ್ಷಾ ಬಂಧನ ಸಂಭ್ರಮದಿಂದ ನಡೆದಿದೆ. ಶಾಲೆ & ಕಾಲೇಜು ಸೇರಿದಂತೆ ಕಚೇರಿಗಳಲ್ಲೂ ರಕ್ಷಾ ಬಂಧನ ಸಂಭ್ರಮ ಮೇಳೈಸಿದೆ. ಇದೇ ರೀತಿ ಗಡಿಯಲ್ಲಿ ಕೂಡ ರಾಖಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಭಾರತದ ಕಿರೀಟ ಜಮ್ಮು ಕಾಶ್ಮೀರದಲ್ಲಿ ಗಡಿ ಕಾಯುವ ಯೋಧರಿಗೆ ರಾಖಿ ಕಟ್ಟುವ ಮೂಲಕ ಮಕ್ಕಳು ಮತ್ತು ಮಹಿಳೆಯರು ರಕ್ಷಾ ಬಂಧನ ಆಚರಿಸಿದ್ದಾರೆ. 'ಥ್ಯಾಂಕ್ಸ್ ಜವಾನ್' ಅಭಿಯಾನದ ಅಡಿಯಲ್ಲಿ, ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಬೋನಿಯಾರ್‌ನಲ್ಲಿ ಮುಸ್ಲಿಂ ಯುವತಿಯರು ಸೈನಿಕರಿಗಾಗಿ ವಿಶೇಷ ರಾಖಿ ತಯಾರಿಸಿ ಕಟ್ಟಿದ್ದಾರೆ. ಈ ಮೂಲಕ ಸಹೋದರ ಸಂಬಂಧ ಸಾರಿದ್ದಾರೆ.

ಸಿಆರ್‌ಪಿಎಫ್ ಸೈನಿಕರಿಗೂ ರಾಖಿ
ಗಡಿಯಲ್ಲಿ ಒಂದು ಕಡೆ ವಿಶೇಷ ರಾಖಿ ಕಟ್ಟಿ ಸಹೋದರಿಯರು ಸಂಭ್ರಮಿಸಿದ್ರೆ ಇದೇ ರೀತಿ ಸಿಆರ್‌ಪಿಎಫ್ ಸೈನಿಕರಿಗೂ ಮಹಿಳೆಯರು ರಾಖಿ ಕಟ್ಟಿದ್ದಾರೆ. ಛತ್ತೀಸ್‌ಗಢ ರಾಜ್ಯದಲ್ಲಿ ಸುಕ್ಮಾ ಜಿಲ್ಲೆಯಲ್ಲಿ ರಕ್ಷಾ ಬಂಧನ ಸಂಭ್ರಮ ಮನೆ ಮಾಡಿದೆ. ಸಾಲಾಗಿ ಬಂದ ಮಹಿಳೆಯರು ಇಂದು ಸಿಆರ್‌ಪಿಎಫ್ ಯೋಧರಿಗೆ ರಾಖಿ ಕಟ್ಟುವ ಮೂಲಕ ಸಹೋದರತ್ವ ಸಾರಿದ್ದಾರೆ. ಹಾಗೇ ಈ ಸಂಭ್ರಮದಲ್ಲಿ ಭಾಗಿಯಾದ ಯೋಧರು ಕೂಡ ಸಂತಸ ವ್ಯಕ್ತಪಡಿಸಿದರು. ಈ ಮೂಲಕ ದೇಶಕ್ಕಾಗಿ ಮತ್ತು ದೇಶದ ಜನರಿಗಾಗಿ ಹಗಲು & ರಾತ್ರಿ ಲೆಕ್ಕಿಸದೆ ಕೆಲಸ ಮಾಡುವವ ವೀರ ಯೋಧರಿಗೆ ಗೌರವ ಸಲ್ಲಿಸಲಾಗಿದೆ.
#WATCH | Chhattisgarh: Women tie rakhi on the wrists of CRPF jawans in Sukma district (29.08) pic.twitter.com/O4HroVs14R
— ANI (@ANI) August 29, 2023
ಯೋಧರಿಗೆ ಸಿಹಿ ತಿನ್ನಿಸಿದ ಪುಟಾಣಿಗಳು
ದೇಶದ ಪ್ರಮುಖ ಗಡಿ ಪ್ರದೇಶಗಳಲ್ಲಿ ಒಂದಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ & ಭಾರತದ ಗಡಿ ಕೂಡುತ್ತದೆ. ಹೀಗೆ ಭಾರತದ ಸೈನಿಕರು ಇಲ್ಲಿ ಜೀವ ಒತ್ತೆ ಇಟ್ಟು ದೇಶದ ಗೌರವ ಹಾಗೂ ದೇಶದ ಜನರ ಜೀವ ಕಾಪಾಡುತ್ತಾರೆ. ಇಂತಿಪ್ಪ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ರಕ್ಷಾ ಬಂಧನದ ಸಂಭ್ರಮ ಮನೆ ಮಾಡಿದೆ. ಬಿಎಸ್‌ಎಫ್ ಯೋಧರ ಕೈಗೆ ರಾಖಿ ಕಟ್ಟಿದ ಶಾಲಾ ಮಕ್ಕಳು ಸಂತಸ ಹಂಚಿಕೊಂಡಿದ್ದಾರೆ. ಈ ವೇಳೆ ಸಾಲಾಗಿ ಬಂದ ಮುದ್ದು ಮುದ್ದು ಪುಟಾಣಿಗಳು, ತಮ್ಮ ಪುಟ್ಟ ಕೈಗಳಿಂದ ವೀರ ಯೋಧರಿಗೆ ರಾಖಿ ಕಟ್ಟಿ ಸಿಹಿ ತಿನ್ನಿಸಿದರು.
#WATCH | BSF jawans celebrate Raksha Bandhan with a group of school children at the international border in the Samba sector of Jammu and Kashmir (29.08) pic.twitter.com/KpWRnPejEZ
— ANI (@ANI) August 30, 2023
ಹಾಗೇ ಮತ್ತೊಂದು ಕಡೆ ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರದಲ್ಲಿ ಶಾಲಾ ಬಾಲಕಿಯರು ಸಿಆರ್‌ಪಿಎಫ್ ಯೋಧರ ಕೈಗೆ ರಾಖಿ ಕಟ್ಟಿದರು. ಈ ಮೂಲಕ ರಕ್ಷಾ ಬಂಧನ ಹಬ್ಬ ಅತ್ಯಂತ ಸಂಭ್ರಮದಿಂದ ಆಚರಿಸಿದರು. ಯೋಧರು ಕೂಡ ರಾಖಿ ಕಟ್ಟಿಸಿಕೊಂಡು ಹಾಗೂ ಮಕ್ಕಳಿಗೆ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು. ಹೀಗೆ ಸದಾ ಉಗ್ರರ ಕಾಟದಿಂದ ಬರೀ ಹಿಂಸೆಯಲ್ಲಿ ಮುಳುಗುವ ಕಣಿವೆ ರಾಜ್ಯಕ್ಕೆ ಹೊಸ ಕಳೆ ಬಂದಂತಾಗಿದೆ. ಅದ್ರಲ್ಲೂ ಗಡಿ ಭಾಗದ ಜನರಿಗೆ ಉಗ್ರರ ಕಾಟದಿಂದ ನೆಮ್ಮದಿ ಸಿಗಲ್ಲ, ಇಂದು ರಾಖಿ ಹಬ್ಬವನ್ನು ಆಚರಿಸಿ ಜನ ಒಂದಷ್ಟು ನಿರಾಳರಾದರು.
#WATCH | The Festival of Raksha Bandhan celebrated with great enthusiasm as school girls tie rakhi on the wrists of CRPF jawans in Jammu and Kashmir's Udhampur (29.08) pic.twitter.com/pjcQ0lctYF
— ANI (@ANI) August 30, 2023
ಒಟ್ನಲ್ಲಿ ದೇಶಾದ್ಯಂತ ರಾಖಿ ಹಬ್ಬದ ಸಂಭ್ರಮವು ಕಳೆಗಟ್ಟಿದ್ದು, ಜನರು ಕೂಡ ಅತ್ಯಂತ ಸಂಭ್ರಮದಿಂದ ರಾಖಿ ಹಬ್ಬವನ್ನ ಆಚರಿಸಿದ್ದಾರೆ. ಅದೇ ರೀತಿ ಗಡಿಯನ್ನ ಕಾಯುವ ವೀರ ಯೋಧರಿಗೂ ಸಹೋದರಿಯರು ರಾಖಿ ಕಟ್ಟಿದ್ದಾರೆ. ಮಕ್ಕಳು ಕೂಡ ಸೈನಿಕರ ಕೈಗೆ ರಾಖಿ ಕಟ್ಟಿ ಸಹೋಧರ ಸಂಬಂಧದ ಮಹತ್ವವನ್ನ ಸಾರಿದ್ದಾರೆ. ಜಗತ್ತಿನ ಮೂಲೆ ಮೂಲೆಯಲ್ಲಿ ವಾಸ ಇರುವ ಭಾರತೀಯರು ರಾಖಿ ಹಬ್ಬವನ್ನು ಇಷ್ಟೇ ಸಂಭ್ರಮ ಹಾಗೂ ಸಡಗರದಿಂದ ಆಚರಿಸಿದ್ದಾರೆ.












Click it and Unblock the Notifications