Breaking: ಕೇಂದ್ರ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ನೇಮಕ
ನವದೆಹಲಿ ಮೇ 12: ಭಾರತದ ನೂತನ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ಅನ್ನು ನೇಮಕಗೊಳಿಸಿ ಕಾನೂನು ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕೇಂದ್ರ ಚುನಾವಣಾ ಆಯೋಗದ ನೂತನ ಆಯುಕ್ತರಾಗಿ ರಾಜೀವ್ ಕುಮಾರ್ ಮೇ 15ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಹಾಲಿ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಮೇ 14 ರಂದು ನಿವೃತ್ತಿ ಹೊಂದಲಿದ್ದಾರೆ.
ಪ್ರಸ್ತುತ ಸುಶೀಲ್ ಚಂದ್ರ ಭಾರತದ 24ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಚುನಾವಣಾ ಆಯೋಗದ ಮುಖ್ಯಸ್ಥರಾಗಿದ್ದ ಸುನೀಲ್ ಅರೋರಾ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿ 2021ರ ಏಪ್ರಿಲ್ 12ರಂದು ನಿವೃತ್ತಿ ಹೊಂದಿದ್ದರು. ಕಳೆದ 2019ರ ಫೆಬ್ರವರಿ 15ರಿಂದ ಚುನಾವಣಾ ಆಯೋಗದಲ್ಲಿ ಸುಶೀಲ್ ಚಂದ್ರ ಸೇವೆ ಸಲ್ಲಿಸುತ್ತಿದ್ದಾರೆ.
In pursuance of clause (2) of article 324 of the Constitution, the President is pleased to appoint Shri Rajiv Kumar as the Chief Election Commissioner with effect from the 15th May, 2022.
— Kiren Rijiju (@KirenRijiju) May 12, 2022
My best wishes to Shri Rajiv Kumar pic.twitter.com/QnFLRLiVPm
ನೂತನ ಆಯುಕ್ತರ ನೇಮಕದ ಬಗ್ಗೆ ಕಿರಣ್ ರಿಜಿಜು ಟ್ವೀಟ್:
"ಸಂವಿಧಾನದ 324 ನೇ ವಿಧಿಯ ಷರತ್ತು (2) ರ ಅನುಸಾರವಾಗಿ, 2022ರ ಮೇ 15 ರಿಂದ ಜಾರಿಗೆ ಬರುವಂತೆ ರಾಜೀವ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಲು ರಾಷ್ಟ್ರಪತಿಗಳು ಸಂತೋಷಪಟ್ಟಿದ್ದಾರೆ. ರಾಜೀವ್ ಕುಮಾರ್ ಅವರಿಗೆ ನನ್ನ ಶುಭಾಶಯಗಳು," ಎಂದು ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ.













Click it and Unblock the Notifications