ಐಟಿ ಕಂಪನಿಯ ಮ್ಯಾನೇಜರ್ ಮೇಲೆ ಸಾಮೂಹಿಕ ಅತ್ಯಾಚಾರ: ಸಿಇಒ ಸೇರಿ ಮೂವರ ಬಂಧನ

ರಾಜಸ್ಥಾನ: ರಾಜಸ್ಥಾನದ ಉದಯಪುರ ಐಟಿ ಕ್ಷೇತ್ರದ ಪ್ರಮುಖ ಕಂಪನಿಯಲ್ಲಿ ಸಾಮೂಹಿಕ ಅತ್ಯಾಚಾರವಾಗಿದ್ದು, ಸಿಇಒ ಸೇರಿ ಮೂವರ ಬಂಧನವಾಗಿದೆ. ರಾಜಸ್ಥಾನದ ಉದಯಪುರದಲ್ಲಿ ಹುಟ್ಟುಹಬ್ಬದ ಪಾರ್ಟಿಯ ನಂತರ ಖಾಸಗಿ ಐಟಿ ಕಂಪನಿಯ ಮಹಿಳಾ ಮ್ಯಾನೇಜರ್‌ವೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಖಾಸಗಿ ಐಟಿ ಕಂಪನಿಯ ಸಿಇಒ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿ ಸಿಇಒ ಜಿತೇಶ್ ಸಿಸೋಡಿಯಾ ಕಳೆದ ಶನಿವಾರ ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅದ್ಧೂರಿ ಪಾರ್ಟಿ ಆಯೋಜಿಸಿದ್ದರು, ಅದರಲ್ಲಿ ಮಹಿಳಾ ಮ್ಯಾನೇಜರ್ ಅವರನ್ನೂ ಸಹ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಪಾರ್ಟಿ ಮುಗಿದ ನಂತರ ಕುಡಿದ ಅಮಲಿನಲ್ಲಿ ಈ ಕೃತ್ಯ ಎಸಗಿರು ಸಾಧ್ಯತೆ ಇದೆ.

Rajasthan Udaipur Gang rape of IT company manager CEO including 3 arrested

ಕಂಪನಿಯ ಮಹಿಳಾ ಕಾರ್ಯನಿರ್ವಾಹಕ ಮುಖ್ಯಸ್ಥೆ ಹಾಗೂ ಮೀರತ್‌ನ ಅವರ ಪತಿ ಗೌರವ್ ಸಿರೋಹಿ ಎನ್ನುವವರನ್ನು ಈ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಲಾಗಿದೆ. ಮೂವರು ಆರೋಪಿಗಳನ್ನು ಗುರುವಾರ ಬಂಧಿಸಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಈ ಆರೋಪಿಗಳನ್ನು ನ್ಯಾಯಾಲಯವು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.

ಮಹಿಳೆ ದೂರಿನಲ್ಲಿ ಏನಿದೆ ?

ಇನ್ನು ದೇಶದ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮ್ಯಾನೇಜರ್ ಮೇಲೆಯೇ ಅತ್ಯಾಚಾರವಾಗಿರುವುದು ಈ ವಲಯದಲ್ಲಿ ಕೆಲಸ ಮಾಡುತ್ತಿರುವ ಇತರ ಉದ್ಯೋಗಿಗಳಲ್ಲಿ ಸಣ್ಣ ಆತಂಕ ಮೂಡಿಸಿದೆ. ಇನ್ನು ಮಹಿಳೆಯ ದೂರಿನಲ್ಲಿ ಪಾರ್ಟಿಯ ನಂತರ ಇನ್ನುಳಿದ ಅತಿಥಿಗಳು ಪಾರ್ಟಿಯಿಂದ ಬೇಗ ಹೋಗಿದ್ದರಿಂದ ಅವರು ಒಂಟಿಯಾಗಿದ್ದರು ಎಂದು ಹೇಳಿದ್ದಾರೆ.

ಮುಂದುವರಿದು ಮಹಿಳಾ ಕಾರ್ಯನಿರ್ವಾಹಕ ಮುಖ್ಯಸ್ಥೆ ಆಕೆಯನ್ನು ಮನೆಗೆ ಬಿಡುವುದಕ್ಕೆ ಮುಂದಾಗಿದ್ದರು. ಅಲ್ಲದೇ ಮಹಿಳೆಯನ್ನು ತಮ್ಮ ಕಾರಿನಲ್ಲಿ ಕರೆದುಕೊಂಡು ಹೋದರು. ಇದೇ ಕಾರಿನಲ್ಲಿ ಸಿಸೋಡಿಯಾ ಮತ್ತು ಸಿರೋಹಿ ಅವರು ಸಹ ಇದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೃತ್ಯದ ಹಿನ್ನೆಲೆ

ಇನ್ನು ಪಾರ್ಟಿಯ ನಂತರ ಮಹಿಳಾ ಮ್ಯಾನೇಜರ್ ಅವರನ್ನು ಮನೆಗೆ ಬಿಡುವ ಮಧ್ಯೆ, ಅಂಗಡಿಯೊಂದರಿಂದ ಸಿಗರೇಟ್ ಹೋಲುವ ವಸ್ತುವೊಂದನ್ನು ಖರೀದಿ ಮಾಡಿದ್ದು ಅದನ್ನು ಸೇವಿಸುವುದಕ್ಕೆ ಕೊಟ್ಟರು. ಇದನ್ನು ತೆಗೆದುಕೊಂಡ ಕೆಲವೇ ಕ್ಷಣಗಳಲ್ಲಿ ಪ್ರಜ್ಞೆ ಕಳೆದುಕೊಂಡಿದ್ದೆ. ಮರುದಿನ ಬೆಳಿಗ್ಗೆ ಎಚ್ಚರವಾದಾಗ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿಯಿತು ಎಂದು ಮಹಿಳೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿಚಾರಣೆಯ ನಂತರ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಿಳೆಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಪ್ರಕರಣವನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಾಧುರಿ ವರ್ಮಾ ಅವರಿಗೆ ಹಸ್ತಾಂತರಿಸಲಾಯಿತು ಎಂದು ಉದಯಪುರ ಪೊಲೀಸರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+