Sachin Pilot Divorced: ಸಚಿನ್ ಪೈಲಟ್- ಸಾರಾ ಅಬ್ದುಲ್ಲಾ ವಿಚ್ಛೇದನ- ಸ್ಪೋಟಕ ಮಾಹಿತಿ ಬಹಿರಂಗ
ಜೈಪುರ, ಅಕ್ಟೋಬರ್ 01: ರಾಜಸ್ಥಾನ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದೆ. ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿದೆ. ರಾಜಸ್ಥಾನದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಕೆಲವು ಕುತೂಹಲಕರ ಸಂಗತಿಗಳು ಹೊರಬಿದ್ದಿವೆ.
ಕಾಂಗ್ರೆಸ್ ನಾಯಕ ಮತ್ತು ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ತಮ್ಮ ಪತ್ನಿ ಸಾರಾ ಅಬ್ದುಲ್ಲಾ ಅವರಿಂದ ವಿಚ್ಛೇದನ ಪಡೆದಿರುವುದು ನಾಮಪತ್ರದಲ್ಲಿ ಬಹಿರಂಗಪಡಿಸಿದ್ದಾರೆ.

ಇದರಲ್ಲಿ ನಿಖರವಾದ ವಿಚ್ಛೇದನದ ದಿನಾಂಕವನ್ನು ಬಹಿರಂಗಪಡಿಸಲಾಗಿಲ್ಲ. ಆದರೆ, ಇದರಿಂದ ಅವರ ವಿಚ್ಚೇದನದ ಕುರಿತು ಸಾರ್ವಜನಿಕವಾಗಿ ಮೊದಲ ಬಾರಿಗೆ ಬಹಿರಂಗವಾಗಿದೆ.
ಪೈಲಟ್ ಸಲ್ಲಿಸಿದ ಅಫಿಡವಿಟ್ನಲ್ಲಿ ತಮ್ಮ ಹೆಂಡತಿಯ ಹೆಸರಿನ ಜೊತೆಗೆ 'ವಿಚ್ಛೇದಿತ' ಎಂಬ ಪದವನ್ನು ವಿಶೇಷವಾಗಿ ಬಳಸಲಾಗಿದೆ.
ಸಚಿನ್-ಸಾರಾ ದಂಪತಿಗಳು ಜನವರಿ 15, 2004 ರಂದು ವಿವಾಹವಾದರು. ಸಾರಾ ಅವರು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರ ಮಗಳು. ಪಾರೂಕ್ ಅಬ್ದುಲ್ಲಾ ಅವರು ಈ ಸಂಬಂಧಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಈ ವಿವಾಹಕ್ಕೆ ಅಬ್ದುಲ್ಲಾ ಕುಟುಂಬದ ತೀವ್ರ ವಿರೋಧವಿತ್ತು.

ಸಚಿನ್- ಸಾರಾ ಮದುವೆಗೆ ಫಾರೂಕ್ ಅಬ್ದುಲ್ಲಾ ಹಾಜರಾಗಲಿಲ್ಲ. ಸಚಿನ್ ಅವರ ಕುಟುಂಬವು ಅಂತಿಮವಾಗಿ ಮದುವೆಯನ್ನು ಬೆಂಬಲಿಸಿತು ಎಂದು ತಿಳಿದುಬಂದಿದೆ.
ಸಚಿನ್ ಮತ್ತು ಸಾರಾ ಲಂಡನ್‌ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾದರು. ಸಚಿನ್ ಪೈಲಟ್ ಲಂಡನ್‌ನಲ್ಲಿ ಎಂಬಿಎ ಮಾಡುತ್ತಿದ್ದಾಗ ಸಾರಾ ಅವರನ್ನು ಭೇಟಿಯಾದರು. 1990 ರ ದಶಕದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿನ ಉದ್ವಿಗ್ನತೆಯಿಂದಾಗಿ ಸಾರಾ ಅಬ್ದುಲ್ಲಾ ಅವರನ್ನು ಆಕೆಯ ತಂದೆ ಯುಕೆಗೆ ಕಳುಹಿಸಿದ್ದರು.
ಸಚಿನ್ ಪೈಲಟ್ ಮಂಗಳವಾರ ಟೋಂಕ್ ಅಸೆಂಬ್ಲಿ ಸ್ಥಾನದಿಂದ ನಾಮಪತ್ರ ಸಲ್ಲಿಸಿದರು. ಅವರ ಚುನಾವಣಾ ಅಫಿಡವಿಟ್‌ನಲ್ಲಿ ಸಂಗಾತಿಯ ವಿವರಗಳಿಗಾಗಿ ಇರುವ ಕಾಲಂನಲ್ಲಿ 'ವಿಚ್ಛೇದನ' ಎಂದು ನಮೂದಿಸಿದ್ದಾರೆ.

ಸಚಿನ್ ಪೈಲಟ್ ಮತ್ತು ಸಾರಾ ಅಬ್ದುಲ್ಲಾ ವಿಚ್ಛೇದನ ದೃಢಪಟ್ಟಿರುವುದು ಇದೇ ಮೊದಲು. ದಂಪತಿಗಳ ವಿಚ್ಛೇದನದ ಬಗ್ಗೆ ಊಹಾಪೋಹಗಳು ಇದ್ದರೂ, ಇಬ್ಬರೂ ಈ ವಿಷಯದ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ.
ಈ ದಂಪತಿಗೆ ಆರಾನ್ ಮತ್ತು ವೆಹಾನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಕಾಂಗ್ರೆಸ್ ನಾಯಕರು ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ಇಬ್ಬರು ಪುತ್ರರನ್ನು 'ಅವಲಂಬಿತರು' ಎಂದು ಉಲ್ಲೇಖಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಪೈಲಟ್‌ರ ಸಂಪತ್ತಿನಲ್ಲಿ ಗಣನೀಯ ಏರಿಕೆಯಾಗಿದೆ ಎಂಬುದು ಅಫಿಡವಿಟ್‌ನಿಂದ ತಿಳಿದುಬಂದಿದೆ. 2018 ರಲ್ಲಿ ಅವರ ಒಟ್ಟು ಆಸ್ತಿಯನ್ನು ಅಂದಾಜು ₹3.8 ಕೋಟಿ ಎಂದು ಅಂದಾಜಿಸಲಾಗಿದೆ. ಇದು ಇತ್ತೀಚಿನ ಅಫಿಡವಿಟ್‌ನ ಪ್ರಕಾರ, 2023 ರ ವೇಳೆಗೆ ₹7.5 ಕೋಟಿಯಾಗಿರುವುದು ಬಹಿರಂಗಗೊಂಡಿದೆ.
ಪೈಲಟ್ 2018 ರ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯ ಯೂನುಸ್ ಖಾನ್ ವಿರುದ್ಧ ಟೋಂಕ್ ಕ್ಷೇತ್ರದಿಂದ ಸಚಿನ ಸ್ಪರ್ಧಿಸಿದ್ದರು. ಆಗ 54,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಮಂಗಳವಾರ ನಾಮಪತ್ರ ಸಲ್ಲಿಸುವ ಮುನ್ನ ಸಚಿನ್ ಪೈಲಟ್ ಅವರು ಭೂತೇಶ್ವರ ಮಹಾದೇವ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇದರ ನಂತರ, ಅವರು ತಮ್ಮ ಬೆಂಬಲಿಗರೊಂದಿಗೆ ಬಡಾ ಕುವಾನ್‌ನಿಂದ ಟೋಂಕ್ ಸಿಟಿಯ ಪಟೇಲ್ ಚೌಕ್‌ವರೆಗೆ ಮೆರವಣಿಗೆಯನ್ನು ನಡೆಸಿದರು. ಈ ಪ್ರದೇಶದಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದರು.
ಸಾರಾ ದೆಹಲಿಯ ಎನ್‌ಜಿಒ ವಲಯದಲ್ಲಿ ಉದ್ಯೋಗಿಯಾಗಿದ್ದಾರೆ ಎಂದು ವರದಿಯಾಗಿದೆ. ಆಕೆ ತಮ್ಮ ಬಾಲ್ಯವನ್ನು 12 ನೇ ವಯಸ್ಸಿನವರೆಗೆ ಕಾಶ್ಮೀರದಲ್ಲಿ ಕಳೆದರು ಎಂದು ಗೊತ್ತಾಗಿದೆ.
ಮುಂಬರುವ ರಾಜಸ್ಥಾನ ವಿಧಾನಸಭಾ ಚುನಾವಣೆಯು ನವೆಂಬರ್ 25 ರಂದು ನಡೆಯಲಿದ್ದು, ಫಲಿತಾಂಶವನ್ನು ಡಿಸೆಂಬರ್ 3 ರಂದು ಪ್ರಕಟಿಸಲಾಗುವುದು.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ












Click it and Unblock the Notifications