NTCA ಅನುಮೋದನೆ: 5ನೇ ಹುಲಿ ಸಂರಕ್ಷಿತ ಪ್ರದೇಶ ಸ್ವಾಧೀನಪಡಿಸಿಕೊಂಡ ರಾಜಸ್ಥಾನ

ನವದೆಹಲಿ, ಆಗಸ್ಟ್ 22: ಧೋಲ್ಪುರ್-ಕರೌಲಿ ಮೀಸಲು ಪ್ರದೇಶಕ್ಕೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು (NTCA) ಅಂತಿಮ ಅನುಮೋದನೆ ನೀಡಿದ್ದರಿಂದ ರಾಜಸ್ಥಾನವು ತನ್ನ 5ನೇ ಹುಲಿ ಸಂರಕ್ಷಿತ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಪರಿಸರ ಸಚಿವ ಭೂಪೇಂದ್ರ ಯಾದವ್ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾಹಿತಿಯನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಸಚಿವರು, ರಾಜಸ್ಥಾನ ರಾಜ್ಯವು ಮತ್ತೊಂದು ಹುಲಿ ಸಂರಕ್ಷಿತ ಪ್ರದೇಶ ಪಡೆದುಕೊಂಡಿದೆ. ರಾಜಸ್ಥಾನದ ವನ್ಯಜೀವಿ ಸಂರಕ್ಷಣೆಗಾಗಿ ಇದೊಂದು ಈ ವಿಚಾರದಿಂದ ಬೃಹತ್ ಮುನ್ನಡೆ ಸಾಧಿಸಿದಂತಾಗಿದೆ. ಧೋಲ್ಪುರ್-ಕರೌಲಿ ಹುಲಿ ಸಂರಕ್ಷಿತ ಪ್ರದೇಶಕ್ಕೆ NTCA ಅಂತಿಮ ಅನುಮೋದನೆ ನೀಡಿದೆ. ಈ ಬಹುಮುಖ್ಯ ಪರಿಸರ ವ್ಯವಸ್ಥೆ, ಹುಲಿ ಸಂಪತ್ತು ರಕ್ಷಿಸುವುದು ನಮ್ಮೆಲ್ಲ ಹೊಣೆಯಾಗಿದೆ ಎಂದು ತಿಳಿಸಿದ್ದಾರೆ.

Rajasthan Acquires 5th Tiger Reserve After NTCA Approves Dholpur-Karauli Reserve

ರಾಜಸ್ಥಾನದ ಕರೌಲಿ-ಸರ್ಮಥುರಾ-ಧೋಲ್ಪುರ್ ಅಭಯಾರಣ್ಯವನ್ನು ಅಧಿಕೃತವಾಗಿ ಧೋಲ್ಪುರ್-ಕರೌಲಿ ಟೈಗರ್ ರಿಸರ್ವ್ (ಡಿಟಿಆರ್) ಎಂದು ಗೊತ್ತುಪಡಿಸಲಾಗಿದೆ.

ಇನ್ನೂ ಈ ಹೊಸ ಹುಲಿ ಸಂರಕ್ಷಿತ ಪ್ರದೇಶವು 368 ಚದರ ಕಿಲೋಮೀಟರ್ ಕೋರ್ ಏರಿಯಾ ಹಾಗೂ 690 ಚದರ ಕಿಲೋಮೀಟರ್ ಬಫರ್ ಏರಿಯಾ ಒಳಗೊಂಡಂತೆ ಒಟ್ಟು 1,058 ಚದರ ಕಿಲೋಮೀಟರ್ ವ್ಯಾಪಿಸಿದೆ. ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾದ ಅರಣ್ಯ ಪ್ರದೇಶಗಳಲ್ಲಿ ಪ್ರಸ್ತುತ ಒಂಬತ್ತು ಹುಲಿಗಳಿವೆ ಎಂದು ಎಎನ್‌ಐ ವರದಿ ಮಾಡಿದೆ.

ರಾಜಸ್ಥಾನ ಹುಲಿ ಸಂರಕ್ಷಿತ ಪ್ರದೇಶಗಳ ವಿವರ

ಇಲ್ಲಿಯವರೆಗೆ ರಾಜಸ್ಥಾನದಲ್ಲಿ ''ರಾಮಗಢ ವಿಶ್ಧಾರಿ ಹುಲಿ ಸಂರಕ್ಷಿತ ಪ್ರದೇಶ, ಮುಕಂದ್ರ ಹಿಲ್ಸ್ ಹುಲಿ ಸಂರಕ್ಷಿತ ಪ್ರದೇಶ, ರಣಥಂಬೋರ್ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶ'' ಎಂದು ಒಟ್ಟು ನಾಲ್ಕು ಹುಲಿ ಸಂರಕ್ಷಿತ ಪ್ರದೇಶಗಳಿದ್ದವು. ಅದಕ್ಕೀಗ ಐದನೇ ಹುಲಿ ಸಂರಕ್ಷಿತಾರಣ್ಯ ಪ್ರದೇಶ ಸೇರ್ಪಡೆಗೊಂಡಿದೆ.

Rajasthan Acquires 5th Tiger Reserve After NTCA Approves Dholpur-Karauli Reserve

ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಕೋರ್ ಪ್ರದೇಶವನ್ನು ಕಾನೂನುಬದ್ಧವಾಗಿ ರಾಷ್ಟ್ರೀಯ ಉದ್ಯಾನವನ ಅಥವಾ ಅಭಯಾರಣ್ಯ ಎಂದು ಗೊತ್ತುಪಡಿಸಲಾಗಿದೆ. ಇನ್ನೂ ಬಫರ್ ಅಥವಾ ಬಾಹ್ಯ ಪ್ರದೇಶಗಳು ಅರಣ್ಯ ಮತ್ತು ಅರಣ್ಯೇತರ ಭೂಮಿಯ ಮಿಶ್ರಣ ಇದಾಗಿದೆ. ಇದುವರೆಗೆ ಭಾರತದಲ್ಲಿ ಒಟ್ಟು 53 ಹುಲಿ ಸಂರಕ್ಷಿತ ಪ್ರದೇಶಗಳಿದ್ದು, ಇದು ಸೇರಿ ಈ ಸಂಖ್ಯೆ 54ಕ್ಕೆ ಏರಿಕೆ ಆಯಿತು.

ಹುಲಿಗಳ ಸಂಖ್ಯೆ 3,167 ಕ್ಕೆ ಏರಿಕೆ

ಭಾರತ ಸರ್ಕಾರವು 1973 ರಲ್ಲಿ "ಪ್ರಾಜೆಕ್ಟ್ ಟೈಗರ್" ಅನ್ನು ಪರಿಚಯಿಸಿತು. ಅಲ್ಲಿಂದ ರಾಷ್ಟ್ರೀಯ ಪ್ರಾಣಿಯಾದ ಹುಲಿಯ ಸಂರಕ್ಷಣೆ ಕಾರ್ಯ ಆರಂಭವಾಯಿತು. ಪ್ರಾಜೆಕ್ಟ್ ಟೈಗರ್ ತನ್ನ ವ್ಯಾಪ್ತಿಯನ್ನು 53 ಹುಲಿ ಸಂರಕ್ಷಿತ ಪ್ರದೇಶಗಳಿಗೆ ವಿಸ್ತರಿಸಿದೆ ಮತ್ತು ನಮ್ಮ ಹುಲಿ ಶ್ರೇಣಿಯ 18 ರಾಜ್ಯಗಳಲ್ಲಿ ಒಟ್ಟು 75,796.83 ಚದರ ಕಿ.ಮೀ ಇದೆ. ಇನ್ನು ದೇಶದಲ್ಲಿ ಇತ್ತೀಚಿನ ಮಾಹಿತಿ ಪ್ರಕಾರ ಹುಲಿಗಳ ಕನಿಷ್ಠ ಸಂಖ್ಯೆ 3,167 ಕ್ಕೆ ಏರಿಕೆ ಆಗಿದೆ ಎಂದು ವರದಿ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+