Vande Bharat express: ಇನ್ನೂ ಎರಡು ರೀತಿಯ ವೇಗದ ರೈಲುಗಳನ್ನು ಪರಿಚಯಿಸಲಿದೆ ರೈಲ್ವೆ, ವಿವರಗಳು

ಇಂಟ್ರಾಸಿಟಿ ಮತ್ತು ಇಂಟರ್‌ಸಿಟಿ ಪ್ರಯಾಣಿಕರ ಅಗತ್ಯವನ್ನು ಪೂರೈಸಲು ರೈಲ್ವೇ ಈ ಎರಡು ರೀತಿಯ ವಂದೇ ಭಾರತ್ ರೈಲುಗಳನ್ನು ಪರಿಚಯಿಸಲಿದೆ.

ನವದೆಹಲಿ, ಫೆಬ್ರವರಿ. 09: ದೇಶದ ರೈಲ್ವೇ ವಲಯದಲ್ಲಿ ವಂದೇ ಭಾರತ್ ರೈಲುಗಳ ಅದ್ಭುತ ಯಶಸ್ಸಿನ ನಂತರ, ಈಗ ಮತ್ತೆ ಹೊಸ ಯೋಜನೆಗಳತ್ತ ರೈಲ್ವೆ ಇಲಾಖೆ ಕನ್ಣು ಹರಿಸಿದ್ದು, ಹೊಸ ರೀತಿಯ ಎರಡು ರೈಲುಗಳನ್ನು ಸಿದ್ಧಪಡಿಸುತ್ತಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಇನ್ನೂ ಎರಡು ರೀತಿಯ ರೈಲುಗಳನ್ನು ಭಾರತೀಯ ರೈಲ್ವೇ ಪರಿಸಿಸಲಿದೆ. ಇಂಟ್ರಾಸಿಟಿ ಮತ್ತು ಇಂಟರ್‌ಸಿಟಿ ಪ್ರಯಾಣಿಕರ ಅಗತ್ಯವನ್ನು ಪೂರೈಸಲು ರೈಲ್ವೇ ಈ ಎರಡು ರೀತಿಯ ವಂದೇ ಭಾರತ್ ರೈಲುಗಳನ್ನು ಪರಿಚಯಿಸಲಿದೆ.

ವಂದೇ ರಾಪಿಡ್ ಮೆಟ್ರೋ ಮತ್ತು ವಂದೇ ಮೆಟ್ರೋ ಪ್ರಾದೇಶಿಕ ರೈಲುಗಳು ಎಂಬ ಎರಡು ಮಾದರಿಯ ರೈಲುಗಳು ಸಾರ್ವಜನಿಕರಿಗೆ ಸೇವೆ ಒದಗಿಸಲಿದೆ ಎಂದು ರೈಲ್ವೇ ಸಚಿವಾಲಯ ಘೋಷಿಸಿದೆ.

Railways to introduce two types of Vande Bharat train

ವಂದೇ ರಾಪಿಡ್ ಮೆಟ್ರೋ ತಲಾ ಎಂಟು ಕೋಚ್‌ಗಳನ್ನು ಹೊಂದಿದ್ದು, ಮುಂಬೈ ಸ್ಥಳೀಯ ಸೇವೆಯ ಮಾರ್ಗಗಳಲ್ಲಿ ನಗರ ಪ್ರಯಾಣಿಕರಿಗಾಗಿ (ಇಂಟ್ರಾಸಿಟಿ) ಕಾರ್ಯನಿರ್ವಹಿಸಲಿದೆ. ಇನ್ನು, ವಂದೇ ಮೆಟ್ರೋ ಪ್ರಾದೇಶಿಕ ರೈಲುಗಳು ತಲಾ 12 ಕೋಚ್‌ಗಳನ್ನು ಹೊಂದಿದ್ದು, ನಗರಗಳ ನಡುವೆ ವೇಗದ ಪ್ರಯಾಣಕ್ಕಾಗಿ ಜನರ ಸೇವೆಗೆ ನಿಯೋಜಿಸಲಾಗುತ್ತದೆ.

ವಂದೇ ರಾಪಿಡ್ ಮೆಟ್ರೋ ಸೆಮಿ-ಹೈ-ಸ್ಪೀಡ್‌ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮಿನಿ ಆವೃತ್ತಿ ಎಂದು ಪರಿಗಣಿಸಲಾಗಿದೆ. ಈ ರೈಲುಗಳು ಸಂಪೂರ್ಣ ಹವಾನಿಯಂತ್ರಿತವಾಗಿರುತ್ತವೆ. ಎರಡೂ ಸೇವೆಗಳ ಸಂಚಾರ ಜನ ದಟ್ಟಣೆಯ ಮೇಲೆ ಅವಲಂಬಿಸಿರುತ್ತದೆ.

ಇತ್ತೀಚೆಗೆ, ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಎರಡು ನಗರಗಳ ನಡುವೆ 100 ಕಿಮೀ ವ್ಯಾಪ್ತಿಯಲ್ಲಿ ವಂದೇ ಮೆಟ್ರೋ ಶಟಲ್ ಮಾದರಿಯ ರೈಲುಗಳನ್ನು ಪರಿಚಯಿಸಲಾಗುವುದು. ಇದು ಯುರೋಪಿಯನ್ ಮಾದರಿಯಲ್ಲಿ ಪ್ರತಿ 30 ರಿಂದ 45 ನಿಮಿಷಗಳವರೆಗೆ ಚಲಿಸುತ್ತದೆ. ಈ ವರ್ಷದ ಡಿಸೆಂಬರ್‌ ವೇಳೆಗೆ ಈ ಹೊಸ ಮೆಟ್ರೋ ರೈಲಿನ ಉತ್ಪಾದನೆ ಮತ್ತು ವಿನ್ಯಾಸವನ್ನು ಪೂರ್ಣಗೊಳಿಸಲಾಗುವುದು ಎಂದು ಬಜೆಟ್ ನಂತರ ರೈಲ್ವೆ ಸಚಿವ ಅಶಿವಿನಿ ವೈಷ್ಣವ್ ಘೋಷಿಸಿದ್ದರು.

Railways to introduce two types of Vande Bharat train

ಎರಡೂ ರೀತಿಯ ವಂದೇ ಮೆಟ್ರೋ ವಿನ್ಯಾಸದ ವಿಶೇಷಣಗಳನ್ನು ರಿಸರ್ಚ್ ಡಿಸೈನ್ ಮತ್ತು ಸ್ಟ್ಯಾಂಡರ್ಡ್ ಆರ್ಗನೈಸೇಶನ್ ಅಂತಿಮಗೊಳಿಸುತ್ತಿದ್ದು, ಜೂನ್ ಅಥವಾ ಜುಲೈ ವೇಳೆಗೆ ಮೂಲಮಾದರಿಯು ಸಿದ್ಧವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಈ ರೈಲುಗಳನ್ನು ಚೆನ್ನೈ, ಕಪುರ್ತಲಾ ಮತ್ತು ರಾಯ್ಬರೇಲಿಯ ಮೂರು ರೈಲ್ವೆ ಉತ್ಪಾದನಾ ಘಟಕಗಳಲ್ಲಿ ತಯಾರಿಸಲಾಗುವುದು. ಈ ರೈಲುಗಳಲ್ಲಿ ಆಸನ ವ್ಯವಸ್ಥೆಗಳ ಜೊತೆಗೆ ಜನರು ನಿಂತು ಕೊಂಡು ಪ್ರಯಾಣ ಮಾಡಲು ಸ್ಥಳಾವಕಾಶವೂ ಇರುತ್ತದೆ.

ವಂದೇ ಮೆಟ್ರೋ ರಾಪಿಡ್‌ನ ವೇಗ ಗಂಟೆಗೆ 90 ಕಿ.ಮೀ ಆಗಿದ್ದರೆ, ವಂದೇ ಮೆಟ್ರೋ ರೀಜನಲ್ ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ಮೊದಲ ಹಂತದಲ್ಲಿ ಸುಮಾರು 600 ವಂದೇ ಮೆಟ್ರೋ ಕೋಚ್‌ಗಳನ್ನು ಉತ್ಪಾದಿಸಲು ರಾಷ್ಟ್ರೀಯ ಸಾರಿಗೆ ಸಂಸ್ಥೆ ಯೋಜಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು, ಏಪ್ರಿಲ್‌ನಿಂದ ಆರಂಭವಾಗಲಿದೆ ಎಂದು ನಿರೀಕ್ಷಿಸಿರುವ ಬೆಂಗಳೂರು- ಹುಬ್ಬಳ್ಳಿ- ಧಾರವಾಡ ವಮದೇ ಭಾರತ್ ಕೂಡ ಮಿನಿ ವಂದೇ ಭಾರತ್ ರೈಲಿನ ಪರಿಕಲ್ಪನೆಯಲ್ಲಿದೆ. ಅಂದರೆ, ದೂರದ ನಗರದಗಳನ್ನು ಸಂಪರ್ಕಿಸುವ ವಂದೇ ಭಾರತ್ ರೈಲುಗಳಿಗೆ 16 ಕೋಚ್ ಇದ್ದರೇ, ಕಡಿಮೆ ದೂರವಿರುವ ನಗರಗಳನ್ನು ಸಂಪರ್ಕಿಸುವ ರೈಲಿಗೆ 8 ಕೋಚ್‌ಗಳನ್ನು ಅಳವಡಿಕೆ ಮಾಡಲಾಗುತ್ತದೆ. ಬೆಂಗಳೂರು‌-ಹುಬ್ಬಳ್ಳಿ-ಧಾರವಾಡ ನಡುವೆ ಸಂಚಾರ ನಡೆಸುವ ರೈಲಿಗೆ 8 ಬೋಗಿ ಅಳವಡಿಸಲಾಗುತ್ತದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+