ಅಮೃತ್ ಭಾರತ್ ರೈಲಿನ ವಿಡಿಯೋ ಹಂಚಿಕೊಂಡ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ನವದೆಹಲಿ, ಡಿಸೆಂಬರ್‌ 26: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ನವದೆಹಲಿ ರೈಲು ನಿಲ್ದಾಣದಲ್ಲಿ ಶೀಘ್ರದಲ್ಲೇ ಪ್ರಾರಂಭಿಸಲಿರುವ ಅಮೃತ್ ಭಾರತ್ ರೈಲನ್ನು ಪರಿಶೀಲಿಸುವ ವೀಡಿಯೊವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಎಸಿ ಅಲ್ಲದ ವಿಭಾಗದಲ್ಲಿ ಪ್ರಯಾಣಿಕರ ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ಈ ರೈಲನ್ನು ವಿನ್ಯಾಸಗೊಳಿಸಲಾಗಿದೆ. ಇದು ಪುಷ್-ಪುಲ್ ತಂತ್ರಜ್ಞಾನ, ವಿಶಾಲವಾದ ಬಾಗಿಲುಗಳು ಮತ್ತು ಅಂಗವಿಕಲ ಪ್ರಯಾಣಿಕರ ಅಗತ್ಯತೆಗಳನ್ನು ಪೂರೈಸಲು ಇಳಿಜಾರುಗಳನ್ನು ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲೇ ರೈಲಿಗೆ ಚಾಲನೆ ನೀಡುವ ನಿರೀಕ್ಷೆಯಿದೆ.

Railway Minister Ashwini Vaishnav shared the video of Amrit Bharat train

"ಅಮೃತ್ ಕಲ್ ಕಿ ಅಮೃತ್ ಭಾರತ್ ರೈಲು" ಎಂದು ಎಕ್ಸ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರ ಮುಂದುವರಿದ ತಂತ್ರಜ್ಞಾನ ಮತ್ತು ಸುಧಾರಿತ ವೇಗವರ್ಧನೆಯಿಂದಾಗಿ ರೈಲು ದೀರ್ಘ ಮಾರ್ಗಗಳಲ್ಲಿ ಕನಿಷ್ಠ ಎರಡು ಗಂಟೆಗಳನ್ನು ಉಳಿಸುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ರೈಲು ಚಾಲಕನ ಕ್ಯಾಬಿನ್ ಅನ್ನು ಪರಿಶೀಲಿಸಿದ ಅವರು, ನಂತರ ರಾಂಪ್ ಬಳಸಿ ರೈಲಿನ ಕೋಚ್ ಅನ್ನು ಪ್ರವೇಶಿಸಿದರು. ರೈಲಿನಲ್ಲಿ ಲಭ್ಯವಿರುವ ಆಸನಗಳು, ಶೌಚಾಲಯಗಳು ಮತ್ತು ಇತರ ಸೌಲಭ್ಯಗಳನ್ನು ಪರಿಶೀಲಿಸಿದರು. ರೈಲಿನ ಪ್ರಾಯೋಗಿಕ ಓಡಾಟವು ತೃಪ್ತಿಕರವಾಗಿದೆ ಎಂದು ಅವರು ಹೇಳಿದ್ದಾರೆ.

ಡಿಸೆಂಬರ್ 26 ರಂದು ಹಂಚಿಕೊಂಡ ನಂತರ, ವೀಡಿಯೊ ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹೆಚ್ಚುವರಿಯಾಗಿ, ಹಂಚಿಕೆಯು 13,000 ಕ್ಕೂ ಹೆಚ್ಚು ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ಸಂಗ್ರಹಿಸಿದೆ.

ವೀಡಿಯೊಗೆ ಜನರು ಪ್ರತಿಕ್ರಿಯೆ:

"ಅದ್ಭುತ, ಸಂಪೂರ್ಣವಾಗಿ ಅದ್ಭುತ" ಎಂದು ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದಾರೆ. ಮತ್ತೊಬ್ಬರು, "ಅದ್ಭುತ" ಎಂದು ಕಾಮೆಂಟ್ ಮಾಡಿದ್ದಾರೆ. "ಮೋದಿ ಜಿ ಮತ್ತು ಅವರ ಮಂತ್ರಿಗಳ ಸಮರ್ಥ ನಾಯಕತ್ವದಲ್ಲಿ ಭಾರತವು ಹೊಸ ದಿಗಂತಗಳನ್ನು ನೋಡುತ್ತಿದೆ" ಎಂದು ಮೂರನೆಯವರು ತಿಳಿಸಿದ್ದಾರೆ.

ನಾಲ್ಕನೆಯವರು "ಅದ್ಭುತ. ಅತ್ಯುತ್ತಮ" ಎಂದು ಬರೆದಿದ್ದಾರೆ. "ರೈಲ್ವೆಯಲ್ಲಿ ಅದ್ಭುತ ಬದಲಾವಣೆಗಳನ್ನು ಕಾಣಬಹುದು. ಇಡೀ ತಂಡಕ್ಕೆ ಅಭಿನಂದನೆಗಳು, ಸರ್, " ಎಂದು ಮತ್ತೊಬ್ಬರು ತಿಳಿಸಿದ್ದಾರೆ. ಆರನೆಯವರು "ಅತ್ಯುತ್ತಮ ಕೆಲಸ. ಗ್ರೇಟ್‌ ಮಿನಿಸ್ಟರ್‌" ಎಂದು ಹೊಗಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+