ಎಕ್ಸ್‌ಪ್ರೆಸ್ ವೇಗಳ ಜೊತೆ ರೈಲು ಮಾರ್ಗ; ಕೇಂದ್ರ ಹೊಸ ಚಿಂತನೆ

ನವದೆಹಲಿ, ಅಕ್ಟೋಬರ್ 25 : ಕೇಂದ್ರ ಸರ್ಕಾರ ಎಕ್ಸ್‌ಪ್ರೆಸ್ ಹೆದ್ದಾರಿಗಳ ಪಕ್ಕದಲ್ಲಿಯೇ ರೈಲು ಮಾರ್ಗವನ್ನು ನಿರ್ಮಾಣ ಮಾಡಲು ಚಿಂತನೆ ನಡೆಸಿದೆ. ಈ ಮೂಲಕ ಸಾರಿಗೆ ಸಂಪರ್ಕವನ್ನು ಮತ್ತಷ್ಟು ಸುಲಭವಾಗಿಲು ಯೋಜನೆ ರೂಪಿಸುತ್ತಿದೆ.

ರೈಲ್ವೆ ಮತ್ತು ರಸ್ತೆ ಹಾಗೂ ಹೆದ್ದಾರಿ ಸಚಿವಾಲಯದ ಅಧಿಕಾರಿಗಳು ಈ ಕುರಿತು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. 'ಗ್ರೀನ್ ಫೀಲ್ಡ್' ಎಕ್ಸ್‌ಪ್ರೆಸ್ ಹೆಸರಿನಲ್ಲಿ ಈ ಮಾರ್ಗವನ್ನು ನಿರ್ಮಿಸಲಾಗುತ್ತಿದೆ.

ದೇಶದಲ್ಲಿ ನಿರ್ಮಾಣಗೊಳ್ಳುವ 5 ರಿಂದ 6 ಹೊಸ ಕಾರಿಡಾರ್‌ಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲು ಚಿಂತಿಸಲಾಗಿದೆ. ಇವುಗಳಲ್ಲಿ ದೆಹಲಿ-ಅಮೃತಸರ-ಕಾತ್ರಾ ಮತ್ತು ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಗಳು ಸೇರಿವೆ.

Railway Line Will Come Up With Expressways Highways

ರೈಲ್ವೆ ಇಲಾಖೆ ಈ ಯೋಜನೆಯನ್ನು ಹೇಗೆ ಜಾರಿಗೊಳಿಸಬಹುದು ಎಂದು ವಿವರವಾದ ವರದಿ ತಯಾರು ಮಾಡಲಿದೆ. ಇಂತಹ ಯೋಜನೆ ಜಾರಿಗೊಳಿಸಿದರೆ ಸರ್ಕಾರ ಭೂ ಸ್ವಾಧೀನಕ್ಕೆ ಖರ್ಚು ಮಾಡಲು ಹಣ ಉಳಿತಾಯವಾಗಲಿದೆ.

ಈ ಯೋಜನೆಗೆ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ಒಪ್ಪಿಗೆ ನೀಡಿದೆ. ರೈಲ್ವೆ ಇಲಾಖೆ ಇಂತಹ ಯೋಜನೆ ಜಾರಿಗೊಳಿಸಲು ಅಗತ್ಯವಿರುವ ಸೌಲಭ್ಯಗಳ ಬಗ್ಗೆ ವರದಿ ತಯಾರು ಮಾಡಲಿದೆ. ದೆಹಲಿ-ಅಮೃತಸರ-ಕಾತ್ರಾ ಎಕ್ಸ್‌ಪ್ರೆಸ್ ಹೆದ್ದಾರಿಗೆ ರೈಲ್ವೆ ಇಲಾಖೆ ಈಗಾಗಲೇ ಒಪ್ಪಿಗೆ ನೀಡಿದೆ.

25,000 ಕೋಟಿ ಮೊತ್ತದ ಬೃಹತ್ ಯೋಜನೆ ಇದಾಗಿದೆ. ಈ ಯೋಜನೆ ಪೂರ್ಣಗೊಂಡರೆ ರಾಜಧಾನಿಯಿಂದ ಅಮೃತಸರ ನಡುವಿನ ಸಂಚಾರದ ಅವಧಿ ಮತ್ತಷ್ಟು ಕಡಿಮೆಯಾಗಲಿದೆ. ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಸಹಾಯಕವಾಗಲಿದೆ.

2025ರ ವೇಳೆಗೆ ಕೇಂದ್ರ ಸರ್ಕಾರ ಕಾನ್ಪುರ-ಲಕ್ನೋ, ಅಮೃತಸರ-ಜಾಮಾನಗರ, ಹೈದರಾಬಾದ್-ರಾಯ್‌ಪುರ, ನಾಗ್ಪುರ-ವಿಜಯವಾಡ ನಡುವೆ ಎಕ್ಸ್‌ಪ್ರೆಸ್ ವೇ ನಿರ್ಮಾಣ ಮಾಡಲು ಮುಂದಾಗಿದ್ದು, ಇಲ್ಲೂ ಸಹ ರೈಲು ಮಾರ್ಗ ನಿರ್ಮಾಣಗೊಳ್ಳುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+