ರಾಹುಲ್ ಹೇಳಿದ ದಾಖಲೆಗಳು, ಅವೆಲ್ಲ ನಂಬಲ್ಲ ಎಂದಿರುವ ಸುಪ್ರೀಂ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಡಿಸೆಂಬರ್ 22: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಹಾರ ಹಾಗೂ ಬಿರ್ಲಾ ಸಮೂಹದಿಂದ ಹಣ ಪಡೆದಿದ್ದರು ಎಂಬುದು ರಾಹುಲ್ ಆರೋಪ.

ರಾಹುಲ್ ಈಗ ಪ್ರಸ್ತಾವ ಮಾಡುತ್ತಿರುವುದು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿದ್ದ ದಾಖಲೆಗಳನ್ನು. ಅವುಗಳನ್ನು ಈಗಾಗಲೇ ಸುಪ್ರೀಂ ಕೋರ್ಟ್ 'ನಂಬಲರ್ಹವಲ್ಲ' ಎಂದು ಹೇಳಿಯಾಗಿದೆ. ಈ ಹಿಂದೆ ಮೋದಿ ಹಾಗೂ ಇತರ ರಾಜಕಾರಣಿಗಳು ಕಾರ್ಪೋರೇಟ್ ಕಂಪನಿಗಳಿಂದ ಹಣ ಪಡೆದಿದ್ದಾರೆ ಎಂದು ಆರೋಪಿಸಿ ವಕೀಲ ಪ್ರಶಾಂತ್ ಭೂಷಣ್ ಕೊರ್ಟ್ ಗೆ ಅರ್ಜಿ ಸಲ್ಲಿಸಿದ್ದರು.[ಮೋದಿಗೆ ಸಹಾರಾದಿಂದ 40 ಕೋಟಿ ಲಂಚ : ರಾಹುಲ್ ಆರೋಪ]

ನವೆಂಬರ್ 25ರಂದು ಇದರ ವಿಚಾರಣೆ ಕೈಗೆತ್ತಿಕೊಂಡ ನ್ಯಾ.ಜೆ.ಎಸ್.ಖೇಹರ್ ಹಾಗೂ ಅರುಣ್ ಮಿಶ್ರಾ ಅವರಿದ್ದ ಪೀಠವು, ಈ ದಾಖಲೆಗಳು ನಂಬಲು ಸಾಕಾಗುವಷ್ಟಿಲ್ಲ ಎಂದಿದ್ದರು. ಈ ಪೀಠವು ಅರ್ಜಿದಾರರ ಬಳಿ ಇನ್ನಷ್ಟು ವಿಶ್ವಾಸಾರ್ಹ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿತ್ತು. ಸಹಾರದವರ ದಾಖಲೆಗಳನ್ನು ಹೇಗೆ ನಂಬಲು ಸಾಧ್ಯ? ಅವರ ದಾಖಲೆಗಳು ಯಾವತ್ತೂ ಸಾಚಾ ಆಗಿಲ್ಲ ಎಂದು ಪೀಠ ಹೇಳಿದೆ.

Rahul's Modi jibe: These documents are 'zero,' SC had said

ಸಹಾರ ದಾಖಲೆಗಳನ್ನು ಉಲ್ಲೇಖ ಮಾಡಿದ್ದ ಅರ್ಜಿದಾರರು, ಅಕ್ಟೋಬರ್ ಮತ್ತು ನವೆಂಬರ್ 2013ರಲ್ಲಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ದೊಡ್ಡ ಮೊತ್ತದ ಹಣ ಪಡೆದಿದ್ದಾರೆ ಎಂದು ಹೇಳಿದ್ದರು. ಯಾವುದೇ ಭ್ರಷ್ಟ ವ್ಯಕ್ತಿ ಪ್ರಧಾನಿ ಹೆಸರನ್ನು ಉಲ್ಲೇಖ ಮಾಡಿದ್ದಾನೆ ಅಂದರೆ ಅದನ್ನು ವಿಶ್ವಾಸಾರ್ಹ ಸಾಕ್ಷ್ಯ ಎಂದು ಪರಿಗಣಿಸುವುದಕ್ಕೆ ಸಾಧ್ಯವೇ ಎಂದು ಕೋರ್ಟ್ ಪ್ರಶ್ನಿಸಿತ್ತು.[ಭ್ರಷ್ಟಾಚಾರದಲ್ಲಿ ಸ್ವತಃ ಪ್ರಧಾನಿ ಭಾಗಿ, ನನ್ನ ಹತ್ರ ಸಾಕ್ಷ್ಯ ಇದೆ: ರಾಹುಲ್]

ನಮ್ಮ ಮುಂದೆ ನಂಬಬಹುದಾದ ಸಾಕ್ಷ್ಯ ತನ್ನಿ. ಬಿರ್ಲಾ, ಸಹಾರ ಅವರ ಬಳಿ ವಶಪಡಿಸಿಕೊಂಡ ದಾಖಲೆಗಳು ಏನೇನೂ ಅಲ್ಲ. ಜತೆಗೆ ಸಾಕ್ಷ್ಯ ನೀಡುವುದಕ್ಕೆ ಅರ್ಜಿದಾರರಿಗೆ ಕಾಲಾವಕಾಶ ಕೂಡ ನೀಡಿದೆ. ಡಿಸೆಂಬರ್ 16ಕ್ಕೆ ವಿಚಾರಣೆಗೆ ಬಂದಿದ್ದ ಪ್ರಕರಣವನ್ನು ಜನವರಿ 11ಕ್ಕೆ ಮುಂದೂಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rahul Gandhi was referring to documents that were seized by the Income Tax department which the Supreme Court had on an earlier occasion had termed "not authentic."
Please Wait while comments are loading...