ಮೋದಿಯದ್ದು 'ಸ್ಕಿಲ್ ಇಂಡಿಯಾ' ಅಲ್ಲ 'ಕಿಲ್ ಇಂಡಿಯಾ': ರಾಹುಲ್ ಕುಟುಕು

Recommended Video

      ನರೇಂದ್ರ ಮೋದಿಯನ್ನು ಕಟುವಾಗಿ ಟೀಕಿಸಿದ ರಾಹುಲ್ ಗಾಂಧಿ | Oneindia Kannada

      ನವದೆಹಲಿ, ಸೆಪ್ಟೆಂಬರ್ 26: ನರೇಂದ್ರ ಮೋದಿ ಅವರದ್ದು 'ಸ್ಕಿಲ್ ಇಂಡಿಯಾ' ಅಲ್ಲ 'ಕಿಲ್ ಇಂಡಿಯಾ' ಎಂದು ರಾಹುಲ್ ಗಾಂಧಿ ಕಟುವಾಗಿ ಮೋದಿ ಅವರ ನೀತಿಯನ್ನು ಟೀಕಿಸಿದ್ದಾರೆ.

      ಈ ಕುರಿತು ಟ್ವೀಟ್ ಮಾಡಿರುವ ಅವರು, ಮೋದಿ ಅವರು, 30000 ಕೋಟಿಯನ್ನು ಎಚ್‌ಎಎಲ್‌ನಿಂದ ಕದ್ದು ಅದನ್ನು ವಿಮಾನ ನಿರ್ಮಾಣದ ಕೌಶಲ್ಯವೇ ಇಲ್ಲದ ಅನಿಲ್ ಅಂಬಾನಿಗೆ ನೀಡಿದ್ದಾರೆ ಎಂದು ಅವರು ದೂರಿದ್ದಾರೆ.

      Rahul Gandhi tweet war against BJP

      ದೇಶದ ಕೋಟ್ಯಂತರ ಕೌಶಲ್ಯಭರಿತ ಯುವಜನರು ಕಳೆದ 20 ವರ್ಷಗಳಲ್ಲೇ ಕಂಡಿರದಿದ್ದ ನಿರೋದ್ಯೋಗವನ್ನು ಈ ಅವಧಿಯಲ್ಲಿ ಕಾಣುತಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

      ಭಾರತವು ಕಳೆದ 20 ವರ್ಷದಲ್ಲೇ ಕಂಡಿರದ ನಿರುದ್ಯೋಗವನ್ನು ಈ ಅವಧಿಯಲ್ಲಿ ಕಂಡಿದೆ ಎಂಬ ವರದಿಯೊಂದನ್ನು ಸಹ ರಾಹುಲ್ ಗಾಂಧಿ ಅವರು ತಮ್ಮ ಟ್ವೀಟ್‌ಗೆ ಅಂಟಿಸಿದ್ದಾರೆ.

      ರಫೆಲ್‌ ಹಗರಣದ ಬಗ್ಗೆ ಕಾಂಗ್ರೆಸ್ ತನ್ನ ಹೋರಾಟ ತೀವ್ರಗೊಳಿಸಿದ್ದು, ರಾಹುಲ್ ಗಾಂಧಿ ಅವರು ಹೋರಾಟದ ಮುಂದಾಳತ್ವ ವಹಿಸಿದ್ದಾರೆ. ರಫೆಲ್‌ ಹಗರಣದ ನೆರಳಲ್ಲಿ ಕೇಂದ್ರವನ್ನು ಕಟ್ಟಿಹಾಕಲು ಕಾಂಗ್ರೆಸ್ ಸರ್ವ ಪ್ರಯತ್ನಗಳನ್ನೂ ಮಾಡುತ್ತಿದೆ. ಮತ್ತು ನಿಧಾನ ಗತಿಯ ಯಶಸ್ಸನ್ನೂ ಕಾಣುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+