ಸರ್‌ Zero ನೋಡಿ ಎಂದು ರಾಹುಲ್‌ ಗಾಂಧಿಗೆ ಟ್ರೋಲ್!

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಮೋಘ ಗೆಲುವು ಸಾಧಿಸುತ್ತಿದ್ದಂತೆಯೇ ಬಿಜೆಪಿ ವಿರೋಧ ಪಕ್ಷಗಳನ್ನು ಟೀಕಿಸುವುದಕ್ಕೆ ಶುರು ಮಾಡಿಕೊಂಡಿದೆ. ಬಿಜೆಪಿ ದೆಹಲಿಯಲ್ಲಿ ಬರೋಬ್ಬರಿ 27 ವರ್ಷಗಳ ನಂತರ ಅಧಿಕಾರಕ್ಕೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ವಿಜಯೋತ್ಸವ ಭಾಷಣ ಮಾಡಿದ್ದು.

ದೆಹಲಿಯಲ್ಲಿ ಡಬಲ್‌ ಎಂಜಿನ್‌ ಸರ್ಕಾರ ಅಧಿಕಾರಕ್ಕೆ ಬಂದಿದೆ ಮುಂದಿನ ದಿನಗಳಲ್ಲಿ ನಾವು ಅತ್ಯುತ್ತಮ ಆಡಳಿತ ನೀಡಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಇನ್ನು ಈ ಕಡೆ ಬಿಜೆಪಿ ಹಾಗೂ ಕೆಲವು ಟ್ರೋಲ್‌ ಪೇಜ್‌ಗಳು ಎಎಪಿ ಹಾಗೂ ಕಾಂಗ್ರೆಸ್‌ ಪಕ್ಷವನ್ನು ಟ್ರೋಲ್ ಮಾಡುವುದಕ್ಕೆ ಶುರು ಮಾಡಿಕೊಂಡಿವೆ. ಅದರಲ್ಲೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ಅರವಿಂದ್‌ ಕೇಜ್ರಿವಾಲ್ ಅವರನ್ನು ಹೆಚ್ಚು ಟ್ರೋಲ್ ಮಾಡಲಾಗಿದೆ.

Rahul Gandhi Trolled for Saying Sir look at Zero

ಟ್ರೋಲ್ ಸುರಿಮಳೆ ಸುರಿಸಿದ ಬಿಜೆಪಿ: ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕ ಬಿಜೆಪಿ, ದೆಹಲಿ ಹಾಗೂ ತೆಲಂಗಾಣ ಸೇರಿದಂತೆ ವಿವಿಧ ಬಿಜೆಪಿ ಘಟಕಗಳು ರಾಹುಲ್‌ ಗಾಂಧಿ ಅವರನ್ನು ಟ್ರೋಲ್ ಮಾಡಿವೆ. ಕರ್ನಾಟಕ ಬಿಜೆಪಿಯ ಟ್ರೋಲ್‌ಗಳು ವೈರಲ್‌ ಆಗುತ್ತಿವೆ. ಕರ್ನಾಟಕ ಬಿಜೆಪಿಯು ಮುಂದಿನ ಬಾರಿ ಪೆಟ್ರೋಲ್ ಬಂಕ್‌ಗೆ ಹೋದಾಗ ಕಾಂಗ್ರೆಸ್ ಸಂಖ್ಯೆಯನ್ನು ನೋಡಿ ಪೆಟ್ರೋಲ್ ಹಾಕಿಸಿಕೊಳ್ಳಿ ಎಂದು ರಾಹುಲ್‌ ಗಾಂಧಿ ಅವರ ಫೋಟೋವೊಂದನ್ನು ಬಳಸಿ ಟ್ರೋಲ್ ಮಾಡಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಿಚ್‌ನಲ್ಲಿ ಇವಿಎಂ ತಜ್ಞ ರಾಹುಲ್‌ ಗಾಂಧಿ ಅವರು ಡಕ್‌ಔಟ್‌ ಆಗುವ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಆಲ್‌ಔಟ್ ಮಾಡಿದ್ದಾರೆ ಎಂದು ಇನ್ನೊಂದು ಟ್ವೀಟ್ ಮಾಡಲಾಗಿದೆ. ಈ ಎರಡೂ ಟ್ವೀಟ್‌ಗಳು ವೈರಲ್ ಆಗಿವೆ. ಇನ್ನು ತೆಲಂಗಾಣದ ಬಿಜೆಪಿ ಸಹ ಮೊಟ್ಟೆ ಸಿಕ್ಕಿದೆ ಎಂದು ಟ್ರೋಲ್ ಮಾಡಿದೆ.

Rahul Gandhi Trolled for Saying Sir look at Zero

ಧ್ರುವ ರಾಠಿಗೂ ಟ್ರೋಲ್: ಇನ್ನು ಖ್ಯಾತ ಯೂಟ್ಯೂಬರ್ ಧ್ರುವ ರಾಠಿ ಅವರನ್ನು ಸಹ ಟ್ರೋಲ್ ಮಾಡಲಾಗಿದೆ. ಧ್ರುವ ಅವರು ಎಎಪಿ ಪರ ಒಲವು ಹೊಂದಿದ್ದರು. ಈಗ ಅವರಿಗೆ ನೋವಾಗಿರಬೇಕು ಎಂದು ಟ್ರೋಲ್ ಮಾಡಲಾಗಿದೆ. ನನ್ನ ವೀಡಿಯೊಗಳಿಗೆ ವೀವ್ಸ್‌ ಬಂತು. ಆದರೆ ಮತಗಳು ಅಲ್ಲ ಎಂದು ಒಂದು ಮೀಮ್ಸ್‌ನಲ್ಲಿ ಕಾಲೆಳೆಯಲಾಗಿದೆ.

ಎಎಪಿ ಅರವಿಂದ್‌ ಕೇಜ್ರಿವಾಲ್‌ಗೂ ಟ್ರೋಲ್: ಇನ್ನು ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್ ಅವರನ್ನು ಸಹ ಟ್ರೋಲ್ ಮಾಡಲಾಗಿದೆ. ಎಎಪಿ ಹಾಗೂ ಕಾಂಗ್ರೆಸ್‌ ಸೇರಿ ಒಬ್ಬರನ್ನೊಬ್ಬರು ಸೋಲಿಸುತ್ತಿರುವಂತೆ ಚಿತ್ರಗಳನ್ನು ಸೃಷ್ಟಿಸಿ ಟ್ರೋಲ್ ಮಾಡಲಾಗುತ್ತಿದೆ.

ಜಮ್ಮು-ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ವ್ಯಂಗ್ಯ: ಇನ್ನು ದೆಹಲಿಯಲ್ಲಿ ಎಎಪಿ - ಕಾಂಗ್ರೆಸ್‌ ಸೋತು ಬಿಜೆಪಿ ಅಧಿಕಾರಕ್ಕೆ ಬರುತ್ತಿರುವುದು ಖಚಿತವಾದಂತೆಯೇ ಜಮ್ಮು-ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಅವರು ಸಹ ಕಾಂಗ್ರೆಸ್‌ ಮೈತ್ರಿ ಪಕ್ಷಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ. ನಿಮ್ಮ ನಿಮ್ಮಲ್ಲೇ ಇನ್ನಷ್ಟು ಕಿತ್ತಾಡಿಕೊಂಡು ಒಬ್ಬರುನ್ನು ಇನ್ನೊಬ್ಬರು ಮುಗಿಸಿ ಬಿಡಿ ಎಂದು ಆಕ್ರೋಶದಿಂದ ಟ್ವೀಟ್‌ ಮಾಡಿದ್ದಾರೆ. ಇದು ಸಹ ವೈರಲ್‌ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+