ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುರೋಪ್‌ನಿಂದ ಮರಳುತ್ತಿದ್ದಂತೆ ರಾಹುಲ್ ಕಾಂಗ್ರೆಸ್ ಅಧ್ಯಕ್ಷ!

By Prasad
|
Google Oneindia Kannada News

ನವದೆಹಲಿ, ಜನವರಿ 02 : ಕೆಲ ದಿನಗಳ ಯುರೋಪ್ ಪ್ರವಾಸಕ್ಕೆ ತೆರಳಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಭಾರತಕ್ಕೆ ಮರಳುತ್ತಿದ್ದಂತೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆಗಳಿವೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ಮೂರೇ ನಿಮಿಷದಲ್ಲಿ ಜಾಮೀನು ಪಡೆದು ಬಂದಿದ್ದ ರಾಹುಲ್ ಅವರ ಯುರೋಪ್ ಪ್ರವಾಸದ ಉದ್ದೇಶ ತಿಳಿದುಬಂದಿಲ್ಲ. ಆದರೆ, ಹೊರಡುವ ಮುನ್ನ ಟ್ವಿಟ್ಟರ್ ನಲ್ಲಿ 'ನಾನು ಕೆಲ ದಿನಗಳ ಕಾಲ ಯುರೋಪ್ ಪ್ರವಾಸದಲ್ಲಿರುತ್ತೇನೆ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು' ಎಂದು ಟ್ವೀಟ್ ಮಾಡಿ ಅಭಿಮಾನಿಗಳಿಗೆ ಟಾಟಾ ಹೇಳಿದ್ದರು ರಾಹುಲ್.

ಜನವರಿ 8ರ ನಂತರ ಅವರು ಭಾರತಕ್ಕೆ ಮರಳಿದ ಕೂಡಲೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ಜರುಗಲಿದೆ. ಈ ಸಂದರ್ಭದಲ್ಲಿ, ರಾಹುಲ್ ಗಾಂಧಿ ಅವರು ತಮ್ಮ ತಾಯಿ ಸೋನಿಯಾ 1998ರಿಂದ ಅಲಂಕರಿಸಿರುವ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೆ ಏರುವ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. [ಯುಕೆಗೆ ಹಾರಿದ ಕಾಂಗ್ರೆಸ್ ಯುವರಾಜ: ಟ್ವಿಟ್ಟರ್ ನಲ್ಲಿ ಗುಸುಗುಸು]

Rahul Gandhi to be elevated as Congress President soon

ಕಳೆದ ಲೋಕಸಭೆ ಅಧಿವೇಶನದ ಆರಂಭವಾಗುವ ಮೊದಲೇ ರಾಹುಲ್ ಗಾಂಧಿ ಅವರು ಯುರೋಪ್ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೇರುವ ಕುರಿತು ಚರ್ಚೆ ನಡೆದಿತ್ತು. ರಾಹುಲ್ ಈ ಜವಾಬ್ದಾರಿಯನ್ನು ನಿಭಾಯಿಸುವರೆ ಎಂಬ ಸಂಗತಿ ಸೇರಿದಂತೆ, ಈಗ ಇದರ ಕುರಿತು ಮತ್ತೆ ಬಿಸಿಬಿಸಿ ಮಾತುಗಳು ಆರಂಭವಾಗಿವೆ.

"ರಾಹುಲ್ ಜವಾಬ್ದಾರಿ ಹೊರಲು ಸಿದ್ಧರಿದ್ದಾರೆ. ಅಧ್ಯಕ್ಷರಾಗಲು ಅವರು ಸಿದ್ಧರಿಲ್ಲ ಎಂಬ ಮಾತು ಸತ್ಯಕ್ಕೆ ದೂರ. ಏಪ್ರಿಲ್-ಮೇನಲ್ಲಿ ನಡೆಯಲಿರುವ ಅಸ್ಸಾಂ ವಿಧಾನಸಭೆ ಚುನಾವಣೆಯ ನಂತರವೇ ರಾಹುಲ್ ಅಧ್ಯಕ್ಷ ಹುದ್ದೆಗೇರಲಿದ್ದಾರೆ ಎಂಬ ಸುದ್ದಿಯೂ ಸುಳ್ಳು" ಎಂದು ಹೆಸರು ಬಹಿರಂಗ ಪಡಿಸಲು ನಿರಾಕರಿಸಿದ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಬಾಯಿಬಿಟ್ಟಿದ್ದಾರೆ. ['ರಾಹುಲ್, ನೀವು ಹೇಳಿದ್ದಕ್ಕೆಲ್ಲ ಜೈ ಅನ್ನುವವರಲ್ಲ ನಾವು'!]

ಡಿಸೆಂಬರ್ 28ರಂದು ಕಾಂಗ್ರೆಸ್ ಸಂಸ್ಥಾಪನಾ ದಿನ ಇದೇ ಪ್ರಶ್ನೆಯನ್ನು ಸೋನಿಯಾ ಗಾಂಧಿ ಅವರ ಮುಂದೆ ಪತ್ರಕರ್ತರು ಇಟ್ಟಾಗ, 'ನೀವು ಅವರನ್ನೇ ಕೇಳಿರಿ' ಎಂದು ಸೋನಿಯಾ ಗಾಂಧಿ ಮುಗುಮ್ಮಾಗಿ ಉತ್ತರಿಸಿದ್ದರು. ಆದರೆ, ಉಪಾಧ್ಯಕ್ಷ ಸ್ಥಾನದಿಂದ ಭಡ್ತಿ ಪಡೆಯುವ ಕುರಿತು ರಾಹುಲ್ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರುವ ಸುಳಿವು ನೀಡಿಲ್ಲ.

1998ರಲ್ಲಿ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆಯಾಗಿ ಪ್ರಮಾಣ ಸ್ವೀಕರಿಸಿದ್ದರೆ, ರಾಹುಲ್ ಗಾಂಧಿ 2013ರ ಜನವರಿಯಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಸೋನಿಯಾ ಅವರ ಅಧ್ಯಕ್ಷೀಯ ಅವಧಿ ಇದೇ ವರ್ಷ ಡಿಸೆಂಬರ್ ನಲ್ಲಿ ಕೊನೆಯಾಗಲಿದೆ. ಅದಕ್ಕೂ ಮೊದಲೇ ರಾಹುಲ್ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೇರಿಸುವುದು ಪಕ್ಷದ ಉದ್ದೇಶ. [ಆತ್ಮಚರಿತ್ರೆಯಲ್ಲಿ ಸೋನಿಯಾ ವಿರುದ್ಧ ಪವಾರ್ ಬಾಂಬ್!]

English summary
Congress party sources have indicated that party vice-president Rahul Gandhi will be elevated to AICC president soon after his return from Europe tour. Sonia Gandhi has held this post since 1998, longest by any Congress leader.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X