ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ಟಿ : ರಾಹುಲ್ ಮೂರು ಅತ್ಯಮೂಲ್ಯ ಉಪದೇಶಗಳು

By Prasad
|
Google Oneindia Kannada News

Recommended Video

ಜಿ ಎಸ್ ಟಿ ಇಳಿಕೆಯಾದ ನಂತರ ರಾಹುಲ್ ಗಾಂಧಿಯವರ 3 ಸಲಹೆಗಳು | Oneindia Kannada

ನವದೆಹಲಿ ನವೆಂಬರ್ 11 : "ನೀವು ಸರಕಾರದ ಮೇಲೆ ಈ ರೀತಿ ಒತ್ತಡ ಹೇರಿದ್ದರಿಂದಲೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಿಎಸ್ಟಿ ದರಗಳನ್ನು ಇಳಿಸಿದೆ. ಇಲ್ಲದಿದ್ದರೆ ಈ ಸರಕಾರ ನಮ್ಮನ್ನು ಮುಗಿಸಿ ಹಾಕುತ್ತಿದೆ!" ಎಂದು ಟ್ವಿಟ್ಟಿಗರೊಬ್ಬರು ರಾಹುಲ್ ಗಾಂಧಿ ಅವರ ಬೆನ್ನು ತಟ್ಟಿದ್ದಾರೆ.

ನವೆಂಬರ್ 10ನೇ ತಾರೀಖಿನಂದು ಜಿಎಸ್ಟಿ ಕೌನ್ಸಿಲ್ ಸಭೆ ನಡೆಸಿದ ನಂತರ ಶೇ.28ರಷ್ಟು ಜಿಎಸ್ಟಿ ಹೊಂದಿದ್ದ 177 ವಸ್ತುಗಳ ತೆರಿಗೆಯನ್ನು ಇಳಿಸಿ ಕೇಂದ್ರ ಸರಕಾರ ನಿರ್ಣಯ ತೆಗೆದುಕೊಂಡ ನಂತರ ದೇಶದೆಲ್ಲೆಡೆ ಹರ್ಷೋದ್ಘಾರ ಮೂಡಿಬಂದಿದೆ.

ಜಿಎಸ್ಟಿ ಇಳಿಕೆ: ಯಾವ ಯಾವ ಸಾಮಗ್ರಿ ಬೆಲೆ ಕಡಿಮೆಜಿಎಸ್ಟಿ ಇಳಿಕೆ: ಯಾವ ಯಾವ ಸಾಮಗ್ರಿ ಬೆಲೆ ಕಡಿಮೆ

ಇದಕ್ಕೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡದ ರಾಹುಲ್ ಗಾಂಧಿಯವರು, "ನಾವು ಗಬ್ಬರ್ ಸಿಂಗ್ ಟ್ಯಾಕ್ಸ್ ಹೊರಿಸಲು ಬಿಜೆಪಿಗೆ ಬಿಡುವುದಿಲ್ಲ. ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳ ಬೆನ್ನೆಲುಬು ಮುರಿಯಲು ಮತ್ತು ಸಹಸ್ರಾರು ಉದ್ಯೋಗವನ್ನು ಕಸಿದುಕೊಳ್ಳಲು ನಾವು ಅವರಿಗೆ ಅವಕಾಶ ನೀಡುವುದಿಲ್ಲ" ಎಂದು ರಾಹುಲ್ ಅಬ್ಬರಿಸಿದ್ದಾರೆ.

ರೆಸ್ಟೋರೆಂಟ್ ಗಳ ಜಿಎಸ್ಟಿ ಇಳಿಕೆ, ತಿಂಡಿ ಪೋತರಿಗೆ ಖುಷಿ!ರೆಸ್ಟೋರೆಂಟ್ ಗಳ ಜಿಎಸ್ಟಿ ಇಳಿಕೆ, ತಿಂಡಿ ಪೋತರಿಗೆ ಖುಷಿ!

ಜೊತೆಗೆ ಕಾಂಗ್ರೆಸ್ ಉಪಾಧ್ಯಕ್ಷ ಅವರು ದೇಶದ ಅಭಿವೃದ್ಧಿಗಾಗಿ ಕೇಂದ್ರ ಸರಕಾರಕ್ಕೆ ಮೂರು ಅತ್ಯಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಇದನ್ನು ಒಪ್ಪುವುದು ಬಿಡುವುದು ಕೇಂದ್ರ ಸರಕಾರಕ್ಕೆ ಬಿಟ್ಟಿದ್ದು.

ರಾಹುಲ್ ಅವರು ಮೂರು ಉಪದೇಶಗಳು

ರಾಹುಲ್ ಅವರು ಮೂರು ಉಪದೇಶಗಳು

1) ಜಿಎಸ್ಟಿಯ ಮೂಲ ರಚನೆಯಲ್ಲಿಯೇ ಮೂಲಭೂತವಾದ ತಪ್ಪುಗಳಿವೆ. ಅವನ್ನು ಕೇಂದ್ರ ಸರಿಪಡಿಸಿ, ದೇಶಕ್ಕೆ ಅತ್ಯಂತ ಸರಳವಾದ ತೆರಿಗೆ ನೀತಿಯನ್ನು ರೂಪಿಸಬೇಕು.

2) ಹೇಳುವುದೊಂದು ಮಾಡುವುದೊಂದು ಮಾಡಿ ದೇಶದ ಅತ್ಯಮೂಲ್ಯ ಸಮಯವನ್ನು ಹಾಳುಗೆಡವಬೇಡಿ.

3) ನಿಮ್ಮ ಅಸಾಮರ್ಥ್ಯವನ್ನು ಒಪ್ಪಿಕೊಳ್ಳಿ. ನಿಮ್ಮ ದುರಂಕಾರವನ್ನು ತೊಡೆದುಹಾಕಿ ಮತ್ತು ದೇಶದ ಜನತೆಯ ಮಾತಿಗೆ ಕಿವಿಗೊಡಿ.

ಈ ಮೂರು ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವ ಅರುಣೇ ಜೇಟ್ಲಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಏನು ಉತ್ತರ ಕೊಡಲಿದ್ದಾರೆ?

ಕಾಂಗ್ರೆಸ್ ಕೂಡ ತನ್ನ ದುರಹಂಕಾರ ಬಿಟ್ಟಿಲ್ಲ

ಬರೀ ಸಹಲೆಗಳನ್ನು, ಉಪದೇಶಗಳನ್ನು ನೀಡಿದರೆ ಸಾಲುವುದಿಲ್ಲ, ವೈಯಕ್ತಿಕ ದಾಳಿ ಮಾಡದಂತೆ ಅವನ್ನು ನಾವು ಕಟ್ಟುನಿಟ್ಟಾಗಿ ಪಾಲಿಸಬೇಕು. ಬಿಜೆಪಿ ಮಾತ್ರ ಹೇಳುವುದೊಂದು ಮಾಡುವುದೊಂದು ಮಾಡುತ್ತಿಲ್ಲ, ಎಲ್ಲರೂ ಮಾಡುತ್ತಿದ್ದಾರೆ. ಕಾಂಗ್ರೆಸ್ ಕೂಡ ತನ್ನ ದುರಹಂಕಾರ, ಅಸಾಮರ್ಥ್ಯವನ್ನು ಬಿಟ್ಟಿದ್ದರೆ ಬೇರೆಯವರ ನಕಲು ಮಾಡುತ್ತಿಲೇ ಇರುತ್ತಿರಲಿಲ್ಲ ಎಂದು ಒಂದು ಟ್ವೀಟ್ ತೂರಿಬಂದಿದೆ.

ರಾಹುಲ್ ತಾವೇ ಶ್ರೇಯ ತೆಗೆದುಕೊಳ್ಳುತ್ತಿದ್ದಾರೆ

ಜಿಎಸ್ಟಿ ದರಗಳನ್ನು ನಿಗದಿ ಮಾಡುವಾಗ ಜಿಎಸ್ಟಿ ಕೌನ್ಸಿಲ್ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಅವರ ಒಪ್ಪಿಗೆ ಪಡೆದ ನಂತರವೇ ದರಗಳನ್ನು ನಿಗದಿ ಮಾಡಿದೆ. ರಾಹುಲ್ ಗಾಂಧಿಯವರಿಗೆ ಇದೆಲ್ಲ ಮರೆತುಹೋಗಿದೆ. ಎಲ್ಲ ಉತ್ತಮ ಬದಲಾವಣೆಗಳ ಶ್ರೇಯವನ್ನು ತಾವೇ ತೆಗೆದುಕೊಳ್ಳಲು ಹೋಗುತ್ತಿದ್ದಾರೆ ಎಂದು ರಾಜೇಶ್ ಎಂಬುವವರು ವ್ಯಂಗ್ಯವಾಡಿದ್ದಾರೆ.

ಜಿಎಸ್ಟಿ ಸರಿಮಾಡುವಂಥ ಸಲಹೆಗಳೆಲ್ಲಿವೆ?

ರಾಹುಲ್ ಗಾಂಧಿಯವರೆ, ಜಿಎಸ್ಟಿ ಮೂಲ ರಚನೆಯಲ್ಲಿ ತಿದ್ದುಪಡಿ ಮಾಡಬೇಕಿದ್ದರೆ ಅವುಗಳನ್ನು ವಿವರಗಳ ಸಮೇತ ಹಂಚಿಕೊಳ್ಳಿ. ಯಾಕೆ ಅಳ್ತಿದ್ದೀರಾ? ಅಂತಹ ಸಲಹೆಗಳಿದ್ದರೆ ನಾನೇ ನೇರವಾಗಿ ಪ್ರಧಾನ ಮಂತ್ರಿಯವರಿಗೆ ಬರೆಯುತ್ತೇನೆ, ಅವು ಜಾರಿಯಾಗುವಂತೆ ನೋಡಿಕೊಳ್ಳುತ್ತೇನೆ. ನಿಜಕ್ಕೂ ಕೆಲಸ ಮಾಡುವಂಥ ಸಲಹೆಗಳಿಲ್ಲದಿದ್ದರೆ ಬಾಯಿಮುಚ್ಚಿಕೊಂಡಿರಿ, ಕೇಂದ್ರ ಸರಕಾರಕ್ಕೆ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ರಜಿಬ್ ಎಂಬುವವರು ಸವಾಲು ಒಡ್ಡಿದ್ದಾರೆ.

English summary
Rahul Gandhi has given 3 suggestions to the Union government after GST reduction by GST Council Meet. Rahul has suggested Narendra Modi and Arun Jaitley to correct the fundamental flaw in GST architecture to give India a Genuine Simple Tax.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X