ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 'ಮಾನಸಿಕ ಅಸ್ವಸ್ಥರು' : ಉಮಾಭಾರತಿ

ಭೋಪಾಲ್, ಆಗಸ್ಟ್ 27: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 'ಮಾನಸಿಕ ಅಸ್ವಸ್ಥರು' ಎಂದು ಕೇಂದ್ರ ಸಚಿವೆ ಉಮಾಭಾರತಿ ಭಾನುವಾರ ವಾಗ್ದಾಳಿ ನಡೆಸಿದರು. ಆರೆಸ್ಸೆಸ್ ಅನ್ನು ಮುಸ್ಲಿಮ್ ಬ್ರದರ್ ಹುಡ್ ಗೆ ಹೋಲಿಕೆ ಮಾಡಿ ಈಚೆಗೆ ರಾಹುಲ್ ಗಾಂಧಿ ಮಾತನಾಡಿದ್ದರು. ಆ ವಿಚಾರವಾಗಿ ಉಮಾಭಾರತಿ ಆಕ್ರೋಶ ವ್ಯಕ್ತಪಡಿಸಿದರು.

1984ರ ಸಿಖ್ ವಿರೋಧಿ ದಂಗೆಯಲ್ಲಿ ಕಾಂಗ್ರೆಸ್ ನ ಪಾತ್ರವಿಲ್ಲ ಎಂದು ಸಹ ರಾಹುಲ್ ಗಾಂಧಿ ಹೇಳಿದ್ದರು. ಆ ಹೇಳಿಕೆಗೆ ಸ್ವತಃ ಕಾಂಗ್ರೆಸ್ಸಿಗರೇ ಆಘಾತಕ್ಕೆ ಒಳಗಾಗಿದ್ದಾರೆ ಎಂದು ಉಮಾಭಾರತಿ ಹೇಳಿದ್ದಾರೆ.

"ರಾಹುಲ್ ಮಾತನಾಡುವುದೇನು ಹಾಗೂ ಮಾಡುವುದೇನು ಅನ್ನೋದನ್ನು ಸಂಸತ್ ನಲ್ಲಿ ಎಲ್ಲರೂ ನೋಡಿದ್ದಾರೆ. ಆದರೆ ಲಂಡನ್ ನಲ್ಲಿ ನೀಡಿದ ಹೇಳಿಕೆ ಕಾಂಗ್ರೆಸ್ ನವರಿಗೆ ಅಚ್ಚರಿ ತಂದಿದೆ. ಸಿಖ್ ವಿರೋಧಿ ದಂಗೆ ಬಗೆಗಿನ ರಾಹುಲ್ ಗಾಂಧಿ ಹೇಳಿಕೆ ಹಸಿ ಸುಳ್ಳು. ಆ ಗಲಭೆಗೆ ಸಂಬಂಧಿಸಿರುವಂತೆ ದಾಖಲಾಗಿರುವ ದೂರುಗಳೆಲ್ಲ ಕಾಂಗ್ರೆಸ್ ನಾಯಕರ ವಿರುದ್ಧವೇ ಇವೆ" ಎಂದರು.

Rahul Gandhi mentally unstable: Uma Bharti

"ರಾಹುಲ್ ಗಾಂಧಿ ಮಾನಸಿಕ ಅಸ್ವಸ್ಥರು. ಅವರಿಗೆ ಜ್ಞಾನವನ್ನು ದಯ ಪಾಲಿಸಲಿ ಎಂದು ಆ ದೇವರನ್ನು ಕೇಳಿಕೊಳ್ತೀನಿ" ಎಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಹೇಳಿದರು.

ಆರೆಸ್ಸೆಸ್ ನಿಂದ ಭಾರತದ ಮೂಲ ಗುಣ ಬದಲಿಸುವ ಪ್ರಯತ್ನ ನಡೆಯುತ್ತಿದೆ ಎಂದು ಲಂಡನ್ ನಲ್ಲಿ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು. ಆ ಹಿನ್ನೆಲೆಯಲ್ಲಿ ಮಾತನಾಡಿದ ಉಮಾಭಾರತಿ, ಕಾಂಗ್ರೆಸ್ ನ ಚುಕ್ಕಾಣಿಯನ್ನು ಮೋತಿಲಾಲ್ ನೆಹರೂ, ಜವಾಹರ್ ಲಾಲ್ ನೆಹರೂ, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅಂಥವರು ಹಿಡಿದಿದ್ದಾರೆ. ಆದರೆ ಈಗ ಮಾನಸಿಕ ಸ್ಥಿಮಿತ ಇಲ್ಲದ ವ್ಯಕ್ತಿಯೊಬ್ಬರು ಪಕ್ಷವನ್ನು ನಡೆಸುತ್ತಿದ್ದಾರೆ ಎಂದರು.

1984ರಲ್ಲಿ ಏನಾಗಿದೆ ಎಬ ಬಗ್ಗೆ ರಾಹುಲ್ ಗಾಂಧಿಗೆ ಗೊತ್ತಿಲ್ಲ. ಏನು ಹಾಗೂ ಎಲ್ಲಿ ಮಾತನಾಡಬೇಕು ಅನ್ನೋದು ಗೊತ್ತಿಲ್ಲದ ಮಾನಸಿಕ ಅನಾರೋಗ್ಯ ಇರುವ ವ್ಯಕ್ತಿ ಅವರು ಎಂದು ಕಟುವಾಗಿ ಟೀಕೆ ಮಾಡಿದರು ಉಮಾಭಾರತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+